Saturday, August 23, 2025
Google search engine
HomeUncategorizedಸಿಎಂ ಮೌನಿ ಬಸವ ಅಲ್ಲ ಬೊಮ್ಮಾಯಿ ದುಡಿವ ಬಸವ: ಎಂಪಿ ಪ್ರತಾಪ ಸಿಂಹ

ಸಿಎಂ ಮೌನಿ ಬಸವ ಅಲ್ಲ ಬೊಮ್ಮಾಯಿ ದುಡಿವ ಬಸವ: ಎಂಪಿ ಪ್ರತಾಪ ಸಿಂಹ

ಮೈಸೂರು : ಸಿಎಂ ಬೊಮ್ಮಾಯಿ ಅವರು ಮೌನ ಬಸವಣ್ಣ ಎಂಬ ಪ್ರತಿಪಕ್ಷಗಳ ಟೀಕೆಗೆ ಅವರು ಮಾತನಾಡುವ ಬಸವಣ್ಣ ಅಲ್ಲ, ಅವರು ದುಡಿವ ಬಸವಣ್ಣ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಬೊಮ್ಮಾಯಿ ಅವರು ದುಡಿಮೆಯಿಂದ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಸವಣ್ಣರಾಗಿದ್ದಾರೆ ಹಾಗಾಗಿ ಅವರು ಮೌನ ಬಸವಣ್ಣ ಅಲ್ಲ ದುಡಿವ ಬಸವಣ್ಣ. ಅವರ ದುಡಿಮೆ ಫಲವಾಗಿ ಮೈಸೂರಿನ ಏರ್ಪೋರ್ಟ್ ವಿಸ್ತರಣೆಗೆ ಅನುದಾನ ಕೊಟ್ಟಿದ್ದಾರೆ. ಕೆಆರ್ ಆಸ್ಪತ್ರೆಗೆ ಅನುದಾನ ಕೊಟ್ಟಿದ್ದಾರೆ, ಶಕ್ತಿಧಾಮಕ್ಕೆ ಅನುದಾನ ಕೊಟ್ಟಿದ್ದಾರೆ.ಇಂತಹ ದುಡಿಮೆಯ ಬಸವಣ್ಣನ ಬಗ್ಗೆ ಪ್ರತಿನಿತ್ಯ ಕರ್ಕಸ ಧ್ವನಿಯಲ್ಲಿ ಕಾಕಾ ಎನ್ನುವವರಿಗೆ ಅರ್ಥವಾಗುವುದಿಲ್ಲ.

ಇನ್ನು ಹಿಜಾಬ್ ವಿಚಾರ ಬಂದಾಗ ಪ್ರತಿಪಕ್ಷಗಳು ಯಾಕೆ ಆ ಸಮುದಾಯಕ್ಕೆ ಬುದ್ಧಿ ಹೇಳಲಿಲ್ಲ ಸಮವಸ್ತ್ರ ಎಲ್ಲರಿಗೂ ಕಡ್ಡಾಯ  ಅದನ್ನು ಪಾಲಿಸಿ ಎಂದು ಪ್ರತಿಪಕ್ಷಗಳು ಹೇಳಿದ್ದರೆ ರಾಜ್ಯದಲ್ಲಿ ವಿವಾದಗಳೇ ಸೃಷ್ಟಿಯಾಗುತ್ತಿರಲಿಲ್ಲ. ಆವತ್ತು ಅವರಿಗೆ ಇಲ್ಲದ ಕಾನೂನಿನ ಕಥೆ ಹೇಳಿಕೊಟ್ಟು ಗೊಂದಲ ಸೃಷ್ಟಿಗೆ ಕಾರಣರಾದವರು ಇವರೇ. ಇವತ್ತು ಸರ್ವ ಜನಾಂಗದ ಸಾಮರಸ್ಯದ ಸಭೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಅದುವಲ್ಲದೇ ಬಿಜೆಪಿಗೆ ವಿವಾದಗಳನ್ನು ಎಬ್ಬಿಸಿ ಹಿಂದುಗಳ ದೃಢೀಕರಣ ಮಾಡುವ ಅವಶ್ಯಕತೆ ಇಲ್ಲ. ಹಿಂದೂ, ಮುಸ್ಲಿಂ ಮತ ವಿಭಜನೆ, ಮತ ಕ್ರೂಢೀಕರಣ ಎಲ್ಲಾ ಶುರುವಾಗಿದ್ದು, ವಿಪಕ್ಷಗಳಿಂದಲೇ ಹೊರತು ಬಿಜೆಪಿಯಿಂದಲ್ಲ.

ಕೊಡಿಹಳ್ಳಿ ಸ್ವಾಮಿಜೀ, ಕುಮಾರಸ್ವಾಮಿ, ಸಿದ್ದರಾಮಯ್ಯ ಇಂತವರ ಹೇಳಿಕೆಗಳಲ್ಲಿ ನಿಖರತೆ, ಸ್ಪಷ್ಟತೆ ಯಾವುದು ಇರುವುದಿಲ್ಲ. ಈ ಮೂವರ ಹೇಳಿಕೆಗಳನ್ನು ಯಾರು ಗಂಭೀರವಾಗಿ ಪರಿಗಣಿಸುವುದಿಲ್ಲ. ರಾಜ್ಯದ ಎಲ್ಲಾ ವಿಚಾರಗಳಲ್ಲೂ ಈ ಮೂವರ ಹೇಳಿಕೆಗಳು ಅಸ್ಪಷ್ಟವಾಗಿಯೇ ಇರುತ್ತವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪರ ವಿರೋಧ ಪಕ್ಷದ ನಾಯಕರಿಗೆ  ಸಂಸದ ಪ್ರತಾಪ್ ಸಿಂಹ ಟಾಂಗ್​​ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments