Sunday, September 7, 2025
HomeUncategorizedಯಾರ್ಯಾರು ಗೋಡಂಬಿ-ಬಾದಾಮಿ ತಿಂದಿರಬಹುದು : ಬಿಜೆಪಿ ಟ್ವಿಟ್​​ ವ್ಯಂಗ್ಯ

ಯಾರ್ಯಾರು ಗೋಡಂಬಿ-ಬಾದಾಮಿ ತಿಂದಿರಬಹುದು : ಬಿಜೆಪಿ ಟ್ವಿಟ್​​ ವ್ಯಂಗ್ಯ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ನಿಂತಿರುವ ದಿವ್ಯಾ ಹಾಗರಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ಹಾಗೂ ಹಾಗರಗಿ ನಡುವಿರುವ ನಂಟಿನ ಸಂಬಂಧವೇನು ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ.

ಪ್ರಕರಣ ಹೊರಬಂದ ಹೊಸತರಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಜತೆಗಿರುವ ಹಾಗರಗಿ ಫೋಟೋ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಅಲ್ಲದೇ ಅದೇ ಫೋಟೋ ಆಧಾರದಲ್ಲಿ ಗೃಹ ಸಚಿವರ ವಿರುದ್ಧವೂ‌ ನೋಟಿಸ್​​ ಜಾರಿ ಮಾಡಲು ಒತ್ತಾಯಿಸಿತ್ತು.

ಇದೀಗ ಡಿಕೆಶಿ ಜತೆಗೆ ಹಾಗರಗಿ ಇರುವ ಫೋಟೋ ಬಯಲಾಗಿದ್ದು, ಇದನ್ನೇ ಬಳಸಿಕೊಂಡು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಡಿಕೆಶಿ ಜತೆ ದಿವ್ಯಾಗೆ ಏನು ಕೆಲಸ? ಏನು ಸಂಬಂಧ? ಅಂತೆಲ್ಲಾ ಕಾಂಗ್ರೆಸ್‌ಗೆ ತಿರುಗೇಟು ನೀಡುತ್ತಿದ್ದಾರೆ.

ಪಿಎಸ್‌ಐ ನೇಮಕ ಹಗರಣ ಕಾಂಗ್ರೆಸ್ ಕೃಪಾಪೋಷಿತರ ನಾಟಕ ಮಂಡಳಿಯ ಟೂಲ್ ಕಿಟ್ ಎಂದು ಸಾರಿ ಸಾರಿ ಹೇಳುವುದಕ್ಕೆ ಸಾಕ್ಷ್ಯ ಇಲ್ಲಿದೆ. ಅಧಿಕಾರದಲ್ಲಿ ಇಲ್ಲದೇ ಇದ್ದರೂ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ತುರುಕುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಸಾಧ್ಯ! ಎಂದು ಸರಣಿ ಟ್ವೀಟ್ ಮೂಲಕ ಶಾಸಕ ಪ್ರಿಯಾಂಕ‌ ಖರ್ಗೆ ಹಾಗೂ ಡಿ.ಕೆ ಶಿವಕುಮಾರ್ ವಿರುದ್ಧ ಬಿಜೆಪಿ ಆರೋಪ ಮಾಡುತ್ತಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments