Wednesday, September 3, 2025
HomeUncategorizedಬಿಬಿಎಂಪಿ ಚುನಾವಣೆಗೆ ಸರ್ಕಾರ ಮತ್ತು ಪಕ್ಷ ಸಿದ್ಧ

ಬಿಬಿಎಂಪಿ ಚುನಾವಣೆಗೆ ಸರ್ಕಾರ ಮತ್ತು ಪಕ್ಷ ಸಿದ್ಧ

ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆಸುವಂತೆ ಸರ್ವೋಚ್ಛ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ನಮ್ಮ ಸರ್ಕಾರ ಸ್ವಾಗತ ಮಾಡುತ್ತದೆ. ಚುನಾವಣೆ ನಡೆಸಲು ನಮ್ಮ ಸರ್ಕಾರ ಮತ್ತು ಪಕ್ಷ ಸಿದ್ಧವಾಗಿದೆ. ಮೀಸಲಾತಿ ನಿಗದಿ ಮಾಡಲು ನ್ಯಾಯಾಲಯ ಎಂಟು ವಾರಗಳ ಕಾಲ ಸಮಯ ನೀಡಿದೆ. ಸುಪ್ರೀಂ ಆದೇಶಕ್ಕೆ ಸರ್ಕಾರ ಬದ್ಧವಾಗಿದೆ.

ಬಿಬಿಎಂಪಿ ಚುನಾವಣೆಗೆ ನಮ್ಮ ಪಕ್ಷ ಈಗಾಗಲೇ ಬರದ ಸಿದ್ಧತೆ ಮಾಡಿಕೊಂಡಿದೆ. ಪಕ್ಷದ ಸಂಘಟನೆ ಭದ್ರವಾಗಿದ್ದು, ಪೇಜ್ ಪ್ರಮುಖ್ ಕಾರ್ಯಕೂಡ ಮುಕ್ತಾಯವಾಗಿದೆ. ಈ ಬಾರಿ ಬಿಜೆಪಿ ಭಾರಿ ಬಹುಮತದೊಂದಿದೆ ಬಿಬಿಎಂಪಿಯಲ್ಲಿ ಅಧಿಕಾರದ ಚುಕ್ಕಾಣೆ ಹಿಡಿಯಲಿದೆ ಎಂಬ ಧೃಡ ವಿಶ್ವಾಸ ನನಗಿದೆ.

ನಾವು ಈಗಾಗಲೇ ವಾರ್ಡ್ ಮಟ್ಟದಲ್ಲಿ ಸಭೆ, ಚುನಾವಣಾ ಕಾರ್ಯತಂತ್ರ, ಜನರ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ನೀಲ ನಕ್ಷೆ ಸಿದ್ಧಪಡಿಸಿದ್ದೇವೆ. ರಾಜ್ಯ ಸರ್ಕಾರದ ಸಾಧನೆ ಮತ್ತು ನಮ್ಮ ಪಕ್ಷದ ಗಟ್ಟಿ ಸಂಘಟನೆ ಒಂದುಗೂಡಿ ಬಿಬಿಎಂಪಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದು, ಬೆಂಗಳೂರು ಮಹಾನಗರದ ಜನತೆಯ ಕೂಗಿಗೆ ನಾವು ದನಿಯಾಗಲಿದ್ದೇವೆ.

RELATED ARTICLES
- Advertisment -
Google search engine

Most Popular

Recent Comments