Monday, August 25, 2025
Google search engine
HomeUncategorizedಆರ್ಥಿಕ ಸಂಕಷ್ಟಕ್ಕೆ ಸಿಲುಕಿ ‘ಲಂಕಾ’ ದಹನ..!

ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ‘ಲಂಕಾ’ ದಹನ..!

ಶ್ರೀಲಂಕಾ : ಭೀಕರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ ಧಗಧಗಿಸುತ್ತಿದೆ. ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಬೆಂಬಲಿಗರು, ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ ನಂತರ ಹಿಂಸಾಚಾರ ತೀವ್ರ ಸ್ವರೂಪಕ್ಕೆ ತಿರುಗಿದೆ. ಕೊಲಂಬೊ ಮತ್ತು ದೇಶದ ಇತರ ಭಾಗಗಳಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 250 ಜನರು ಗಾಯಗೊಂಡಿದ್ರೆ. ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಈ ನಡುವೆ ಮಧ್ಯೆ ಪ್ರವೇಶಿಸಿರೋ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ, ಹಿಂಸಾಚಾರ ಮತ್ತು ಸೇಡಿನ ಕೃತ್ಯಗಳನ್ನು ನಿಲ್ಲಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ. ಅಲ್ಲದೆ ದೇಶ ಎದುರಿಸುತ್ತಿರುವ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸುವ ಪ್ರತಿಜ್ಞೆ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರೋ ಅಧ್ಯಕ್ಷ ಗೋಟಬಯ, ಸಾಂವಿಧಾನಿಕವಾಗಿ ಮತ್ತು ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಒಮ್ಮತದ ಮೂಲಕ ರಾಜಕೀಯ ಸ್ಥಿರತೆಯನ್ನು ಪುನಃಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಹಲವು ಮಾಜಿ ಮಂತ್ರಿಗಳು ಮತ್ತು ರಾಜಕಾರಣಿಗಳ ಮನೆಗಳನ್ನು ಸುಟ್ಟು ಹಾಕಿದ ನಂತರ ಗೋಟಬಯ ಮಾಡಿದ ಮೊದಲ ಟ್ವೀಟ್ ಇದಾಗಿದೆ.

ಈ ನಡುವೆ ಶ್ರೀಲಂಕಾ ಸಂಸತ್ತಿನಲ್ಲಿ ಮೂರನೇ ಅತಿದೊಡ್ಡ ರಾಜಕೀಯ ಪಕ್ಷವಾದ ಪ್ರಮುಖ ವಿರೋಧ ಪಕ್ಷ ಮಾರ್ಕ್ಸ್‌ವಾದಿ ಪಕ್ಷ JVP ಪ್ರತಿಭಟನಾಕಾರರನ್ನು ಅತ್ಯಂತ ಶಾಂತಿಯುತವಾಗಿರುವಂತೆ ಒತ್ತಾಯಿಸಿದೆ. ಈ ನಡುವೆ ಮಹಿಂದಾ ರಾಜಪಕ್ಸ ಸೇನಾ ಪಡೆಗಳ ಬಿಗಿ ಭದ್ರತೆಯ ನಡುವೆ ಅಧಿಕೃತ ನಿವಾಸ ಟೆಂಪಲ್ ಟ್ರೀಸ್‌’ನಿಂದ ಹೊರಗೆ ಕರೆದುಕೊಂಡು ಬರಲಾಗಿತ್ತು. ಸದ್ಯ ನೌಕಾ ನೆಲೆಯೊಂದರಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅದರ ಬಗ್ಗೆ ಖಚಿತ ಮಾಹಿತಿ ಇಲ್ಲ.

ಇನ್ನು, ಸಂಘರ್ಷ ಪೀಡಿತ ಶ್ರೀಲಂಕಾಕ್ಕೆ ಭಾರತ ಸೇನಾ ಪಡೆಗಳನ್ನು ರವಾನಿಸಲಿವೆ ಎಂಬ ಕೆಲವು ಮಾಧ್ಯಮಗಳ ವರದಿಗಳನ್ನು ಭಾರತದ ಹೈ ಕಮಿಷನ್ ಸಾರಾಸಗಟಾಗಿ ನಿರಾಕರಿಸಿದೆ. ಸ್ಥಳೀಯ ಸಾಮಾಜಿಕ ಮಾಧ್ಯಮಗಳ ಊಹಾಪೋಹಗಳು ‘ನಕಲಿ ಮತ್ತು ಶುದ್ಧ ಸುಳ್ಳು’ ಎಂದು ಕೊಲಂಬೋದಲ್ಲಿನ ಭಾರತೀಯ ಹೈ ಕಮಿಷನ್ ಸ್ಪಷ್ಟನೆ ನೀಡಿದೆ.

RELATED ARTICLES
- Advertisment -
Google search engine

Most Popular

Recent Comments