Wednesday, September 10, 2025
HomeUncategorizedಕಾಂಗ್ರೆಸ್ಸಿಗರು ತಿಪ್ಪೆ ಸಾರಿಸುವುದರಲ್ಲಿ ನಿಸ್ಸೀಮರು : ಶಾಸಕ ಸಿ.ಟಿ.ರವಿ

ಕಾಂಗ್ರೆಸ್ಸಿಗರು ತಿಪ್ಪೆ ಸಾರಿಸುವುದರಲ್ಲಿ ನಿಸ್ಸೀಮರು : ಶಾಸಕ ಸಿ.ಟಿ.ರವಿ

ಚಿಕ್ಕಮಗಳೂರು : ಕಾಂಗ್ರೆಸ್ಸಿಗರು ತಿಪ್ಪೆ ಸಾರಿಸುವುದರಲ್ಲಿ ನಿಸ್ಸೀಮರು,ಹೀಗಾಗಿ ಬಿಜೆಪಿಯೂ ಹಾಗೇ ಎಂದು ಭಾವಿಸಿದ್ದಾರೆ. ತಾನು ಕಳ್ಳ ಪರರ ನಂಬ ಎಂಬ ಮಾತು ಕಾಂಗ್ರೆಸ್​​ಗೆ ಅನ್ವಯವಾಗುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಕಿಡಿಕಾರಿದರು.

PSI ಅಕ್ರಮದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಬಿಜೆಪಿ ತಿಪ್ಪೆ ಸಾರಿಸುವುದಾಗಿದ್ದರೆ ದಿವ್ಯ ಹಾಗರಗಿ ಮೇಲೆ ಎಫ್.ಐ.ಆರ್. ಆಗ್ತಿರಲಿಲ್ಲ. ಪ್ರಕರಣದಲ್ಲಿ ಭಾಗಿಯಾದವರನ್ನು ಎಫ್.ಐ.ಆರ್. ಮಾಡಿದ್ದು, ಸಿಐಡಿಗೆ ವಹಿಸಿದ್ದು, ದಿವ್ಯಾ ಅವರ ಗಂಡನನ್ನ ಎಲ್ಲರನ್ನೂ ಬಂಧಿಸುತ್ತಿರುವುದು, ಹಾಗೂ ಬಂಧನವಾಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ತೇವೆ, ಯುಪಿ ಮಾದರಿಯಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ಪೇಪರ್ ನೋಟಿಫಿಕೇಶನ್ ಕೊಟ್ಟಿದ್ದು ಎಲ್ಲವೂ ಬಿಜೆಪಿ ಸರ್ಕಾರವೇ ಎಂದು ಗುಡುಗಿದರು.

ಅದುವಲ್ಲದೇ ಹಿಂದೆ ಅವರದ್ದೇ ಮುಖ್ಯಮಂತ್ರಿ ಮೇಲೆ ವಾಚ್ ಪ್ರಕರಣ ಬಂತು. ಕಳ್ಳತನದ ವಾಚು, ಅಕ್ರಮದ ವಾಚು ಸಿಎಂ ಕೈಗೆ ಹೇಗೆ ಬಂತು ಎಂದು ಆದರೆ ಅದರ ಬಗ್ಗೆ ತನಿಖೆಯೇ ಆಗಲಿಲ್ಲ. ರಿಡ್ಯೂ ಹೆಸರಲ್ಲಿ ಅರ್ಕಾವತಿ ಭೂಹಗರಣದಲ್ಲಿ ಸಾವಿರಾರು ಎಕರೆ ಡಿನೋಟಿಫೈ ಮಾಡಿದರು. 10-20 ಲಕ್ಷ, ಕೆಲವಡೆ 50 ಲಕ್ಷ ಪಡೆದರು, ತನ್ನ ಕುತ್ತಿಗೆಗೆ ಬರುತ್ತೆ ಎಂದು ಹಾಗೇ ತಿಪ್ಪೆ ಸಾರಿಸಿದರು.

ಇನ್ನು ಕೆಂಪಣ್ಣ ಆಯೋಗ ಕೂಡ ಕಾಂಗ್ರೆಸ್ ಪಾತ್ರವನ್ನ ಎತ್ತಿ ಹಿಡಿದಿತ್ತು. ಪ್ರಶಂಸೆ ಹೇಳುವ ಮನಸ್ಥಿತಿ ಅವರಿಗಿಲ್ಲ, ಕಾಂಗ್ರೆಸ್‍ನಂತೆ ಬಿಜೆಪಿ ಅಲ್ಲ. ಈ ವಿಷಯದಲ್ಲಿ ಯಾರೇ, ಎಷ್ಟೆ ಪ್ರಭಾವಶಾಲಿಗಳಿದ್ದರೂ ಶಿಕ್ಷೆ ಆಗುತ್ತೆ, ಮುಚ್ಚಾಕೋ ಪ್ರಶ್ನೆಯೇ ಇಲ್ಲ ಎಂದು ಸಿ.ಟಿ.ರವಿ ಹೇಳಿದರು.

RELATED ARTICLES
- Advertisment -
Google search engine

Most Popular

Recent Comments