Monday, September 8, 2025
HomeUncategorizedನಾನು ಹಳ್ಳಿ ಗಮಾಡ್ : ಮಾಜಿ ಸಚಿವ ಹೆಚ್.ಡಿ ರೇವಣ್ಣ

ನಾನು ಹಳ್ಳಿ ಗಮಾಡ್ : ಮಾಜಿ ಸಚಿವ ಹೆಚ್.ಡಿ ರೇವಣ್ಣ

ಹಾಸನ : ನಾನು ಹಳ್ಳಿ ಗಮಾಡ್​​ ಅಲ್ವಾ? ನನ್ನ ಕ್ಷೇತ್ರದ ಕಾಲೇಜು ನಂಬರ್ 1 ಎಂದಿದ್ದ ಉನ್ನತ ಶಿಕ್ಷಣ ಸಚಿವ ಅಶ್ವಥ್‌ನಾರಾಯಣ್ ವಿರುದ್ಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ವ್ಯಂಗವಾಡಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಶಿಕ್ಷಣ ಮಂತ್ರಿಯಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಜಿಲ್ಲೆಯಲ್ಲಾಗಲೀ ರಾಜ್ಯದಲ್ಲಾಗಲೀ ನಾವು ಶಿಕ್ಷಣ ಸಂಸ್ಥೆ ನಡೆಸುತ್ತಿಲ್ಲ. ಕೇವಲ ತಾಂತ್ರಿಕ ಇಲಾಖೆ ಒಂದರಲ್ಲೇ ಸರಿಯಾದ ಅಭ್ಯಾಸಕ್ಕೆ ಅವಕಾಶ ಕೊಡಲಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಅನೇಕ ಇಂಜಿನಿಯರಿಂಗ್ ಕಾಲೇಜು ಮಾಡಿದ್ದೇವೆ. ಮೊಸಳೇ ಹೊಸಹಳ್ಳಿ ಇಂಜಿನಿಯರಿಂಗ್ ಕಾಲೇಜು ಬಾಗಿಲು ಮುಚ್ಚಲು ಹೋರಾಡಿದ ಮಂತ್ರಿ ಇವರು ಆದರೆ ಮೊಸಳೇ ಹೊಸಹಳ್ಳಿ ಇಂಜಿನಿಯರಿಂಗ್ ಕಾಲೇಜು ಇಂದು ರಾಜ್ಯದಲ್ಲೇ ಪ್ರಥಮದಲ್ಲಿದೆ. ಹೆಚ್ಚು ವಿದ್ಯಾರ್ಥಿಗಳನ್ನ ನನ್ನ ಕ್ಷೇತ್ರದ ಕಾಲೇಜಿದೆ. ರಾಜಕೀಯವಾಗಿ ಫೇಸ್ ಮಾಡಲು ನಾನು ಸಿದ್ಧನಿದ್ದೇನೆ ಎಂದರು.

ಇದಲ್ಲದೆ, ಏಳು ಸಾವಿರಕ್ಕೆ ಸರ್ಕಾರಿ ಕಾಲೇಜು ಸೀಟು ಒಳ್ಳೇದೋ..? ಖಾಸಗಿ ಕಾಲೇಜಿನ ೭೦ ಲಕ್ಷ ಒಳ್ಳೇದೋ..? ಮೊಸಳೆ ಹೊಸಹಳ್ಳಿ ಕಾಲೇಜಿಗೆ ಸರ್ಕಾರಿ ಅನುದಾನಕ್ಕಿಂತ ಹೊರಗಿನ ಅನುದಾನವೇ ಹೆಚ್ಚಾಗಿದೆ. ರಾಜಕೀಯವನ್ನು ದ್ವೇಶದಿಂದ ಮಾಡುತ್ತಿದ್ದಾರೆ. ಇವರ ಕೆಲಸ ನೋಡಿದ್ರೆ ನಮಗೆ ನಾಚಿಯಾಗುತ್ತದೆ. ಕಾಲ ಬಂದಾಗ ಇವರ ಒಂದೊಂದೇ ಹಗರಣಗಳನ್ನ ಬಿಚ್ಚಿಡುತ್ತೇನೆ. ಸರ್ಕಾರಿ ಕಾಲೇಜಿನಲ್ಲಿ ಬಡವರ ಮಕ್ಕಳು ಓದುತ್ತಿದ್ದಾರೆ. ಇವರಿಗೆ ಶಿಕ್ಷಣ ಇಲಾಖೆ ಎಂದರೆ ಏನು ಅನ್ನೋದೆ ಗೊತ್ತಿಲ್ಲ. ಇಂತಹವರಿಗೆ ನಾಲ್ಕು ಖಾತೆ ಕೊಟ್ಟಿದ್ದಾರೆ. ಹತ್ತು ವರ್ಷವಾದರೂ ಪ್ರಾಂಶುಪಾಲರನ್ನ ನೇಮಿಸಿಲ್ಲ. ಇವರು ಖಾಸಗಿಯವರ ಜೊತೆ ಲಾಬಿಗೆ ಇಳಿದಿದ್ದಾರೆ ಎಂದು ಹೇಳಿದರು.

ನಾನು ಹಳ್ಳಿ ಗಮಾಲ್ಡ್ ಅಲ್ವಾ.. ನನ್ನ ಕ್ಷೇತ್ರದ ಕಾಲೇಜು ನಂಬರ್ ೧ ಹಾಸನದಲ್ಲಿ ಸರ್ಕಾರಿ ಕಾಲೇಜುಗಳನ್ನ ಮಾಡೋದಕ್ಕೆ ದೇವೇಗೌಡರ ಮಕ್ಕಳು ಬರಬೇಕಾಯ್ತು. ಬನ್ನೀ ಅಶ್ವಥ್‌ನಾರಾಯಣ್ ಅವರೇ ಹಾಸನದಲ್ಲಿ ಶಿಕ್ಷಣ ಸಂಸ್ಥೆ ಹೇಗೆ ನಡೆಸುತ್ತಿದ್ದಾರೆ ನೋಡಿ. ಖಾಸಗಿಯವರ ಗುಲಾಮರಾಗಿ ನೀವು ಅಧಿಕಾರ ಮಾಡಬೇಡಿ. ಕಾಂಗ್ರೆಸ್​ನವರು ಮಾಡಿದ ತಪ್ಪಿನಿಂದ ಈ ಸರ್ಕಾರ ಬಂತು ಎಂದರು.

RELATED ARTICLES
- Advertisment -
Google search engine

Most Popular

Recent Comments