Saturday, August 30, 2025
HomeUncategorizedಬುದ್ಧಿಜೀವಿಗಳ ಪತ್ರವನ್ನ ಕಸದ ಬುಟ್ಟಿಗೆ ಹಾಕಿ :ಶಿವಕುಮಾರ್

ಬುದ್ಧಿಜೀವಿಗಳ ಪತ್ರವನ್ನ ಕಸದ ಬುಟ್ಟಿಗೆ ಹಾಕಿ :ಶಿವಕುಮಾರ್

ಮಂಡ್ಯ : ಬುದ್ದಿಜೀವಿಗಳ ಪತ್ರಕ್ಕೆ ಮಾನ್ಯತೆ ಬೇಡ ಎಂದು ಮಂಡ್ಯದ ಹಿಂದೂ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಅವರಿಗೆ ಸಿಎಂಗೆ ಮನವಿಯನ್ನು ಮಾಡಿದ್ದಾರೆ.

ರಾಜ್ಯದಲ್ಲಿ ಧರ್ಮದ್ವೇಷದ ವಿವಾದ ನಿಯಂತ್ರಿಸುವಂತೆ ಬುದ್ದಿ ಜೀವಿಗಳಿಂದ ಸಿಎಂ ಬಹಿರಂಗ ಪತ್ರ ಹಿನ್ನಲೆಯಲ್ಲಿ ಬುದ್ದಿಜೀವಿಗಳ ಸಹಿ ಸಂಗ್ರಹದಲ್ಲಿ ಯಾವುದೇ ತಿರುಳಿಲ್ಲ. ಬೆಂಗಳೂರಿನ ಡಿಜೆ ಹಳ್ಳಿ-ಕೆಜೆ ಹಳ್ಳಿಯಲ್ಲಿ ನಡೆದ ಗಲಭೆಯ ವೇಳೆ ಯಾರು ತುಟಿ ಬಿಚ್ಚಲಿಲ್ಲ ಎಂದರು.

ನಂತರ ಮಾತನಾಡಿದ ಅವರು ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯಾದಗ ಯಾರು ಸಹ ಮಾತನಾಡಿಲ್ಲ. ಹಿಜಾಬ್ ವಿಚಾರದಲ್ಲಿ ಸಮವಸ್ತ್ರವೇ ಶಾಲೆಗಳಲ್ಲಿ ಕಡ್ಡಾಯವಾದಗ ಸದ್ದು ಇರಲಿಲ್ಲ. ಸಿದ್ದರಾಮಯ್ಯ ಅವರು ಸ್ವಾಮೀಜಿಗಳ ಬಗ್ಗೆ ಹೇಳಿಕೆ ನೀಡಿದ ಸಂದರ್ಭದಲ್ಲಿ ಯಾರು ಪ್ರತಿಕ್ರಿಯೆ ನೀಡಿಲ್ಲ. ಇದೀಗಾ ಬುದ್ದಿಜೀವಿಗಳು ಸಿಎಂ ಗೆ ಬಹಿರಂಗ ಪತ್ರ ಬರೆಯುತ್ತಾರೆ. ಅವರ ಪತ್ರವನ್ನ ಕಸದ ಬುಟ್ಟಿಗೆ ಹಾಕಿ ಎಂದು ಹಿಂದೂ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments