ಕನ್ನಡ Rap ಸಾಂಗ್‌ಗೆ ಹುಚ್ಚೆದ್ದು ಕುಣಿದ ವಿದ್ಯಾರ್ಥಿಗಳು

ಮೈಸೂರು: ಜಗಮಗಿಸುತ್ತಿರೋ ಅದ್ದೂರಿ ವೇದಿಕೆ. ಕನ್ನಡ ರ್‍ಯಾಪ್ ಸಾಂಗ್ ಗೆ ಹುಚ್ಚೆದ್ದು ಕುಣಿಕುತ್ತಿರುವ ಯುವಕ ಯುವತಿಯರು,ಕನ್ನಡ ಹಿಂದಿ ಹಾಡಿಗೆ ಭರ್ಜರಿ ಡ್ಯಾನ್ಸ್, ಸ್ಟೂಡೆಂಟ್ಸ್ ಜೊತೆಗೆ ಮಿಂಚಿದ ಶಿಕ್ಷಕರು, ವಿದ್ಯಾರ್ಥಿಗಳ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ ಸೆಲೆಬ್ರೆಟಿಗಳು. ಎಸ್ ಹೀಗೊಂದು ಅದ್ದೂರಿ ಕಾರ್ಯಕ್ರಮ ನಡೆದದ್ದು, ಮಂಜಿನ ನಗರಿ, ಪ್ರವಾಸಿಗರ ಹಾಟ್ ಸ್ಪಾಟ್ ಮಡಿಕೇರಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಬಾರಿ ಒಂದು ಒಳ್ಳೆಯ ಕಾರ್ಯಕ್ರಮ ಮಾಡ್ಬೇಕು ಅಂತಾ ಅಂದುಕೊಂಡಿದ್ದು, ಇದೀಗ ನೆರವೇರಿದೆ.

ಯಕ್ಷಗಾನ, ವಿದ್ಯಾರ್ಥಿಗಳೇ ಬರೆದು ಹಾಡಿದ ರ್‍ಯಾಪ್ ಸಾಂಗ್, ಜಾದು ಪ್ರದರ್ಶನ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಮಾಡಿದ ಕೋವಿಡ್ ನಾಟಕ, ಕನ್ನಡ, ಹಿಂದಿ ಹಾಡಿಗೆ ಹಾಕಿದ ಹೆಜ್ಜೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮನರಂಜನೆಯ ರಸದೌತಣವನ್ನೆ ನೀಡಿತು. ಇನ್ನು ವಿದ್ಯಾರ್ಥಿಗಳ ಈ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳು ಕೂಡ ಸಾಥ್ ನೀಡಿದ್ದು ವಿಶೇಷವಾಗಿತ್ತು.

ಕೊಡಗಿನವರೇ ಆದ ಹರ್ಷಿಕ ಪೂಣಚ್ಚ ಹಾಗೂ ಬುವನ್ ಪೊನ್ನಣ್ಣ ಕೂಡ ವೈದ್ಯಕೀಯ ವಿದ್ಯಾರ್ಥಿಗಳ ಫೇಸ್ಟ್ ನಲ್ಲಿ ಭಾಗವಹಿಸುತ್ತ ವಿದ್ಯಾರ್ಥಿಗಳೊಂದಿಗೆ ಸ್ಟೇಪ್ ಹಾಕಿದ್ರು. ಅಲ್ಲದೆ ವಿದ್ಯಾರ್ಥಿಗಳೊಂದಿಗೆ ಭುವನ್ ಹಾಗೂ ಹರ್ಷಿಕ ಹಬಿಬೂ ಸಾಂಗ್ ಗೆ ಸ್ಟೆಪ್ ಹಾಕಿದ್ರು.ಇನ್ನೂ ಕನ್ನಡ ರ್ಯಾಂಪರ್ ಅಲೋಕ್ ಸ್ಟೇಜ್ ಹತ್ತುತ್ತಿದ್ದಂತೆ ವಿದ್ಯಾರ್ಥಿಗಳ ಹರ್ಷೊದ್ಗಾರ ಮುಗಿಲು ಮುಟ್ಟಿತ್ತು. ಕನ್ನಡ ರ್ಯಾಂಪ್ ಸಾಂಗ್ ಹಾಡುತ್ತಾ ವಿದ್ಯಾರ್ಥಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು.ಸುಮಾರು ಒಂದು ಗಂಟೆ ವಿದ್ಯಾರ್ಥಿಗಳು ಜಗಮಗಿಸೋ ಲೈಟ್ ನಲ್ಲಿ ರ್ಯಾಪ್ ಸಾಂಗ್ ಗಳಿಗೆ ಹೆಜ್ಜೆ ಹಾಕಿದ್ರು.

ಒಟ್ಟಾರೆ ಮಳೆಯ ನಡುವೆಯೂ ಒಂದೂ ಅದ್ದೂರಿ ವೇದಿಕೆಯಲ್ಲಿ ವಿದ್ಯಾರ್ಥಿಗಳು ಎಲ್ಲವನ್ನೂ ಮರೆತು ಸಖತ್ ಸ್ಟೆಪ್ ಹಾಕುತ್ತಾ ಕಾಲೇಜ್ ಫೆಸ್ಟ್ ಎಂಜಾಯ್ ಮಾಡಿದ್ರು.

RELATED ARTICLES

Related Articles

TRENDING ARTICLES