Wednesday, August 27, 2025
HomeUncategorizedಬುರ್ಕಾ ಹಾಕೊಂಡು ಓಡಾಡಿದ್ರು ಬಿಜೆಪಿಗೆ ಒಂದು ಓಟು ಸಿಗಲ್ಲ : ಪ್ರಮೋದ್​ ಮುತಾಲಿಕ್​

ಬುರ್ಕಾ ಹಾಕೊಂಡು ಓಡಾಡಿದ್ರು ಬಿಜೆಪಿಗೆ ಒಂದು ಓಟು ಸಿಗಲ್ಲ : ಪ್ರಮೋದ್​ ಮುತಾಲಿಕ್​

ಮಂಡ್ಯ: ನಮ್ಮ ಓಟಿನಿಂದಲೇ ನೀವು ಗೆದ್ದಿರುವುದು ಎಂದು ಬಿಜೆಪಿ ಸರ್ಕಾರಕ್ಕೆ‌ ಮುತಾಲಿಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದೇವಾಲಯದ ಅರ್ಚಕರು, ಟ್ರಸ್ಟ್‌ನವರು ಸಂತೋಷದಿಂದಲೇ ಒಪ್ಪಿದ್ದಾರೆ. ಬೆಳಿಗ್ಗಿನ ಜಾವ ಭಕ್ತಿ ಗೀತೆ, ಹನುಮಾನ್ ಚಾಲೀಸಾ ಹಾಕಲು ಒಪ್ಪಿಗೆ ನೀಡಿದ್ದು, ಎಲ್ಲರಲ್ಲೂ ಸಂತೋಷ ಇದೆ, ಆಕ್ರೋಶವೂ ಇದೆ. ಸರ್ಕಾರ ಯಾವ ಕ್ರಮವನ್ನು ತೆಗೆದುಕೊಳ್ತಿಲ್ಲ. ಮುಸ್ಲಿಂರ ಉದ್ಧಟತನ ಹೆಚ್ಚಾಗಿದೆ. ಸರ್ಕಾರ ಅಭಿಯಾನ ಹತ್ತಿಕ್ಕುವ ಪ್ರಯತ್ನ ಮಾಡ್ತಿದೆ ನಾವು ಸಂಪರ್ಕಿಸಿದ ದೇವಾಲಯಕ್ಕೆ ಹೋಗಿ ಹೆದರಿಸುತ್ತಿದ್ದಾರೆ. ಈ ದಾದ ಗಿರಿ ನಡೆಯಲ್ಲ, ಮುಸ್ಲಿಮರ ಮೈಕಿಗೆ ನಿಮ್ಮ ದಾದಾಗಿರಿ ತೋರಿಸಿ ಎಂದರು.

ಅದುವಲ್ಲದೇ, ನಮ್ಮ ಓಟಿನಿಂದಲೇ ನೀವು ಗೆದ್ದಿರುವುದು. ಬಿಜೆಪಿ ಸರ್ಕಾರಕ್ಕೆ‌ ಮುತಾಲಿಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಪೊಲೀಸರಿಂದ ದೇವಾಲಯಗಳನ್ನು ಹೆದರಿಸುವ ಕೆಲಸ ಸರಿಯಲ್ಲ. ಯಾವುದೇ ಗದ್ದಲವಿಲ್ಲದೆ ಶಾಂತ ರೀತಿಯಲ್ಲಿ ಅಭಿಯಾನ ಮಾಡುತ್ತೇವೆ. ಗಲಭೆ ಅಶಾಂತಿ ಮಸೀದಿ ಮೈಕ್ ಮೂಲಕ ಆಗುತ್ತಿದೆ. ಹಿಂದೂಗಳಿಂದ ಗೆದ್ದ ಯೋಗಿ ಸರ್ಕಾರ 60 ಸಾವಿರ ಮೈಕ್ ತೆರವುಗೊಳಿಸಿದೆ. ನಮ್ಮ ರಾಜ್ಯದಲ್ಲಿ ಯಾಕೆ ಆ ಕೆಲಸ ಆಗುತ್ತಿಲ್ಲ. ಯೋಗಿ ರೀತಿ ಗಡ್ಸ್ ಬೊಮ್ಮಾಯಿ, ಆರಗ ಯಾಕೆ ತೋರಿಸುತ್ತಿಲ್ಲ. ಸುಪ್ರೀಂ ಆದೇಶ ಎಲ್ಲರಿಗೂ ಒಂದೇ. ನೀವು ಹೊಸ ನಿಯಮ ಮಾಡಬೇಕಿಲ್ಲ, ನಿಮ್ಮ ತಾಕತ್ತು ತೋರಿಸಿ. ಈ ಸರ್ಕಾರಕ್ಕೆ ಗಡ್ಸ್ ತಾಕತ್ತು ಇಲ್ಲ. ಸರ್ಕಾರ ಆದೇಶ ಪಾಲಿಸದ ಇರೋದ್ರಿಂದ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಇನ್ನು, ಬುರ್ಕಾ ಹಾಕೊಂಡು ಓಡಾಡಿದ್ರು ಬಿಜೆಪಿಗೆ ಒಂದು ಮುಸ್ಲಿಂ ಓಟು ಬರಲ್ಲ. ಯಾಕೆ ಇವರು ಮುಸ್ಲಿಮರ ಓಲೈಕೆ ಮಾಡಬೇಕು.? ಬೇರೇನು ಇಲ್ಲ ಇವರು ಮುಸ್ಲಿಮರಿಗೆ ಹೆದರುತ್ತಿದ್ದಾರೆ. ನಿಮಗೆ ಆಗದಿದ್ರೆ ಹೇಳಿ ನಾವು ಮೈಕ್ ಬಂದ್ ಮಾಡುತ್ತೇವೆ ಎಂದು ಮಂಡ್ಯದಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments