Monday, August 25, 2025
Google search engine
HomeUncategorizedದೇಶದ್ರೋಹಿ ಘೋಷಣೆ ಕೂಗಿದವರು ಅರೆಸ್ಟ್

ದೇಶದ್ರೋಹಿ ಘೋಷಣೆ ಕೂಗಿದವರು ಅರೆಸ್ಟ್

ಮೈಸೂರು :ಇರೋದು ನಮ್ಮ ದೇಶದಲ್ಲಿ.. ಆದ್ರೆ, ಪರದೇಶದ ಮೇಲೆ ಎಲ್ಲಿಲ್ಲದ ಪ್ರೀತಿ.. ನಮ್ಮ ದೇಶದಲ್ಲಿದ್ದುಕೊಂಡೇ ಶತ್ರು ರಾಷ್ಟ್ರ ಪಾಕಿಸ್ತಾನದ ಪರ ಘೋಷಣೆ ಕೂಗಿದ ದೇಶದ್ರೋಹಿಗಳಿಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.. ಮಾಡಿದ್ದುಣ್ಣೊ ಮಾರಾಯ ಅಂತಾ ಕುಕೃತ್ಯ ಎಸಗಿದ್ದಕ್ಕೆ ಕಂಬಿಹಿಂದೆ ಬಿದ್ದಿದ್ದಾರೆ.

ದೇಶದ್ರೋಹಿಗಳ ಹೆಸರು ಹನನ್ ಅಲಿ ಖಾನ್ ಮತ್ತು ಫಯಾಜ್ ಖಾನ್‌. ಒಬ್ಬ SSLC ಫೇಲ್.. ಮತ್ತೊಬ್ಬ ಐಟಿಐ ಫೇಲ್‌.. ಇವರಿಬ್ಬರು ಮೊನ್ನೆ ರಂಜಾನ್ ದಿನದಂದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೊಡ್ಡಕೌಲಂದೆ ಗ್ರಾಮದಲ್ಲಿ ಪಾಕಿಸ್ತಾನದ ಪರ ಪ್ಯಾರ್ ತೋರಿಸಿದ ದೇಶದ್ರೋಹಿಗಳು.

ರಂಜಾನ್ ದಿನ ಎಲ್ಲರೂ ಮಸೀದಿಯಿಂದ ಪ್ರಾರ್ಥನೆ ಮುಗಿಸಿ ಮನೆಗೆ ತೆರಳುತ್ತಿದ್ರು‌.. ಈ ವೇಳೆ ಅದನ್ನು ವಿಡಿಯೋ ಮಾಡುತ್ತಾ ಕೌಲಂದೆ ಅಂದ್ರೆ ಚೋಟಾ ಪಾಕಿಸ್ತಾನ.. ಹೇಗಿದೆ ನೋಡಿ ನಮ್ಮ ಒಗ್ಗಟ್ಟು ಎಂದು ದೇಶದ್ರೋಹಿ ಘೋಷಣೆಗಳನ್ನ ಕೂಗಿದ್ರು.. ಈ ಸಂಬಂಧ ದೊಡ್ಡಕೌಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.. ಪೊಲೀಸರು ಆ ದೇಶದ್ರೋಹಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಸಂಬಂಧ ನಂಜನಗೂಡು ಪುರಸಭಾ ಸದಸ್ಯ ಕಪಿಲೇಶ್ ದೂರು ದಾಖಲಿಸಿದ್ರು.. ಅಲರ್ಟ್ ಆದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು.. ವಿಡಿಯೋದಲ್ಲಿದ್ದ ಧ್ವನಿ ಹನನ್ ಅಲಿ ಖಾನ್ ಮತ್ತು ಫಯಾಜ್ ಷರೀಫ್ ಅವರದ್ದು ಎಂದು ಸಾಬೀತಾದ ಹಿನ್ನೆಲೆಯಲ್ಲಿ, ಇವರಿಬ್ಬರನ್ನೂ ಬಂಧಿಸಿದ್ದಾರೆ.. ಸದ್ಯ, ಇವರಿಬ್ಬರನ್ನೂ ಬಂಧಿಸಿದ್ರೆ ಸಾಲದು ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ದೂರುದಾರರ ಆಗ್ರಹ.

ನಮ್ಮ ದೇಶದಲ್ಲಿದ್ದುಕೊಂಡು ಪಾಪಿ ಪಾಕ್‌ ಮೇಲೆ ಪ್ರೀತಿ ತೋರುವವರನ್ನ ಗಡಿಪಾರು ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.. ಒಟ್ಟಾರೆ ನಮ್ಮ ದೇಶದ ಋಣದಲ್ಲಿದ್ದು ಪಾಪಿ ಪಾಕ್‌ ಪರ ಹೇಳಿಕೆ ನೀಡಿದ ಇವರಿಬ್ಬರಿಗೂ ಕಠಿಣ ಶಿಕ್ಷೆಯಾಗಲಿ.‌. ಇನ್ಮುಂದೆ ಇಂತಹ ಕೆಲಸವನ್ನು ಮಾಡುವವರಿಗೆ ಎಚ್ಚರಿಕೆ ಗಂಟೆಯಾಗಲಿ ಎಂಬುದೇ ಎಲ್ಲರ ಆಶಯ.

RELATED ARTICLES
- Advertisment -
Google search engine

Most Popular

Recent Comments