Monday, August 25, 2025
Google search engine
HomeUncategorizedಕಾಂಗ್ರೆಸ್​ಗೆ ಸಿಎಂ ಕೌಂಟರ್

ಕಾಂಗ್ರೆಸ್​ಗೆ ಸಿಎಂ ಕೌಂಟರ್

ಬೆಂಗಳೂರು: ಯಡಿಯೂರಪ್ಪ ಅಧಿಕಾರದಲ್ಲಿರಲಿ ಇಲ್ಲದಿರಲಿ, ಅವರು ಜನರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ರು.

ವಿಧಾನಸಭೆಯಲ್ಲಿ ಮಾತನಾಡಿದ ಇವರು, ಯಡಿಯೂರಪ್ಪ ಯಾವಾಗಲೂ ಸಮಸ್ಥಿತಿಯಲ್ಲಿಯೇ ಇರ್ತಾರೆ. ರಾಜಕಾರಣಿಗಳು ಇರೋದೇ ರಾಜಕಾರಣ ಮಾಡೋಕೆ. ಜನ ಎಲ್ಲ ಪಕ್ಷಗಳನ್ನೂ ನೋಡ್ತಿದ್ದಾರೆ. ಸಿದ್ರಾಮಣ್ಣನವರು ಹೋರಾಟದಿಂದಲೇ ಬಂದವರು. ನಾನು ಅವರ ಜೊತೆಯೂ ಇದ್ದವನು. ಸಿದ್ರಾಮಣ್ಣಗೆ ಸತ್ಯ ಗೊತ್ತಿದ್ರೂ ಜೋರಾಗಿ ಹೇಳಿದ್ರೆ ಜನನಂಬ್ತಾರೆ ಅಂದುಕೊಂಡಿದ್ರು.

ನಮ್ಮಪ್ಪನಾಣೆ ಕುಮಾರಸ್ವಾಮಿ,ಬಿಎಸ್ ವೈ ಸಿಎಂ ಆಗಲ್ಲ ಎಂದಿದ್ರು. ಆದ್ರೆ ಇಬ್ಬರೂ ಮುಖ್ಯಮಂತ್ರಿಗಳಾದ್ರು. ಮತ್ತೆ ನಾವೇ ಅಧಿಕಾರಕ್ಕೆ ಬರ್ತೇವೆ ಅಂದಿದ್ರು. ಆದರೆ ಅಧಿಕಾರಕ್ಕೆ ಬರೋಕೆ ಸಾಧ್ಯವಾಯ್ತೇ? ನಾವು ಐದರಲ್ಲಿ ನಾಲ್ಕರಲ್ಲಿ ಗೆದ್ದಿದ್ದೇವೆ. ಆಡಳಿತ ವಿರೋಧಿ ಅಲೆ ಎಲ್ಲ ಕಡೆಯೂ ಇರುತ್ತೆ. ಆದರೆ ಅಧಿಕಾರದಲ್ಲಿದ್ದು ಗೆಲ್ಲೋದೇ ಮುಖ್ಯ. ಪಂಜಾಬ್ ನಲ್ಲಿ ಇದ್ದೂ ಯಾಕೆ ಸೋತ್ರಿ. ಜನರ ನಾಡಿಮಿಡಿತ ಚುನಾವಣೆಯಲ್ಲಿ ಗೊತ್ತಾಗುತ್ತೆ. ಇದನ್ನೇ ನಮ್ಮ ನಾಯಕರು ಹೇಳಿದ್ದು. ನಮ್ಮ ಶ್ರಮದ ಮೇಲೆ ವಿಶ್ವಾಸವಿದೆ. ಮೋದಿಯವರ ನಾಯಕತ್ವಕ್ಕೆ ಒಪ್ಪಿಗೆ ಮುದ್ರೆ ಸಿಕ್ಕಿದೆ. 2023 ಕ್ಕೆ ನಾವು ಗೆಲ್ತೇವೆ ಎಂದು ಕಾಂಗ್ರೆಸ್ ಗೆ ಬೊಮ್ಮಾಯಿ ಕೌಂಟರ್ ಕೊಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments