Thursday, August 28, 2025
HomeUncategorizedಚುನಾವಣಾ ಪೂರ್ವ ಮೈತ್ರಿ ಇಲ್ಲ, ಅವಧಿಗೂ ಮುನ್ನ ಚುನಾವಣೆ ಸುಲಭವಲ್ಲ: ಹೆಚ್​ಡಿಡಿ

ಚುನಾವಣಾ ಪೂರ್ವ ಮೈತ್ರಿ ಇಲ್ಲ, ಅವಧಿಗೂ ಮುನ್ನ ಚುನಾವಣೆ ಸುಲಭವಲ್ಲ: ಹೆಚ್​ಡಿಡಿ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಪಕ್ಷ ಸಮಾನ ಹೋರಾಟ ನಡೆಸಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ಪ್ರಯತ್ನ ಆರಂಭಿಸಿದ್ದೇವೆ. ಮಾರ್ಚ್ 20ರಂದು ನಗರದ ಅರಮನೆ ಮೈದಾನದಲ್ಲಿ ಪಕ್ಷದ ಸಮಾವೇಶ ನಡೆಯಲಿದೆ. ಅಲ್ಲಿ ನಮ್ಮ ಮುಂದಿನ ಹೋರಾಟದ ತೀರ್ಮಾನವನ್ನು ಪ್ರಕಟಿಸುತ್ತೇವೆ ಎಂದಿದ್ದಾರೆ.

ಸದ್ಯ ರಾಜ್ಯ ರಾಜಕೀಯದಲ್ಲಿ ಇದೀಗ ಚುನಾವಣೆಯದ್ದೇ ಮಾತು.. ಮೂರು ಪಕ್ಷಗಳು ಸಹ ಮುಂಬರುವ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲು ರೆಡಿಯಾಗ್ತಿವೆ.. ಆದ್ರೆ ಇತ್ತ ಜೆಡಿಎಸ್ ಒಳವರ್ಮವನ್ನ ಬಿಜೆಪಿ ಅಗಲಿ, ಕಾಂಗ್ರೆಸ್ ಅಗಲಿ ತಿಳಿಯಲು ಸಾಧ್ಯವಾಗ್ತಿಲ್ಲ.. ಒಂದು ಕಡೆ ಮಾಜಿ ಸಿಎಂ ಎಚ್ಡಿಕೆ ಅಧಿವೇಶನದಲ್ಲಿ ಕಾಂಗ್ರೆಸ್ ವಿರುದ್ಧ ಗುಡುಗುತ್ತಿದ್ದಾರೆ. ಇದಲ್ಲದೆ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಕುಮಾರಸ್ವಾಮಿ ಈ ರೀತಿ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಅರೋಪ ಮಾಡ್ತಿದ್ದಾರೆ. ಆದ್ರೆ, ಇದಕ್ಕೆ ಉತ್ತರ ಕೊಟ್ಟಿರೋ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು ಯಾವುದೇ ಒಳ ಒಪ್ಪಂದ ಇಲ್ಲ ಎಂದು ಸ್ಪಷ್ಟ ಪಡಿಸಿದ್ರು.

ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನ್ನು ಉಳಿಸಿಕೊಳ್ಳಲು ಕಾರ್ಯಕ್ರಮ ರೂಪಿಸಲಾಗಿದೆ.. ಜನತಾ ಜಲಧಾರೆ ಮೂಲಕ ಹೋರಾಟ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಪಕ್ಷದ ಕಾರ್ಯಕರ್ತರಿಗೆ ವಾಸ್ತಾವಾಂಶ ತಿಳಿಸಲು ಮಾರ್ಚ್ 20 ರಂದು ಬೆಂಗಳೂರಿನಲ್ಲಿ ಸಮಾವೇಶ ಮಾಡುತ್ತೇವೆ..ಇನ್ನು ಬಿಜೆಪಿ ಜೊತೆಗೆ ಯಾವುದೇ ರೀತಿ ಒಳ ಒಪ್ಪಂದವಿಲ್ಲ. ಮುಂದಿನ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ನಮ್ಮ ಪಕ್ಷದಿಂದ ಅಭ್ಯರ್ಥಿ ಹಾಕುತ್ತೇವೆ ಎಂದು ದೇವೇಗೌಡರು ಹೇಳಿದ್ರು.

ಇನ್ನು ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ಯಾಕೆ ಅಗಬಾರದು? ನಾವು ಚುನಾವಣೆ ಎದುರಿಸಲು ಸಿದ್ದರಿದ್ದೇವೆ. ಆದರೆ, ಅವಧಿಗೂ ಮುನ್ನ ಚುನಾವಣೆ ಅಷ್ಟು ಸುಲಭವಲ್ಲ.. ಈಗಾಗಲೇ ಯಡಿಯೂರಪ್ಪ ಸಹ ಇದೇ ಮಾತನ್ನು ಹೇಳಿದ್ದಾರೆ. ಚುನಾವಣೆಯಲ್ಲಿ ಯಶಸ್ವಿಯಾಗುವುದು ಸುಲಭದ ಮಾತಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು.

ಕನ್ನಡಿಗರು ಪ್ರಧಾನಿಯಾಗೋದನ್ನು ಸಹಿಸಲಿಲ್ಲ; ಸಿದ್ದು, ಡಿಕೆಶಿ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ

ಇನ್ನು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡರು, ಬಿಜೆಪಿ ,ಜೆಡಿಎಸ್ ಏನು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳುತ್ತಿದ್ದಾರೆ.. ಆದ್ರೆ, ನೀವೇ ಉಳಿಸಿಕೊಡಬೇಕು ಎಂದು ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಆಗ ಏನು ಮಾಡಲಿಲ್ವಾ..? ಕಾವೇರಿ ಕೊಳ್ಳದಲ್ಲಿ ನೀರು ತಂದು ಬಿಟ್ಟಿದ್ದೇವೆ ಎಂದು ಕಾಂಗ್ರೆಸ್ನವರು ಹೇಳುತ್ತಾರೆ.. ಒಬ್ಬ ಕನ್ನಡಿಗ ಪ್ರಧಾನಿಯಾಗಿದ್ದನ್ನು ಸಹಿಸಲು ಅವರಿಗೆ ಆಗಲಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು ಹೆಚ್‌ಡಿಡಿ..

ಇತ್ತ ಜೆಡಿಎಸ್ ಪಕ್ಷವನ್ನ ಕೆಲವರು ತೊರೆಯುತ್ತಿರೋ ಬಗ್ಗೆ ಗುಡುಗಿದ ದೇವೇಗೌಡರು, ಯಾರೋ ಒಂದಿಬ್ಬರು ಪಕ್ಷ ಬಿಟ್ಟರೆ ಹೆದರಲ್ಲ ಎಂದ್ರು. ಇದರ ಬೆನ್ನಲೇ ಸಿಎಂ ಇಬ್ರಾಹಿಂ ಪಕ್ಷ ಸೇರುವ ವಿಚಾರ ಚರ್ಚೆ ಆಗಿಲ್ಲ.. ಆದ್ರೆ ಪಕ್ಷಕ್ಕೆ ಸೇರುವ ವಿಚಾರ ಹಲವು ತಿಂಗಳಿನಿಂದ ಚರ್ಚೆಯಾಗುತ್ತಿದೆ. ಕಾಂಗ್ರೆಸ್ನಲ್ಲಿ ಅವರಿಗೆ ಸಾಕಷ್ಟು ನೋವಾಗಿದೆ. ಇದಕ್ಕಾಗಿ ಪಕ್ಷ ಬಿಡುವ ಬಗ್ಗೆ ತೀರ್ಮಾನ ಮಾಡಿರಬಹುದು. ಆ ನೋವು ಅವರಿಗೆ ಇದೆ, ಮುಂದೇನಾಗುತ್ತೆ ನೋಡೋಣ ಎಂದ್ರು ದೇವೇಗೌಡ್ರು.
ಫ್ಲೋ..

ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು..

RELATED ARTICLES
- Advertisment -
Google search engine

Most Popular

Recent Comments