Tuesday, August 26, 2025
Google search engine
HomeUncategorizedಸಿದ್ದರಾಮಯ್ಯ ಮೇಲೆ ಶಾಸಕ ಹರ್ಷವರ್ಧನ್ ಹೊಸ ಆರೋಪ

ಸಿದ್ದರಾಮಯ್ಯ ಮೇಲೆ ಶಾಸಕ ಹರ್ಷವರ್ಧನ್ ಹೊಸ ಆರೋಪ

ಮೈಸೂರು : ವಿಪಕ್ಷದ ನಾಯಕ ಸಿದ್ದರಾಮಯ್ಯನವರು ಬೆಳಗಾಂ ಅಧಿವೇಶನದಲ್ಲಿ ಹತ್ತು ದಿನದ ಕಲಾಪದ ಕಾಲ ಸಮಯವನ್ನು ಹಾಳು ಮಾಡಿದ್ದರು ಎಂದು ಶಾಸಕ ಹರ್ಷವರ್ಧನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ವರ್ಷದಿಂದ ಕೊರೊನಾ ವೈರಸ್‌ನಿಂದಾಗಿ ಜಾತ್ರೆ ನಡೆದಿಲ್ಲ ಆದರೆ, ಎರಡು ವರ್ಷಗಳ ನಂತರ ನಂಜನಗೂಡಿನಲ್ಲಿ ಶಿವರಾತ್ರಿ ಜಾಗರಣೆ ಮಾಡುತ್ತಿದ್ದಾರೆ ಹಾಗೂ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಮೊದಲ ಬಾರಿಗೆ ಆರೇಳು ಲಕ್ಷ ರೂ. ವೆಚ್ಚದಲ್ಲಿ ಜಾಗರಣೆ ಕಾರ್ಯಕ್ರಮ ಆಯೋಜನೆ ಆಗಿದ್ದು ಸಂಜೆ 6ಗಂಟೆಯಿಂದ ಬೆಳಿಗ್ಗೆ 6ರವರೆಗೆ ಅಹೋರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಮತ್ತು ಇನ್ನು ಹದಿನೈದು ದಿನಗಳಲ್ಲಿ ದೊಡ್ಡಜಾತ್ರೆ ನಡೆಯಲಿದೆ ಎಂದು ಶಾಸಕ ಹರ್ಷವರ್ಧನ್ ಹೇಳಿದರು.

ಇನ್ನು ವಿಪಕ್ಷ ಪಕ್ಷದ ನಾಯಕ ಸಿದ್ದರಾಮಯ್ಯನವರು ಬೆಳಗಾಂ ಅಧಿವೇಶನದಲ್ಲಿ ಹತ್ತು ದಿನದ ಕಲಾಪದ ಕಾಲದಲ್ಲಿ ಸಚಿವ ಈಶ್ವರಪ್ಪನವರ ನೆಪವೊಡ್ಡಿ ಹಾಳು ಮಾಡಿದ್ದರು, ಸಚಿವರ ಮೇಲೆ ನ್ಯಾಯಾಲಯದಲ್ಲಿ ತನಿಖೆ ಮಾಡಿಸಲಿ ಈ ರೀತಿ ಕಲಾಪ ಹಾಳು ಮಾಡುವುದು ಸರಿಯಲ್ಲ ಎಂದರು.

ಇನ್ನು ಶಿವಮೊಗ್ಗದಲ್ಲಿ ಒಬ್ಬ ಒಳ್ಳೆಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದವನ ಕೊಲೆಯಾಯಿತು,ನಮ್ಮ ಗೃಹ ಸಚಿವರ ನೆರವಿನಿಂದ 24ಗಂಟೆಯಲ್ಲಿ ಅಪರಾಧಿಗಳನ್ನು ಬಂಧಿಸಿ ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳಲು ಯಶಸ್ವಿಯಾಗಿದ್ದಾರೆ. ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದರ ಬಗ್ಗೆ ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ. ಪರೀಕ್ಷೆ ವೇಳೆಯಲ್ಲಿ ಮಕ್ಕಳಿಗೆ ತೊಂದರೆ ಕೊಡಬಾರದು. ನ್ಯಾಯಾಲಯದ ತೀರ್ಪಿಗೆ ನಾವೆಲ್ಲರೂ ತಲೆಬಾಗಬೇಕು ಎಂದು ಮೈಸೂರಿನ ನಂಜನಗೂಡಿನಲ್ಲಿ ಶಾಸಕ ಹರ್ಷವರ್ಧನ್ ಹೇಳಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments