Wednesday, August 27, 2025
HomeUncategorizedಸಿಪಿವೈ ಚಡ್ಡಿ ಹಾಕಿದ್ನೋ ಇಲ್ಲವೋ ಆಗಲೇ ಹೆಚ್ಡಿಡಿ ಕುಟುಂಬಕ್ಕೆ ಸಂಬಂಧವಿತ್ತು

ಸಿಪಿವೈ ಚಡ್ಡಿ ಹಾಕಿದ್ನೋ ಇಲ್ಲವೋ ಆಗಲೇ ಹೆಚ್ಡಿಡಿ ಕುಟುಂಬಕ್ಕೆ ಸಂಬಂಧವಿತ್ತು

ಬೆಂಗಳೂರು: ತಾಜ್​ವೆಸ್ಟೆಂಡ್‌ ಹೋಟೆಲ್​ನಲ್ಲಿ ರಾಸಲೀಲೆ ಮಾಡಲು ಹೋಗುತ್ತಿರಲಿಲ್ಲ. ಸರ್ಕಾರಿ ಬಂಗಲೆ ಇರಲಿಲ್ಲ, ಹಾಗಾಗಿ ರೆಸ್ಟ್ ಮಾಡಲು ಹೋಗುತ್ತಿದ್ದೆ. ಈಗಲೂ ಆ ಹೋಟೆಲ್​ಗೆ ಹೋಗ್ತೀನಿ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು MLC ಸಿ.ಪಿ ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಸಿಪಿವೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಹೆಚ್ಡಿಕೆ ಅವರು, ನನ್ನದು ತೆರೆದ ಪುಸ್ತಕ. ನನ್ನ ಪಿಎ ಈಗಲೂ ಇರ್ತಾರೆ. ಸಾ.ರಾ ಮಹೇಶ್ ಇರ್ತಿದ್ರು. ಇವನತ್ರ ನೋಡಿ ಕಲಿಯಬೇಕಿತ್ತಾ(?) ಇವನು ಗುಡಿಸಲಲ್ಲಿ ಇದ್ದನಾ(?) ಇಲ್ಲೆ ಯುಬಿ ಸಿಟಿ ಪಕ್ಕದಲ್ಲಿ ಇದ್ನಲ್ಲ(!) ನನ್ನದು ಕದ್ದು ಮುಚ್ಚಿ ಯಾವುದೂ ಇಲ್ಲ. ಚನ್ನಪಟ್ಟಣದಲ್ಲಿ ಕೆಲಸವೇ ಅಗಿಲ್ಲ ಅಂತ ಚನ್ನಪಟ್ಟಣಕ್ಕೆ ಬರಲಿ ಎಂದು ಸಿಪಿವೈ ವಿರುದ್ಧ ವಾಗ್ದಾಳಿ ನಡೆಸಿದರು.

ಖಾಸಗಿ ಬಸ್ ನಿಲ್ದಾಣಕ್ಕೆ 30 ಕೋಟಿ ಪ್ರಾಜೆಕ್ಟ್ ಮಾಡಿ ಎಸ್ಟಿಮೇಟ್ ಮಾಡಿದರು. ಅದು ನಂದಾ. ಅವನ್ಯಾರೋ ಕಂಟ್ರಾಕ್ಟರ್ ಕೈಯಲ್ಲಿ ಗುಂಡಿ ಹೊಡೆಸಿದ್ದಾನೆ ಅದಕ್ಕೆ ನಾನು ಹಣ ಕೊಡಿಸಬೇಕಾ(?) ಅಲ್ಲಿ ಹೋಗಿ ನೋಡಿ ತಗಡು ಹೊಡೆಸಿಯಿಟ್ಟಿದ್ದಾನೆ. ಅಂಬೇಡ್ಕರ್ ಭವನ ಗುಂಡಿ ಆಗಿದೆ, ನೀರು ನಿಂತಿದೆ. ಅದನ್ನ ನಾನು ಹೋಗಿ ಕ್ಲೀನ್ ಮಾಡಿಸಬೇಕು. ನಾನು ಕಣ್ಣೀರು ಹಾಕ್ಕೊಂಡ್ ಹೋಗಿಲ್ಲ. ಸಿಎಂ ಆಗಿದ್ದು ಚನ್ನಪಟ್ಟಣಕ್ಕೆ ಅಲ್ಲ, ಇಡೀ ರಾಜ್ಯಕ್ಕೆ. ಕರ್ನಾಟಕ ರಾಜ್ಯದ ಸಮಸ್ಯೆ ಬಗೆಹರಿಸಲು. ಚನ್ನಪಟ್ಟಣಕ್ಕೆ ಶಾಸಕನಾಗಿ ಏನು ಕೆಲಸ ಮಾಡಿಸಬೇಕೋ ಎಲ್ಲಾ ಮಾಡಿದೆ. ಇವನು ಸರ್ಟಿಫಿಕೇಟ್ ಕೊಡೋದಲ್ಲ, ಆರಿಸರೋ ಜನರು. ಸಿನಿಮಾ ತೆಗೆದು ಕಂಡೋರ ದುಡ್ಡು ತೆಗೆದುಕೊಂಡು ಹಾಳು ಮಾಡಿದ ಎಂದು ಕಿಡಿಕಾರಿದ್ದಾರೆ.

ಸಿಪಿವೈ ನನ್ನ ವಿರುದ್ಧ ಆರೋಪ ಮಾಡ್ತಾನಾ(?) ಯಾವುದೇ ಚರ್ಚೆಗೆ ನಾನು ಸಿದ್ಧ. ಬರಲಿ ಚನ್ನಪಟ್ಟಣದಲ್ಲೇ ಚರ್ಚೆ ಮಾಡೋಣ. ದಲಿತರ ಜಮೀನು ಹೊಡೆದಿದ್ದೇನಂತೆ. ಮೆಗಾಸಿಟಿ ಮಾಡಿ ಲೂಟಿ ಹೊಡೆದು ಜನ ಬೀದಿ ಪಾಲಾಗಿದ್ದಾರೆ. ಸೈನಿಕ ಅಂತ ಸಿನಿಮಾ ಮಾಡಲು ಹೋಗಿದ್ದ. ಇಂದಿಗೂ ಹಣ ಕೊಟ್ಟವರು ಬೀದಿಪಾಲಾಗಿದ್ದಾರೆ. ಚನ್ನಪಟ್ಟಣದ ನಮ್ಮ ಸಂಬಂಧ ಇವನು ಚಡ್ಡಿ ಹಾಕಿದ್ನೋ ಇಲ್ಲವೋ, ಆಗಲೇ ದೇವೇಗೌಡರ ಕುಟುಂಬಕ್ಕೆ ಚನ್ನಪಟ್ಟಣ ಸಂಬಂಧ ಇತ್ತು. ಓಪನ್ ಚರ್ಚೆಗೆ ನಾನು ಸಿದ್ಧ, ಬರಲಿ ಯಾವ ವಿಚಾರ ಚರ್ಚೆ ಮಾಡ್ತಾರೆ ಎಂದು ಹೆಚ್​.ಡಿ ಕುಮಾರಸ್ವಾಮಿ ಅವರು ಸಿಪಿವೈಗೆ ಟಾಂಗ್​ ಕೊಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments