Sunday, August 24, 2025
Google search engine
HomeUncategorizedಮದುವೆಗೆ ಹೊರಟಿದ್ದ 9 ಮಂದಿ ಮಸಣಕ್ಕೆ

ಮದುವೆಗೆ ಹೊರಟಿದ್ದ 9 ಮಂದಿ ಮಸಣಕ್ಕೆ

ಧಾರವಾಡ : ಶುಭಶನಿವಾರ ರಾಜ್ಯದ ಪಾಲಿಗೆ ಕರಾಳವಾಗಿ ಪರಿಣಮಿಸಿದೆ. ಪ್ರತ್ಯೇಕ ಭೀಕರ ಅಪಘಾತದಲ್ಲಿ 11 ಜನ ದುರ್ಮರಣಕ್ಕೀಡಾಗಿದ್ದಾರೆ.ಧಾರವಾಡದಲ್ಲಿ ಮದುವೆ ಮಂಟಪದಿಂದ ಮನೆಗೆ ಹೊರಟಿದ್ದ 9 ಜನ ಸಾವಿಗೀಡಾಗಿದ್ದಾರೆ. ತುಮಕೂರಿನಲ್ಲಿ ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿದ್ದಾರೆ.ಧಾರವಾಡ ತಾಲೂಕಿನ ನಿಗದಿ ಗ್ರಾಮದ ದಾಸನಕೊಪ್ಪ‌ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಕ್ರೂಸರ್‌ ಮರಕ್ಕೆ ಡಿಕ್ಕಿಯಾಗಿ 7 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇನ್ನಿಬ್ಬರು ಆಸ್ಪತ್ರೆಯಲ್ಲಿ  ಸಾವಿಗೀಡಾಗಿದ್ದಾರೆ.

ಇನ್ನೂ 11 ಜನ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರಿದಿದೆ.ಮನಸೂರ ಗ್ರಾಮದ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ರಾತ್ರಿ 1 ಗಂಟೆಗೆ ಅರಿಶಿನ ಹಾಗೂ ನಿಶ್ಚಿತಾರ್ಥ ಮುಗಿಸಿ ಮನೆಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ.ಚಾಲಕನ ಅಜಾಗರೂಕತೆಯೇ ಈ ಘಟನೆಗೆ ಕಾರಣ ಎನ್ನಲಾಗಿದೆ.

ಅಪಘಾತದಿಂದಾಗಿ ಸಾಮೂಹಿಕವಾಗಿ ಮಂಟಪದಲ್ಲಿ ಅಕ್ಷತಾ ಕಾರ್ಯ ಆಗಬೇಕಿದ್ದ ಎಲ್ಲ ಕಾರ್ಯಕ್ರಮ ಸ್ಥಗಿತಗೊಳಿಸಿ,‌ ಅಲ್ಲಿದ್ದ ಎಲ್ಲಾ ಅಡುಗೆ ಪಾತ್ರೆಗಳನ್ನು ವಾಪಸ್ ಕಳಿಸಿದ್ರು. ಅವರೆಲ್ಲರ ಕಣ್ಣಲ್ಲಿ ನೀರು ನೋಡಿ ಜೀವ ಮರಗಿ ಹೋಯ್ತು. ಇನ್ನು ಕೆಲವರು ತಮ್ಮವರ ಶವಗಳನ್ನ ತಮ್ಮೂರಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿದ್ರೆ, ನಿಗದಿ ಹಾಗೂ ಬೆನಕನಕಟ್ಟಿ ಗ್ರಾಮದಲ್ಲಿ ಕೆಲವರನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಯಿತು. ಇನ್ನು ಸ್ಥಳೀಯ ಶಾಸಕ ನಿಂಬಣ್ಣವರ ಕೂಡ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.‌14 ವರ್ಷದ ಅನನ್ಯ, 13 ವರ್ಷದ ಹರೀಶ್, 34 ವರ್ಷದ ಶಿಲ್ಪಾ, 60 ವರ್ಷದ ನೀಲವ್ವ, 20 ವರ್ಷದ ಮಧುಶ್ರಿ, 11 ವರ್ಷದ ಮಹೇಶ್ವರಯ್ಯ, 35 ವರ್ಷದ ಶಂಬುಲಿಂಗಯ್ಯ, ಚನ್ನವ್ವ, ಮತ್ತು ಮಂಜುಶ್ರಿ ಮೃತರಾಗಿದ್ದು,ಮದುವೆ ಸಂಭ್ರಮದ್ಲಲಿರಬೇಕಾದವರು ಮಸಣ ಸೇರಿದ್ದು ಮಾತ್ರ ವಿಪರ್ಯಾಸ

ಇನ್ನೊಂದೆಡೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಶೆಟ್ಟಿಗೊಂಡನಹಳ್ಳಿ ಬಳಿ ಎರಡು ಬೈಕ್​​ಗಳು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಸ್ಥಳಕ್ಕೆ ಮಾಯಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

RELATED ARTICLES
- Advertisment -
Google search engine

Most Popular

Recent Comments