Thursday, August 28, 2025
HomeUncategorizedಮಹಾಮಳೆ ಅವಾಂತರ: ಫೀಲ್ಡ್​​ಗೆ ಇಳಿದ ಸಿಎಂ

ಮಹಾಮಳೆ ಅವಾಂತರ: ಫೀಲ್ಡ್​​ಗೆ ಇಳಿದ ಸಿಎಂ

ಬೆಂಗಳೂರು : ಸಿಲಿಕಾನ್​​ ಸಿಟಿಯಲ್ಲಿ ಮಳೆಯ ಅವಾಂತರ ಹಿನ್ನೆಲೆ ಆರ್ ಆರ್ ನಗರಕ್ಕೆ ಸಿಎಂ ಬಸವರಾಜ್​​ ಬೊಮ್ಮಾಯಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ನಿನ್ನೆ ರಾತ್ರಿ ರಾಜರಾಜೇಶ್ವರಿ ನಗರ  ಸುರಿದ ಮಳೆಗೆ ನಗರ ಜನರ ಜೀವನ ಅಸ್ತವ್ಯಸ್ತಗೊಂಡ ಸ್ಥಳಕ್ಕೆ ಭೇಟಿ ನೀಡಿ, ಜನರ ಹತ್ತಿರ ಮಾತನಾಡಿ ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ರಾಜಕಾಲುವೆ ಓವರ್ ಫ್ಲೋ ಆಗಿ ನೀರು ನುಗ್ಗಿದೆ. ಇದು ಅತಿ ದೊಡ್ಡ ರಾಜಕಾಲುವೆ ಸುಮಾರು 300 ಮೀಟರ್ ಇದೆ. ಇದರಿಂದ ಅದು ಓವರ್ ಫ್ಲೋ ಆಗುತ್ತಿದೆ. ಕಳೆದ ಬಾರಿ ಮಾಡಿದ ಕಾಮಗಾರಿ ಪೂರ್ಣವಾಗಿಲ್ಲ ಹೀಗಾಗಿ ಆದಷ್ಟು ಬೇಗ ಕ್ರಿಯಾ ಯೋಜನೆ ಕೆಲಸ ಪ್ರಾರಂಭವಾಗುತ್ತದೆ ಎಂದರು.

ಇನ್ನು ಕಾಮಗಾರಿ ಕೈಗೆತ್ತಿಕೊಳ್ಳಲು ಡಿಪಿಆರ್ ಆಗಿದೆ. ಈ ವಾರ್ಡಿನಲ್ಲಿ ಸೆಕೆಂಡರಿ ಮತ್ತು ಪ್ರೈಮರಿ ಡ್ರೈನೇಜ್​​ಗಳ ಕಾಮಗಾರಿ ಆರಂಭ ಮಾಡ್ತಾರೆ. ಏರಿಯಾ ಒಳಗೆ ಇರುವ ಡ್ರೈನೇಜ್ ಕಾಮಗಾರಿಯನ್ನು ಬಿಬಿಎಂಪಿ ಮಾಡ್ತಾರೆ
ರಾಜಕಾಲುವೆ ಕಾಮಗಾರಿಯನ್ನು ಸರ್ಕಾರ ಮಾಡುತ್ತದೆ. ಇದು ಹಲವಾರು ವರ್ಷಗಳಿಂದ ಆಗಬೇಕಾದ ಕಾಮಗಾರಿ ಇದನ್ನು ನಾವು ಈಗ ಕೈಗೆತ್ತಿಕೊಂಡಿದ್ದೇವೆ ಎಂದು ತಿಳಿಸಿದರು.

ಅಷ್ಟೆಅಲ್ಲದೇ ನೀರು ನುಗ್ಗಿದ ‌ಮನೆಗೆ 25 ಸಾವಿರ ತಗ್ಗು ಪ್ರದೇಶದ ನಿವಾಸಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ನಗರದ 90MM ಮಳೆಯಾದಾಗ ಇಂತಹ ಸಮಸ್ಯೆ ಆಗುತ್ತದೆ. ರಾಜಕಾಲುವೆ ಪಕ್ಕದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. 800 ಕಿಮೀ ರಾಜಕಾಲುವೆಯಲ್ಲಿ 400 ಕಿಮೀ ಕಾಲುವೆ ಮಾತ್ರ ಆಗಿದೆ. ರಾಜಕಾಲುವೆ ಸಮಸ್ಯೆ ಬಗೆಹರಿಯೋದಿಲ್ಲ ಅದಕ್ಕೆ ಕಾಮಗಾರಿ ಆರಂಭ ಮಾಡುತ್ತಿದ್ದೇವೆ. ಹಾಗೂ ರಾಜಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿರೋರನ್ನ ಪಟ್ಟಿ ಮಾಡಲಾಗಿದೆ. ಈಗಾಗಲೇ ಸಾಕಷ್ಟು ತೆರವು ಮಾಡಲಾಗಿದೆ, ಇನ್ನು ಉಳಿದ ಕಟ್ಟಡಗಳನ್ನು ತೆರವು ಮಾಡುತ್ತೇವೆ ಎಂದರು.

RELATED ARTICLES
- Advertisment -
Google search engine

Most Popular

Recent Comments