Thursday, August 28, 2025
HomeUncategorizedSSLC ಮೌಲ್ಯಮಾಪನಕ್ಕೆ 10 ಸಾವಿರ ಶಿಕ್ಷಕರು ಗೈರು

SSLC ಮೌಲ್ಯಮಾಪನಕ್ಕೆ 10 ಸಾವಿರ ಶಿಕ್ಷಕರು ಗೈರು

ಬೆಂಗಳೂರು : ಮೇ 15ರ ವೇಳೆಗೆ ನಿರೀಕ್ಷಿಸಿದ್ದ SSLC ಫಲಿತಾಂಶ ಮೌಲ್ಯಮಾಪನದಲ್ಲಿ ಸಣ್ಣಪುಟ್ಟ ದೋಷ ಸರಿಪಡಿಸುವುದು ಸೇರಿದಂತೆ ವಿವಿಧ ಕಾರಣಗಳಿಂದ 3-4 ದಿನ ತಡವಾಗಲಿದ್ದು, ಮೇ 19ಕ್ಕೆ ಪ್ರಕಟವಾಗುವ ಸಾಧ್ಯತೆ ಇದೆ.

ಮೌಲ್ಯಮಾಪನ ಕಾರ್ಯ ನಿರೀಕ್ಷೆಗಿಂತ ತಡವಾಗಿ ಪೂರ್ಣಗೊಂಡಿದೆ. ಬಳಿಕ ಮೌಲ್ಯಮಾಪನದಲ್ಲಿ ಸಣ್ಣ ಪುಟ್ಟ ದೋಷಗಳು, ಕಣ್ತಪ್ಪುಗಳಿದ್ದಲ್ಲಿ ಅವುಗಳನ್ನು ಸರಿಪಡಿಸುವ ಕಾರ್ಯ ನಡೆಸಲಾಗುತ್ತಿದೆ. ಇದಾದ ನಂತರ ಅಂಕಗಳ ದಾಖಲೀಕರಣ ಸೇರಿದಂತೆ ಫಲಿತಾಂಶ ಪ್ರಕಟಿಸಲು ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.

ಆದ್ರೆ, ಪ್ರಸಕ್ತ ಸಾಲಿನ SSLC ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಈ ಬಾರಿ ಸುಮಾರು 10 ಸಾವಿರ ಶಿಕ್ಷಕರು ಗೈರು ಹಾಜರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಗೈರು ಹಾಜರಾದ ಶಿಕ್ಷಕರಿಗೆ ನೋಟಿಸ್‌ ನೀಡಲಾಗಿದೆ & ಅಂಥವರ ವಿರುದ್ಧ ಕಾನೂನಾತ್ಮಕ ಕ್ರಮಕೈಗೊಳ್ಳಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ.

ಇದಕ್ಕೆ ಇನ್ನೂ ಒಂದು ವಾರ ಸಮಯಾವಕಾಶ ಬೇಕಾಗುತ್ತದೆ. ಆದ್ದರಿಂದ  ಮೇ 15 ರ ಬದಲು, ಮೇ 19ರ ಹೊತ್ತಿಗೆ ಫಲಿತಾಂಶ ನೀಡುವ ಸಾಧ್ಯತೆ ಇದೆ ಎಂದು ಮಾಹಿತಿಯಿಂದ ತಿಳಿದು ಬಂದಿದೆ.

RELATED ARTICLES
- Advertisment -
Google search engine

Most Popular

Recent Comments