Thursday, September 11, 2025
HomeUncategorizedಡಿಕೆ ಸುರೇಶ್‌ ದೇಹದ ಕಣಕಣದಲ್ಲೂ ಭ್ರಷ್ಟಾಚಾರವಿದೆ : ಅಶ್ವತ್ ನಾರಾಯಣ್

ಡಿಕೆ ಸುರೇಶ್‌ ದೇಹದ ಕಣಕಣದಲ್ಲೂ ಭ್ರಷ್ಟಾಚಾರವಿದೆ : ಅಶ್ವತ್ ನಾರಾಯಣ್

ರಾಮನಗರ : ಡಿ.ಕೆ.ಸುರೇಶ್​ ಅವರ ಕಣ ಕಣದಲ್ಲೂ ಭ್ರಷ್ಟಾಚಾರ ತುಂಬಿದೆ. ಇವತ್ತು ಅವರ ಬಾಯಲ್ಲಿ ಒಳ್ಳೆಯ ಮಾತುಗಳು ಬರುತ್ತಿವೆ. ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ಎಂಬ ಮಾತುಗಳು ಬರ್ತಿವೆ ಎಂದರೆ ಸಂತೋಷ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿಎನ್‌ ಅಶ್ವತ್ ನಾರಾಯಣ್ ಕಿಡಿಕಾರಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಬರೀ ಹಗರಣಗಳೇ ಇವೆ ಎಂಬ ಸಂಸದ ಡಿಕೆ ಸುರೇಶ್ ಹೇಳಿಕೆಗೆ ರಾಮನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಯಾರ ಬಾಯಲ್ಲಿ ಯಾವ ಮಾತು ಬರುತ್ತೆ ನೋಡ್ರಪ್ಪ. ಅವರ ಕಣಕಣದಲ್ಲೂ ಭ್ರಷ್ಟಾಚಾರ ತುಂಬಿದೆ. ಅಧಿಕಾರ ದುರ್ಬಳಕೆ, ಸ್ವಜನ ಪಕ್ಷಪಾತ, ಇವೆಲ್ಲವನ್ನು ಅವರು ಅಳವಡಿಸಿಕೊಂಡಿದ್ದಾರೆ ಎಂದು ಹರಿಹಾಯ್ದರು.

ಕನಕಪುರದಲ್ಲಿ ಬಿಜೆಪಿ ಸಂಘಟನೆಗೆ ಹೆಚ್ಚಿನ ಹೊತ್ತು ವಿಚಾರಕ್ಕೆ ಪ್ರತಿಕ್ರಿಯಿಸಿ, ಕನಕಪುರದಲ್ಲಿನ ದೌರ್ಜನ್ಯ, ಉಸಿರುಗಟ್ಟುವಂತಹ ವಾತಾವರಣ, ಇದಕ್ಕೆಲ್ಲಾ ಕೊನೆಗಾಲ ಬಂದಿದೆ. ಕೊನೆಯ ಆಟ ಆಡುವಾಗ ಉಸಿರು ಜೋರಾಗಿ ಆಡ್ತಾರೆ ಎನ್ನುವ ರೀತಿ ವಾತಾವರಣ ಇದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments