Tuesday, August 26, 2025
Google search engine
HomeUncategorizedಅಪಘಾತಕ್ಕೆ ಬಿಬಿಎಂಪಿ ಕಾರಣ ಅಲ್ಲ : ತುಷಾರ್ ಗಿರಿನಾಥ್

ಅಪಘಾತಕ್ಕೆ ಬಿಬಿಎಂಪಿ ಕಾರಣ ಅಲ್ಲ : ತುಷಾರ್ ಗಿರಿನಾಥ್

ಬೆಂಗಳೂರು : ಕೆಎಸ್ ಆರ್ ಟಿಸಿ ಬಸ್ ಅಪಘಾತಕ್ಕೆ ಪಾಲಿಕೆ ಕಾರಣ ಎಂದು ಹೇಳಲು ಆಗಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಇಂದು ಮುಂಜಾಣೆ ಮೈಸೂರು ರಸ್ತೆ ಪೂರ್ಮಾಣಿ ಪ್ಯಾಲೇಸ್​​ ಬಳಿ ಕೆಎಸ್ ಆರ್ ಟಿಸಿ ಬಸ್ ಅಪಘಾತ ವಿಚಾರಕ್ಕೆ  ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ವರದಿ ಪ್ರಕಾರ ಅದು ಹಂಪ್ ಬಳಿ ನಿಲ್ಲಿಸುವಾಗ ಆಗಿರೋದು, ಗುಂಡಿ ಇಲ್ಲ ಅಂತ ಗೊತ್ತಾಗಿದೆ. ಬಸ್ ಡಿಕ್ಕಿ ಹೊಡೆದಿದೆ ಎಂಬ ಕಾರಣಕ್ಕೆ ಮತ್ತೊಮ್ಮೆ ಪರಿಶೀಲನೆ ಮಾಡಬೇಕಿದೆ ಮತ್ತು ಚಾಲಕರ ಬಳಿ ಪೂರ್ಣ ಮಾಹಿತಿ ಪಡೆದು ತನಿಖೆ ಆಗಬೇಕಾಗಿದೆ. ಅಷ್ಟೇ ಅಲ್ಲದೇ ಈ ಅಪಘಾತಕ್ಕೆ ಪಾಲಿಕೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ ಎಂದರು.

ಹೆಚ್ ಎಸ್ ಆರ್ ಲೇಔಟ್​​ನಲ್ಲಿ‌ ಕ್ರೀಡಾಂಗಣ ಬಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಳೆ ಗಾಳಿಯಿಂದಾಗಿ ಅದು ಬಿದ್ದಿದೆ. ಗುತ್ತಿಗೆದಾರರೇ ಅದನ್ನ ಮರು ನಿರ್ಮಾಣ ಮಾಡಬೇಕಿದೆ. ಗುತ್ತಿಗೆದಾರ ಯಾರು ಎಂದು ಗೊತ್ತಿಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಇನ್ನು ಮಳೆಗಾಲದ ಮುನ್ನಚ್ಚರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಂಬಂಧಿತ ಟೀಂ ಜೊತೆ ಚರ್ಚೆ ಆಗಿದೆ. ಅಪಾಯಕಾರಿಯಾಗಿರುವ ಮರದ ಪಟ್ಡಿ ಸಿದ್ಧ ಮಾಡಲಾಗುತ್ತಿದೆ. ಈ ಬಗ್ಗೆ ನಾಗರಿಕರೇ ಮಾಹಿತಿ ಕೊಡಬೇಕು. ಅಪಾಯಕಾರಿ ಮರದ ಮಾಹಿತಿ ಕೊಡಲು ನಾಗರಿಕರಿಗೆ ಅವಕಾಶವಿದ್ದು, ಪಾಲಿಕೆ ಎಲ್ಲ ವಿಚಾರಕ್ಕಾಗಿ ಬಿಬಿಎಂಪಿಯ ಸಹಾಯ ಆ್ಯಪ್​​​ನೇ ಬಳಸಿಕೊಳ್ಳಿ ಎಂದು ಮಾಹಿತಿ ತಿಳಿಸಿದರು.

RELATED ARTICLES
- Advertisment -
Google search engine

Most Popular

Recent Comments