ಮೈಸೂರು : ನಾನು ಕೇಳಿದ್ದು ಜನರಿಗೆ ಕಟ್ಟಿಕೊಟ್ಟ ಮನೆ ಬಗ್ಗೆ, ನೀವು ಕಟ್ಟಿಸಿಕೊಂಡ ಮನೆಗಳ ಬಗ್ಗೆ ಅಲ್ಲ ಎಂದು ವಸತಿ ಸಚಿವ ವಿ ಸೋಮಣ್ಣನವರಿಗೆ ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ರಾಜ್ಯದಲ್ಲಿ ಮನೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಟ್ಟಿಸಿದ ಮನೆಯನ್ನು ನಾನೇ ಏಕೆ ನೋಡಲಿ. ನೀವು ಕಟ್ಟಿಸಿರುವ ಮನೆ ಬಗ್ಗೆ ಒಂದು ದಾಖಲೆ ತಂದು ಕೊಡಿ ಸಾಕು. ಇವರು ಯಡಿಯೂರಪ್ಪ ಅವಧಿಯಲ್ಲಾಗಲಿ, ಬಸವರಾಜ ಬೊಮ್ಮಾಯಿ ಅವಧಿಯಾಗಲಿ ಒಂದು ಮನೆ ನೀಡಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅದುವಲ್ಲದೇ ಬಸವರಾಜ ಬೊಮ್ಮಾಯಿ ಆಯ್ಕೆಯಾದ ಸಿಎಂ ಅಲ್ಲ. ಅವರು ಮತ್ತು ಯಡಿಯೂರಪ್ಪ ನೇಮಕವಾದ ಮುಖ್ಯಮಂತ್ರಿ.
ಇವರಿಗೆ ಜನರು ಬಹುಮತ ಕೊಟ್ಟಿರಲಿಲ್ಲ. ಇವರು ಯಾವ ರೀತಿ ಅಧಿಕಾರಕ್ಕೆ ಬಂದರು ಅಂತಾ ಗೊತ್ತಿದೆ. ಇವರು ಹಣ ಬಳಸಿ ಚುನಾವಣೆ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಇವರು ನನ್ನ ಬಗ್ಗೆ ಮಾತನಾಡುತ್ತಾರ ಎಂದು ವಾಗ್ದಾಳಿ ಕಿಡಿಕಾರಿದರು.
ಇನ್ನು ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ತಿರುಗುತ್ತಾರೆ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಳ್ಳರು ಇನ್ನೇನು ಹೇಳುತ್ತಾರೆ ? ಕಳ್ಳ ಸತ್ಯ ಒಪ್ಪಿಕೊಳ್ಳುತ್ತಾನಾ ? ಸಚಿವ ಎಂ ಎಲ್ ಸಿಗಳು ಪತ್ರ ಬರೆದಾಗ ಏಕೆ ತನಿಖೆ ಮಾಡಲಿಲ್ಲ ? ಮರು ಪರೀಕ್ಷೆ ಏಕೆ ಮಾಡಿದ್ರಿ ? ವರ್ಗಾವಣೆ ಏಕೆ ಮಾಡಿದ್ರಿ ? ಇವರು ಮಂತ್ರಿಯಾಗಲು ಲಾಯಕ್ಕಾ ನಾಲಾಯಕ್ಕಾ ? ಒಬ್ಬ ಸಚಿವ ಪತ್ರ ಬರೆದಿದ್ದಾ ಬೇರೆ ಅವರಲ್ಲ. ಮೊದಲ ಇಲ್ಲ ಅಂದು ಈಗ ಅಕ್ರಮ ಆಗಿದೆ ಅಂದರೆ ಏನು ಅರ್ಥ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.


