Saturday, August 23, 2025
Google search engine
HomeUncategorizedಮಾಜಿ ಸಿಎಂ ಶೆಟ್ಟರ್​-ಬಿ.ವೈ ವಿಜಯೇಂದ್ರ ಭೇಟಿ; ರಾಜಕೀಯದಲ್ಲಿ ಗುಸುಗುಸು

ಮಾಜಿ ಸಿಎಂ ಶೆಟ್ಟರ್​-ಬಿ.ವೈ ವಿಜಯೇಂದ್ರ ಭೇಟಿ; ರಾಜಕೀಯದಲ್ಲಿ ಗುಸುಗುಸು

ಬೆಂಗಳೂರು: ಬಿ.ವೈ ವಿಜಯೇಂದ್ರ ಮತ್ತು ನನ್ನ ಭೇಟಿಯಲ್ಲಿ ಯಾವ ವಿಶೇಷತೆಯೂ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಅವರು ಶುಕ್ರವಾರ ಹೇಳಿದರು. ಹುಬ್ಬಳ್ಳಿಯಲ್ಲಿಂದು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ ಅವರು, ನಾವು ಒಂದೇ ಪಾರ್ಟಿಯವರು ಭೇಟಿ ಆಗೋದು ಸಹಜ. ಅವರು ಯಾವುದೋ ಕೆಲಸಕ್ಕೆ ಹುಬ್ಬಳ್ಳಿಗೆ ಬಂದಿದ್ದರು. ಹಾಗೆಯೇ ನಮ್ಮ ಮನೆಗೆ ಬಂದು ಹೋಗಿದ್ದಾರೆ. ಬೇರೆ ಪಾರ್ಟಿಯವರು ಭೇಟಿಯಾದ್ರೆ ವಿಶೇಷ ಎನ್ನಬಹುದು. ವಿಶೇಷ ಇದ್ರೆ ನಾನೇ ನಿಮಗೆ ಹೇಳುತ್ತಿದ್ದೆ ಎಂದು ಹೇಳಿದರು.

ಇದೇ ವೇಳೆ ಗುಜರಾತ್​ನಲ್ಲಿ ಭಗವದ್ಗೀತೆ ಕಲಿಕೆಗೆ ಆದೇಶ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾವ ರೀತಿ ಆದೇಶ ಮಾಡಿದ್ದರೋ ನಂಗೆ ಗೊತ್ತಿಲ್ಲ. ಆದರೆ, ಭಗವದ್ಗೀತೆ ಕಲಿಯೋದು ಒಳ್ಳೆಯದು ಎಂದರು. ಸದ್ಯ ಹಿಜಾಬ್ ಬಗ್ಗೆ ಈಗಾಗಲೇ ನ್ಯಾಯಲಯ ಆದೇಶ ನೀಡಿದೆ. ಅದನ್ನ ಪಾಲಿಸೋದು ನಮ್ಮ ಕರ್ತವ್ಯವಾಗಬೇಕು. ಇಲ್ಲಾಂದ್ರೆ ಅರಜಾಕತೆ ಉಂಟಾಗುತ್ತೆ. ಕಾನೂನು ಸುವ್ಯವಸ್ಥೆ ಹಾಳಾಗುತ್ತೆ. ಬೇಕಾದ್ರೆ ಅವರು ಸುಪ್ರೀಂಕೋರ್ಟ್​ಗೆ ಹೋಗಲಿ. ಅಲ್ಲಿ ಅವರಿಗೆ ನ್ಯಾಯ ಸಿಕ್ಕರೆ ಸಿಗಬಹುದು. ಅದು ಬಿಟ್ಡು ನ್ಯಾಯಲಯದ ಆದೇಶದ ವಿರುದ್ದ ಪ್ರತಿಭಟನೆ ಮಾಡೋದು ತಪ್ಪು. ಯಾಕೆಂದ್ರೆ ನ್ಯಾಯಂಗದ ಮೇಲೆ ಒತ್ತಡ ಹೇರಿದ ಹಾಗೆ ಆಗುತ್ತೆ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್​ ಶೆಟ್ಟರ್ ಹೇಳಿದರು.

RELATED ARTICLES
- Advertisment -
Google search engine

Most Popular

Recent Comments