Monday, August 25, 2025
Google search engine
HomeUncategorizedಮೋದಿ ನಾಯಕತ್ವದಲ್ಲಿ ಚುನಾವಣೆ ಗೆಲ್ಲುತ್ತೇವೆ ಅನ್ನೋದು ಮೂರ್ಖತನ : ಸಂಸದ ಸಂಗಣ್ಣ

ಮೋದಿ ನಾಯಕತ್ವದಲ್ಲಿ ಚುನಾವಣೆ ಗೆಲ್ಲುತ್ತೇವೆ ಅನ್ನೋದು ಮೂರ್ಖತನ : ಸಂಸದ ಸಂಗಣ್ಣ

ಕೊಪ್ಪಳ : ಕೇವಲ ಮೋದಿ ನಾಯಕತ್ವದಲ್ಲಿ ನಾವು ಗೆಲ್ಲುತ್ತೇವೆ ಅನ್ನೋದು ಮೂರ್ಖತನ ಎಂದು ಕೊಪ್ಪಳದಲ್ಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ ಸ್ವಪಕ್ಷದ ವಿರುದ್ದವೇ ಹೇಳಿಕೆ ನೀಡಿದ್ದಾರೆ.

ಪಟ್ಟಣದ ಹೊರ ವಲಯದ ದೇವಿ ಕ್ಯಾಂಪಿನ ಶ್ರೀದೇವಿ ಬೀರೇಶ್ವರ ಗುಡ್ಡದ ಕಲ್ಯಾಣ ಮಂಟಪದಲ್ಲಿ ನಡೆದ  ಬಿಜೆಪಿ ಜಿಲ್ಲಾ ಘಟಕದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಜಾದೂ ಮುಂದಿನ ಚುನಾವಣೆಯಲ್ಲಿ ಕೆಲಸ ಮಾಡಲ್ಲ. ಪದೇ ಪದೇ ಮೋದಿ ಹೆಸರಿನಡಿ ಮತ ಹಾಕಲು ಜನರೇನು ದಡ್ಡರಲ್ಲ. ಆಯಾ ಜಿಲ್ಲೆಯ ಸಚಿವರು, ಶಾಸಕರು ರಾಜ್ಯ ಸರಕಾರದ ಯೋಜನೆ, ಕಾರ್ಯ ಕ್ರಮಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಿದಾಗ ಮಾತ್ರ ಮುಂದಿನ ಚುನಾವಣೆ ಗೆಲ್ಲಲು ಸಾಧ್ಯವಾಗಲಿದೆ ಎಂದು ಹೇಳಿದರು.

ಅದುವಲ್ಲದೇ  ಕಾರ್ಯಕಾರಣಿಯಲ್ಲಿ ಬಿಜೆಪಿ‌ ಸಂಸದರಿಂದಲೇ ಮೋದಿ ನಾಯಕ್ವತದ ಬಗ್ಗೆ ಮಾತುಗಳನ್ನಾಡುವಾಗ ಮೋದಿ ಅವರ ನಾಯಕತ್ವದಲ್ಲಿ ಚುನಾವಣೆ ಗೆಲ್ತೀವಿ ಅನ್ನೋದು ಮೂರ್ಖತನ, ಇದು ನನ್ನ ಭಾವನೆ ಎನ್ನುತ್ತಲೇ ವೇದಿಕೆ ಮೇಲೆ ಇದ್ದ ಬಿಜೆಪಿ ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ. ಯಾರ ಹೇಳಿದಾರೋ ಏನೋ,ಯಾವುದೇ ಪಟ್ಟಣದಲ್ಲಿ ಕಾರ್ಯಕ್ರಮ ನಡೆದರೂ ರಾಷ್ಟ್ರೀಯ ನಾಯಕರ ಬ್ಯಾನರ್ ಕಾಣತ್ತದೆ. ಪೋಟೋ ಹಾಕೋದು ತಪ್ಪೇನಿಲ್ಲ. ಆದರೆ, ಅದಕ್ಕೊಂದು‌ ನೀತಿ ನಿಯಮ‌ ಇರುತ್ತದೆ. ಇದೆಲ್ಲವನ್ನು ನೋಡುತ್ತಿದ್ದರೆ ಹುಚ್ಚತನ ಎನ್ನಿಸುತ್ತದೆ ಎಂದರು.

ಇನ್ನು ಚುನಾವಣೆ ಗೆಲ್ಲೋದು ಅಷ್ಟು ಸರಳ ಇಲ್ಲ, ಅದಕ್ಕೆ ಅದರದ್ದೇ ಆದ ತಂತ್ರಗಾರಿಕೆ ಇದೆ. ಕೊಪ್ಪಳ ವಿಧಾನಸಭೆ ಕ್ಷೇತ್ರದಲ್ಲಿ 45 ಸಾವಿರ ಮುಸ್ಲಿಂ ವೋಟ್,40 ಸಾವಿರ ಕುರುಬರ ವೋಟ್ ಇದೆ ಹೀಗಾಗಿ ಕಾಂಗ್ರೆಸ್​​ನವರು ಗೆಲ್ಲುತ್ತಾರೆ ಎಂದು ಕಳೆದ ಎರಡು ದಿನಗಳ ಹಿಂದೆ ನಡೆದ ಕಾರ್ಯಕಾರಣಿಯಲ್ಲಿ‌ ಮಾತನಾಡಿದ ವಿಡಿಯೋ ಇದೀಗ  ವೈರಲ್ ಆಗಿದೆ.

RELATED ARTICLES
- Advertisment -
Google search engine

Most Popular

Recent Comments