Saturday, September 13, 2025
HomeUncategorizedಉತ್ತರ ಪತ್ರಿಕೆಗಳನ್ನ ಕೇಳಿದ್ರೂ ಆರ್​​ಟಿಐ ಮೌನ : ಆಪ್​​​ ಕಾರ್ಯಕರ್ತರ ಆಕ್ರೋಶ

ಉತ್ತರ ಪತ್ರಿಕೆಗಳನ್ನ ಕೇಳಿದ್ರೂ ಆರ್​​ಟಿಐ ಮೌನ : ಆಪ್​​​ ಕಾರ್ಯಕರ್ತರ ಆಕ್ರೋಶ

ಬೆಂಗಳೂರು : PSI ಪರೀಕ್ಷೆ ಅಕ್ರಮ ಪ್ರಕರಣ ವಿರೋಧಿಸಿ ನಗರದ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ಜೊತೆಗೆ KPSC ಆಯೋಗಕ್ಕೆ ಮುತ್ತಿಗೆ ಹಾಕಲು ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಮುಂದಾಗಿದ್ದಾರೆ.

ಕೆಪಿಎಸ್​​ಸಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಅಲ್ಲದೇ ಪರೀಕ್ಷೆ ಬರೆದ ಉತ್ತರ ಪತ್ರಿಕೆಗಳ ಪ್ರತಿ ಕೊಡೋದಿಲ್ಲ, ಆರ್​​ಟಿಐನಲ್ಲಿ ಕೇಳಿದರೂ ಮೌನವಾಗಿದ್ದಾರೆಂದು ಉದ್ಯೋಗಸೌಧಕ್ಕೆ ಬೀಗ ಜಡಿಯಲು ಮುಂದಾದ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರ ಜೊತೆಗೆ ಕಾರ್ಯಕರ್ತರು ನಮಗೆ ಉದ್ಯೋಗ ಸೌಧಕ್ಕೆ ಹೋಗಲು ಬಿಡಿ ಎಂದು ವಾಗ್ವಾದ ನಡೆಸಿದರು. ನಮ್ಮ ಹೋರಾಟವನ್ನ ಮುಂದುವರೆಸಲು ಬಿಡಿ. ನಾವು ಶಾಂತಿಯುತವಾಗಿ ಮುತ್ತಿಗೆ ಹಾಕುತ್ತೇವೆ, ಯಾವುದೇ ಕಾರಣಕ್ಕೂ ಟ್ರಾಫಿಕ್ ಸಮಸ್ಯೆ ಮಾಡಲ್ಲ. ನಮಗೆ ಅವಕಾಶ ಮಾಡಿಕೊಡಿ ಎಂದು ಮುಂದಾದ ಆಪ್ ಪ್ರತಿಭಟನಾಕಾರರನ್ನ ಬಂಧಿಸಲಾಯಿತು.

RELATED ARTICLES
- Advertisment -
Google search engine

Most Popular

Recent Comments