Sunday, August 24, 2025
Google search engine
HomeUncategorizedಸವಾರರ ಬಲಿಗಾಗಿ ಕಾಯ್ತಿವೆ ಡೆಡ್ಲಿ ಗುಂಡಿಗಳು..!

ಸವಾರರ ಬಲಿಗಾಗಿ ಕಾಯ್ತಿವೆ ಡೆಡ್ಲಿ ಗುಂಡಿಗಳು..!

ಬೆಂಗಳೂರು: ಸಿಲಿಕಾನ್​ ಸಿಟಿಯಂತಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರೋ ಬೆಂಗಳೂರು. ಇದೀಗ ರಸ್ತೆ ಗುಂಡಿಗಳಿಂದಲೂ ಕುಖ್ಯಾತಿ ಪಡೆದಿದೆ. ಮಳೆಗಾಲದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಳ್ಳುವುದು ಮಾಮೂಲಿ. ಆದ್ರೆ, ಬೆಂಗಳೂರಿನ ರಸ್ತೆ ಗುಂಡಿಗಳಿಂದ ಜನ ನರಕ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ತಂತ್ರಜ್ಞಾನ ಲಭ್ಯವಿದೆ. ಆದರೆ, ಅದನ್ನು ಬಳಸಿಕೊಳ್ಳಲು ಬಿಬಿಎಂಪಿ ಮುಂದಾಗುತ್ತಿಲ್ಲ.

KPTCL, ಬೆಸ್ಕಾಂ, ಜಲಮಂಡಳಿ ಮನಸೋ ಇಚ್ಛೆ ರಸ್ತೆಗಳನ್ನು ಅಗೆದು ಹಾಕುತ್ತಿವೆ. ಇದರಿಂದ ಹೊಸದಾಗಿ ಡಾಂಬರು ಹಾಕಿ ಅಭಿವೃದ್ಧಿಪಡಿಸಿದ ರಸ್ತೆಗಳಲ್ಲೂ ಮತ್ತೆ ಗುಂಡಿಗಳು ಬಿದ್ದಿವೆ. ತೇಪೆ ಹಾಕಿದ್ದ ಗುಂಡಿಗಳು ಸಹ ಕಳಪೆ ಕಾಮಗಾರಿಯಿಂದ ಬಾಯ್ತೆರೆದಿವೆ. ಪಾಲಿಕೆ ರಸ್ತೆ ಗುಂಡಿಗಳನ್ನ ಮುಚ್ಚುವ ಆಸಕ್ತಿ ತೋರುತ್ತಿಲ್ಲ. ಪಾಲಿಕೆ ನೂತನ ಆಯುಕ್ತ ತುಷಾರ್ ಗಿರಿನಾಥ್, ಕೂಡಲೇ ಗುಂಡಿಗಳನ್ನ ಮುಚ್ಚಿ ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಸದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಧಾನಿ ಮಾರ್ಯದೆ ಹಾಳಾಗಿದೆ. ಇದೀಗ ರಸ್ತೆ ಗುಂಡಿಗಳ ಸರದಿ.. ಕಳೆದ ವರ್ಷ ರಸ್ತೆ ಗುಂಡಿಗಳಿಗೆ ಹಲವು ಮಂದಿ ಪ್ರಾಣವನ್ನ ಕಳೆದುಕೊಂಡಿದ್ರು. ಆದರೂ ಎಚ್ಚೆತ್ತುಕೊಳ್ಳದ ಪಾಲಿಕೆ, ಗುಂಡಿ ಮುಚ್ಚುವ ನೆಪದಲ್ಲಿ ಹಣ ಹೊಡೆಯುತ್ತಿರೋದು ನಿಜಕ್ಕೂ ದುರಂತವೇ ಸರಿ.

RELATED ARTICLES
- Advertisment -
Google search engine

Most Popular

Recent Comments