Monday, August 25, 2025
Google search engine
HomeUncategorizedಈಶ್ವರಪ್ಪ ರಾಜೀನಾಮೆ ನಿರ್ಧಾರಕ್ಕೆ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ

ಈಶ್ವರಪ್ಪ ರಾಜೀನಾಮೆ ನಿರ್ಧಾರಕ್ಕೆ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ

ವಿಜಯಪುರ : ಈಶ್ವರಪ್ಪ ಅವರೇ ಸ್ವತಃ ನಿರ್ಧಾರ ಮಾಡಿ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಹೀಗಾಗಿ ನಮ್ಮ ಪಕ್ಷ ಒಲ್ಲದ ಮನಸ್ಸಿನಿಂದ ರಾಜೀನಾಮೆ ಸ್ವೀಕರಿಸಲಿದೆ ಎಂದು ವಿಜಯಪುರದ ತೊರವಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.

ಕೆ ಎಸ್​​ ಈಶ್ವರಪ್ಪ ಇಂದು ರಾಜೀನಾಮೆ ವಿಚಾರ  ಹಿನ್ನಲೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗ ನಡೆಯುತ್ತಿರುವ ಹಾವಭಾವ ನೋಡಿದ್ರೆ ಇದರ ಹಿಂದೆ ಕಾಂಗ್ರೆಸ್ ಪಾರ್ಟಿ ಇದೆ ಎಂಬುದರ ಬಗ್ಗೆ ಸಂಶಯ ಬರುತ್ತಿದೆ ಎಂದರು.

ಇನ್ನುಕೆಲ ನಾಯಕರಿಂದ ಸಿಡಿ ತಯಾರು ವಿಚಾರಕ್ಕೆ ಪ್ರತಿಕ್ರಿಯಿಸಿ ಸಮಗ್ರವಾಗಿ ತನಿಖೆ ಆಗಬೇಕಿದೆ, ಇದರ ಹಿಂದೆ ಯಾರಿದ್ದಾರೆ ಬಯಲಿಗೆ ಬರಲಿ. ಮೇಲ್ನೋಟಕ್ಕೆ ಇದರ ಹಿಂದೆ ಕುತಂತ್ರ ಇರುವುದು ಗೊತ್ತಗುತ್ತದೆ, ಎಲ್ಲವೂ ತನಿಖೆ ಆಗಬೇಕು ಅಂದರು.

ಅದುವಲ್ಲದೇ ಜಿಲ್ಲೆಗೆ ಸಚಿವ ಸ್ಥಾನ ಸಿಗದ ವಿಚಾರ ಹಿನ್ನಲೆ ಸಚಿವ ಸಂಪುಟ ವಿಸ್ತರಣೆ ಆದಾಗ ಸಿಎಂ ಅದನ್ನು ಡಿಸೈಡ್ ಮಾಡ್ತಾರೆ. ಯಾವಾಗ ಆಗ್ತದೋ ಗೊತ್ತಿಲ್ಲ, ಆದ್ರೆ ಐದು ಸ್ಥಾನ ಖಾಲಿ ಆಗಿರುವುದರಿಂದ ವಿಸ್ತರಣೆ ಆಗುತ್ತದೆ. ಈ ವೇಳೆ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ಸಿಎಂ, ಹೈಕಮಾಂಡ್, ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

RELATED ARTICLES
- Advertisment -
Google search engine

Most Popular

Recent Comments