Tuesday, August 26, 2025
Google search engine
HomeUncategorizedತಾಯಿಯ ಪ್ರೀತಿಯ ಮುಂದೆ ಎಲ್ಲವೂ ಶೂಣ್ಯ

ತಾಯಿಯ ಪ್ರೀತಿಯ ಮುಂದೆ ಎಲ್ಲವೂ ಶೂಣ್ಯ

ಅಮ್ಮ ಎಂದರೆ ಬದುಕು ನೀಡಿದ ದೇವತೆ. ಕೈ ಹಿಡಿದು ಮುನ್ನಡೆಸಿದ ಮಹಾಮಾತೆ. ಪ್ರತಿಯೊಬ್ಬರ ಬಾಳಿನಲ್ಲೂ ಅಮ್ಮನಿಗೆ ವಿಷೇಷ ಸ್ಧಾನ ಇದೆ. ಪ್ರತಿಯೊಬ್ಬರ ಅಭಿವೃದ್ಧಿಯ ಹಿಂದೆ ಅಮ್ಮನ ಪಾತ್ರ ಬಹಳ ಹಿರಿದು. ತನ್ನ ಮಕ್ಕಳಿಗಾಗಿ ಎಂತಹ ಅಪಾಯವನ್ನು ಬೇಕಾದರೂ ಎದುರಿಸಲು ಯಾವ ತ್ಯಾಗಕ್ಕೂ ಅಮ್ಮ ಸಿದ್ಧಳಿರುತ್ತಾಳೆ ಎಂಬುವುದು ಅಷ್ಟೇ ಸತ್ಯ.

ತಾಯಿಯ ದಿನದ ಇತಿಹಾಸವೇನು ?

1990ರ ದಶಕದ ಆರಂಭದಲ್ಲಿ ಯುಎಸ್​ನ ಅನ್ನಾ ಜಾರ್ವಿಸ್​ ಎಂಬ ಮಹಿಳೆ ಪ್ರಪಂಚದಾದ್ಯಂತ ತಾಯಂದಿರಿಗಾಗಿ ಒಂದು ದಿನವನ್ನು ಅರ್ಪಿಸಲು ಪ್ರಯತ್ನಿಸುತ್ತಾಳೆ. 1905 ರಲ್ಲಿ ಆಕೆ ತನ್ನ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ಆನಂತರ 1908 ರಲ್ಲಿ ಪಶ್ಚಿಮ ವರ್ಜೀನಿಯಾದ ಗ್ರಾಫ್ಟ್​ನಲ್ಲಿರುವ ಸೆಂಟ್​ ಆಂಡ್ರ್ಯೂಸ್​ ಮೆಥೋಡಿಸ್ಟ್​ ಚರ್ಚ್​ನಲ್ಲಿ ತನ್ನ ತಾಯಿಗಾಗಿ ಪ್ರಾರ್ಥನಾ ಸಭೆಯನ್ನು ಅಯೋಜಿಸಿದ್ದಳು. ತಾಯಿಯ ದಿನವನ್ನು ಆಚರಿಸಲು ಅನ್ನಾ ಒಂದು ದಿನವನ್ನು ಮೀಸಲಿಡಬೇಕೆಂದು ನಿರ್ಧರಿಸಿ ಮನವಿಯನ್ನು ಮಾಡಿದಳು. ಆದರೆ ಅದೇ ವರ್ಷದಲ್ಲಿ ಅಮೆರಿಕ ಅಧಿಕಾರಿಗಳು ಅದನ್ನು ತಿರಸ್ಕರಿಸಿದರು. ಆದರೆ ನಂತರ ವಿಶ್ವದಾದ್ಯಂತ ತಾಯಂದಿರಿಗೆ ಕೃತಜ್ಞತೆ ಸಲ್ಲಿಸಿರುವ ಪ್ರಸ್ತಾಪವನ್ನು 1911ರಲ್ಲಿ ಅಂಗೀಕರಿಸಲಾಯಿತು.

ಜೀವನದಲ್ಲಿ ತಾಳ್ಮೆ, ಯಾರೊಂದಿಗೆ ಹೇಗೆ ಮಾತನಾಡಬೇಕು, ತಪ್ಪು ಮಾಡಿದರೆ ಅದನ್ನು ತಿದ್ದಿ ಗುರುವಾಗಿ ಬುದ್ದಿಮಾತು ಹೇಳಿದ ಮೊದಲ ದೇವತೆಯೇ ನನ್ನ ತಾಯಿ. ನನ್ನ ಶಕ್ತಿಯೇ ನನ್ನ ಅಮ್ಮ ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಎದುರಾದರೂ ಥೈರ್ಯದಿಂದ ಎದುರಿಸುವಲ್ಲಿ ಸಹಕಾರಿಯಾಗಲು ಇದೇ ಶಕ್ತಿ ಕಾರಣ ತಾಯಿಯ ಮಹತ್ವ ದೂರವಿದ್ದಾಗ ಹೆಚ್ಚು ತಿಳಿಯುವುದು ಸಹಜ ತನ್ನ ಹಸಿವು ದಣಿವು ಮರೆತು ಬಯಸಿದನ್ನು ರುಚಿ ರುಚಿಯಾಗಿ ಮಾಡಿ ತಿನ್ನಿಸುವ ನಿಸ್ವಾರ್ಥಿ ಅವಳು ತೋರಿಸುವ ಪ್ರೀತಿ ಕಾಳಜಿಯಲ್ಲಿ ಏರಿಳಿತವಾಗಿಲ್ಲ. ಅವಳ ಶುಭ ಹಾರೈಕೆ ಇಲ್ಲದೆ ಯಾವ ಕೆಲಸವೂ ಪೂರ್ಣವಾಗದು ಎಂಬ ನಂಬಿಕೆ ನನ್ನದು. ಆಕೆಯ ಮಹತ್ವವನ್ನು ಎಷ್ಟು ವರ್ಣಿಸಿದರೂ ಸಾಲದು.

ಹಗಲು ಹುಟ್ಟಿ ರಾತ್ರಿ ಮರೆಯಾಗೋ ಸೂರ್ಯನಿಗೂ ವಿಶ್ರಾಂತಿ ಇದೆ.
ರಾತ್ರಿ ಹುಟ್ಟಿ ಹಗಲು ಮರೆಯಾಗೋ ಆ ಚಂದ್ರನಿಗೂ ವಿಶ್ರಾಂತಿ ಇದೆ.
ಆಕೆ ವಿಶ್ರಾಂತಿಯನ್ನೇ ಪಡೆಯದೆ ತನ್ನ ನಾಳೆಯ ಇಂದಿನ ಕನಸ್ಸಿನಲ್ಲಿ
ತನ್ನದೆಲ್ಲವನ್ನೂ ತ್ಯಾಗ ಮಾಡಿ ಆ ಸೂರ್ಯ ಚಂದಿರನಂತೆ ಬೆಳಕು ಚೆಲ್ಲುತ್ತಲೇ ಇರುವಳು
ಬದುಕಿನಲ್ಲಿ ಹಲವಾರು ಕಷ್ಟಗಳ ಮೆಟ್ಟಿಲುಗಳನ್ನು ದಾಟಿ
ಒಬ್ಬ ಮಾದರಿ ತಾಯಿಯಾಗಿ ತಂದೆಯ ಸ್ಧಾನದಲ್ಲಿಯೂ ನಿಂತು ಮಗಳನ್ನು ಉನ್ನತ ಸ್ಧಾನಕ್ಕೆ ಏರಿಸಿ.
ಈ ಹಿರಿಯ ವಯಸ್ಸಿನಲ್ಲಿ ಸಾರ್ಥಕ್ಯದ ಬದುಕು ಸಾಗಿಸುತ್ತಿರುವ ಅಮ್ಮ
ನನ್ನ ಬದುಕಿಗೆ ಈಗಲೂ ಇವಳು ಸ್ಪೂರ್ತಿ
ಸ್ವಾರ್ಥ ಪ್ರಪಂಚದ ಮುಂದೆ ಅವಳೆಂದಿಗೂ ನಿಸ್ವಾರ್ಥಿ

RELATED ARTICLES
- Advertisment -
Google search engine

Most Popular

Recent Comments