Saturday, August 23, 2025
Google search engine
HomeUncategorizedಹಾಲಿ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿದ್ದಾರೆ : ಶ್ರೀರಾಮುಲು

ಹಾಲಿ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿದ್ದಾರೆ : ಶ್ರೀರಾಮುಲು

ಬಳ್ಳಾರಿ : ಅನೇಕರು ಕಾಂಗ್ರೆಸ್ ಬಿಟ್ಟು ಬಿಜೆಪಿಗರ ಬರಲು ಸಂಪರ್ಕ ಮಾಡ್ತಾ ಇದ್ದಾರೆ ಎಂದು ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಮಂದಿ ರಾಜಕೀಯ ಮುದ್ಸದ್ದಿಗಳು, ಹಾಲಿ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಮಧ್ಯವರ್ತಿಗಳನ್ನ ನನ್ನ ಬಳಿ ಕಳಿಸಿ ಅಣ್ಣವರೇ ನಾನು ಪಾರ್ಟಿ ಸೇರಬೇಕು ಅಂತಾ ದಂಬಾಲು ಬಿದ್ದಿದ್ದಾರೆ. ಬಿಜೆಪಿಯ ಮಿಷನ್ 150 ಕ್ಕೆ ಕಲ್ಯಾಣ ಕರ್ನಾಟಕದಿಂದ ಅತಿ ಹೆಚ್ಚು ಶಾಸಕರನ್ನ ಕೊಡುತ್ತೇವೆ. ನನ್ನ ಸಂಪರ್ಕದಲ್ಲೂ ಅನೇಕರಿದ್ದಾರೆ ಸಮಯ ಬಂದಾಗ ರಿವೀಲ್ ಮಾಡುವೆ ಎಂದು ಹೇಳಿದರು.

ಅದುವಲ್ಲದೇ, ಈಗಾಗಲೇ ಈ ವಿಚಾರವನ್ನ ಸಿಎಂ ಸೇರಿದಂತೆ ವರಿಷ್ಠರ ಗಮನಕ್ಕೆ ತಂದಿರುವೆ ಹೈಕಮಾಂಡ್ ಗ್ರಿನ್ ಸಿಗ್ನಲ್ ಕೊಟ್ಟ ಬಳಿಕ ಎಲ್ಲರನ್ನೂ ಬಿಜೆಪಿಗೆ ಕರೆತರುವೆ. 2023 ರ ಚುನಾವಣೆಯನ್ನ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮಾಡ್ತೇವೆ. 2023 ರ ಚುನಾವಣೆಯನ್ನ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮಾಡ್ತೇವೆ ಸಚಿವ ಸಂಪುಟ ರಚನೆಯೋ ವಿಸ್ತರಣೆಯೋ ಮಾಹಿತಿ ಇಲ್ಲ‌ ಎಂದರು.

ಇನ್ನು, ಸಂಸದೆ ಸುಮಲತಾ ಬಿಜೆಪಿ ಸೇರುವ ವಿಚಾರವಾಗಿ ಮಾತನಾಡಿದ ಅವರು, ಸುಮಲತಾ ಅಂಬರೀಶ್ ಒಬ್ಬ ಕಲಾವಿಧೆ, ರಾಜಕೀಯ ಹಿನ್ನೆಲೆ ಹೊಂದಿದವರು. ಅವರು ಬಿಜೆಪಿ ಗೆ ಬರೋದ್ರಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬರಲಿದೆ ಎಂದು ಬಳ್ಳಾರಿಯಲ್ಲಿ ಸಾರಿಗೆ ಸಚಿವ ಶ್ರಿರಾಮುಲು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments