Sunday, August 24, 2025
Google search engine
HomeUncategorizedಶ್ರೀ ರಾಮಸೇನೆಯೋ? ರಾವಣ ಸೇನೆಯೋ? : ಹೆಚ್​​ಡಿಕೆ ವಾಗ್ದಾಳಿ

ಶ್ರೀ ರಾಮಸೇನೆಯೋ? ರಾವಣ ಸೇನೆಯೋ? : ಹೆಚ್​​ಡಿಕೆ ವಾಗ್ದಾಳಿ

ಬಾಗಲಕೋಟೆ : ರಾಜ್ಯದಲ್ಲಿ ಆಜಾನ್ ವರ್ಸಸ್ ಸುಪ್ರಭಾತ ಅಭಿಯಾನ ವಿಚಾರ ಕುರಿತು ಪ್ರಮೋದ್​​ ಮುತಾಲಿಕ್‌ನನ್ನ ಒದ್ದು ಒಳಗಡೆ ಹಾಕಬೇಕು ಎಂದು ಬಾಗಲಕೋಟೆಯ ಬದಾಮಿಯಲ್ಲಿ ಮಾಜಿ ಸಿಎಂ ಹೆಚ್​​ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಆಜಾನ್ ವರ್ಸಸ್ ಸುಪ್ರಭಾತ ಅಭಿಯಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇವತ್ತಿನಿಂದ  ಹನುಮಾನ ಚಾಲೀಸ್ ಪಠಣ ಅಭಿಯಾನವನ್ನು ಶುರುಮಾಡಿದ್ದಾರೆ, ಇದು ಶ್ರೀ ರಾಮಸೇನೆಯೋ..? ಅಥವಾ ರಾವಣ ಸೇನೆಯೋ..? ಅಂತ ನನಗೆ ಗೊತ್ತಾಗ್ತಿಲ್ಲ ಎಂದು ಗುಡುಗಿದರು

ಇನ್ನು ನಾನು ಬೆಳಗ್ಗೆಯಿಂದ ಎಲ್ಲವನ್ನೂ ನೋಡುತ್ತಿದ್ದೇನೆ, ಸಮಾಜದ ಸಾಮರಸ್ಯ ಹಾಳಾದ ಮೇಲೆ ರಿಪೇರಿ ಮಾಡೋಕೆ ಆಗಲ್ಲ. ಇಂತಹ ವಿಷಯಗಳು ಬೃಹದಾಕಾರವಾಗಿ ಬೆಳಯಲಿಕ್ಕೆ ಸಕಾ೯ರ ಮೌನವಾಗಿ ಒಪ್ಪಿಗೆ ಸೂಚಿಸೋದು ನಿಲ್ಲಿಸಬೇಕು. ಮುತಾಲಿಕ್​​ನಂತವರನ್ನ ಒದ್ದು ಒಳಗಡೆ ಹಾಕದೇ ಹೋದರೆ ರಾಜ್ಯದಲ್ಲಿ ಸವ೯ಜನಾಂಗದ ಶಾಂತಿಯ ತೋಟ ನೆಲೆಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

RELATED ARTICLES
- Advertisment -
Google search engine

Most Popular

Recent Comments