Thursday, August 28, 2025
HomeUncategorized‘ಅಶೋಕನ ಹೆಸರಿಗಾದರೂ ಮರ್ಯಾದೆ ಬೇಡವೇ?’ : ಹೆಚ್​ಡಿಕೆ

‘ಅಶೋಕನ ಹೆಸರಿಗಾದರೂ ಮರ್ಯಾದೆ ಬೇಡವೇ?’ : ಹೆಚ್​ಡಿಕೆ

1998ರ ವಿಧಾನಸಭೆ ಉಪ ಚುನಾವಣೆಯಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ಹಾಲಿ ಕಂದಾಯ ಸಚಿವ ಆರ್.ಅಶೋಕ್ ಸ್ಪರ್ಧಿಸಿದಾಗ ಯಲಹಂಕದಿಂದ ಬಂದಿದ್ದ 1,000 ಕಾರ್ಯಕರ್ತರು ತಲಾ 5ರಿಂದ 10 ಕಳ್ಳವೋಟು ಹಾಕಿ ಅವರನ್ನು ಗೆಲ್ಲಿಸಿದ್ದರು ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ರಾಜ್ಯದ ಮೇಲೆ ರಾಜ್ಯ ಗೆಲ್ಲುತ್ತಿರುವ ಬಿಜೆಪಿ ಗೆಲುವಿನ ಗುಟ್ಟು ಈಗ ರಟ್ಟಾಗಿದೆ. ಅಡ್ಡದಾರಿಯ ಕೊಚ್ಚೆಯಲ್ಲಿ ಅರಳುವ ಕಮಲವನ್ನು ಮುಡಿದುಕೊಂಡು ಬೀಗುವವರ ʼಕಳ್ಳವೋಟಿನ ಕಥೆʼ ನಿಮ್ಮ ಮಾಜಿ ಶಾಸಕರೇ ಬಯಲು ಮಾಡಿದ್ದರೂ ಇನ್ನೂ ಕುರ್ಚಿಯಲ್ಲಿರಲು ಅದ್ಹೇಗೆ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆ ಸಾಮ್ರಾಟರೇ? ಅಶೋಕನ ಹೆಸರಿಗಾದರೂ ಮರ್ಯಾದೆ ಬೇಡವೇ? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಆಪರೇಷನ್ ಕಮಲಕ್ಕೆ ಜನ್ಮಕೊಟ್ಟು ಅದನ್ನು ನಿರ್ಲಜ್ಜವಾಗಿ ʼರಾಷ್ಟ್ರೀಕರಣʼ ಮಾಡಿದ ಬಿಜೆಪಿ ಭಾರತಕ್ಕೆ ಅಂಟಿದ ಕಳಂಕ, ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ ಎಂದು ಲೇವಡಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments