Friday, September 12, 2025
HomeUncategorizedಉನ್ನತ ಶಿಕ್ಷಣ ಸಚಿವರು ಪ್ರಕರಣದಲ್ಲಿ ಭಾಗಿ : ಹೆಚ್.ಎಂ.ರೇವಣ್ಣ

ಉನ್ನತ ಶಿಕ್ಷಣ ಸಚಿವರು ಪ್ರಕರಣದಲ್ಲಿ ಭಾಗಿ : ಹೆಚ್.ಎಂ.ರೇವಣ್ಣ

ಬೆಂಗಳೂರು : ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಭ್ರಷ್ಟಾಚಾರ ಅಂದ್ರೆ ಕರ್ನಾಟಕ ಎನ್ನುವಂತಾಗಿದೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಆಡಳಿತ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್ ನಾಯಕರಾದ ಮಾಜಿ ಸಚಿವ ಹೆಚ್.ಎಂ.ರೇವಣ್ಣ , ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮತ್ತು ಮಾಜಿ ಸಂಸದ ಚಂದ್ರಪ್ಪ ಇಂದು ಕೆಪಿಸಿಸಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ವಿದ್ಯಾಮಾನ ನೋಡಿದರೆ ಆಶ್ಚರ್ಯವಾಗುತ್ತದೆ. ಭ್ರಷ್ಟಾಚಾರ ಅಂದ್ರೆ ಕರ್ನಾಟಕ ಅನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದುವಲ್ಲದೇ ಭ್ರಷ್ಟಾಚಾರದ ಬಗ್ಗೆ ಅವರ ಪಕ್ಷದವರೇ ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳು ಮೌನಿಬಾಬಾ ಆಗಿದ್ದಾರೆ. ಯಾವ ಕ್ರಮವನ್ನೂ‌ ತೆಗೆದುಕೊಳ್ಳುತ್ತಿಲ್ಲ. ಯತ್ನಾಳ್ ಆರೋಪ ಮಾಡಿದ್ರೂ ಕ್ರಮವಿಲ್ಲ, ವಿಶ್ವನಾಥ್ ಆರೋಪ ಮಾಡಿದ್ರೂ ಕ್ರಮವಿಲ್ಲ,
ಈಗ ಪಿಎಸ್ ಐ ನೇಮಕಾತಿಯಲ್ಲೂ ಅಕ್ರಮವಾಗಿದೆ. ಆದರೂ ಸರ್ಕಾರ ಯಾವ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ.

ಇನ್ನು ಸಿಐಡಿ ಮಾಗಡಿಯ ದರ್ಶನ್ ಗೌಡ ವಿಚಾರಣೆಗೆ ಕರೆಯುತ್ತೆ, ನಂತರ ಅವನನ್ನ ಬಿಡುಗಡೆ ಮಾಡಿದ್ದಾರೆ. ಯಾವ ಒತ್ತಡಕ್ಕೆ ಮಣಿದು ಬಿಡುಗಡೆ ಮಾಡಿದರು. ತಾಕತ್ತಿರುವ ಸಚಿವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಸತೀಶ್ ಅನ್ನುವವರಿಗೆ ಅವರು ಹಣ ಕೊಟ್ಟಿದ್ದಾರಂತೆ, ಲ್ಯಾಪ್​​ಟಾಪ್​ನಲ್ಲಿ ಅವ್ಯವಹಾರ ಆಗಿದೆ.ಅದರಲ್ಲಿದ್ದ ಉನ್ನತ ಶಿಕ್ಷಣ ಸಚಿವರು ಭಾಗಿಯಾಗಿದ್ದಾರೆ. ಅಲ್ಲದೇ  ಗಂಡಸ್ಥನದ ಬಗ್ಗೆ ಮಾತನಾಡಿದ ಸಚಿವರು, ರಾಮನಗರದ ಸಭೆಗಳಲ್ಲಿ‌ ಭಾಗವಹಿಸಿದ್ದವರು ಆ ಸಚಿವರ ಭಾಗಿ ಇದರಲ್ಲಿದೆ. ಉತ್ತಮ ತನಿಖೆಯಾಗಬೇಕು. ಇಲ್ಲದೇ ಹೋದರೆ ತನಿಖೆ ಹಳ್ಳಹಿಡಿಯಲಿದೆ ಎಂದು ರೇವಣ್ಣ ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments