Monday, August 25, 2025
Google search engine
HomeUncategorizedಇಂದಿನಿಂದ ಮೇಕೆದಾಟು ಪಾದಯಾತ್ರೆ; ಡಿಕೆಶಿವಕುಮಾರ್

ಇಂದಿನಿಂದ ಮೇಕೆದಾಟು ಪಾದಯಾತ್ರೆ; ಡಿಕೆಶಿವಕುಮಾರ್

ಬೆಂಗಳೂರು: ಡಿ.ಕೆ.ಶಿವಕುಮಾರ್ ಶನಿವಾರ ಮಾಧ್ಯಮಕ್ಕೆ ಮೇಕೆದಾಟು ಪಾದಯಾತ್ರೆಯ ಕುರಿತಾಗಿ ಮಾಹಿತಿ ನೀಡಿದರು. ಜನರ ಆರೋಗ್ಯ ಮತ್ತು ಕೋರ್ಟ್ ಆದೇಶದ ಮೇರೆಗೆ ಮೊದಲ ಹಂತದ ಪಾದಯಾತ್ರೆ ನಿಲ್ಲಸಿದ್ದೇವು.
ಈಗ ಮತ್ತೆ ಎರಡನೇ ಹಂತದ ಪಾದಯಾತ್ರೆ ಪ್ರಾರಂಭ ಮಾಡ್ತಿದ್ದೇವೆ. ಇದು ಪಕ್ಷಾತೀತವಾದ ಹೋರಾಟ. ನಾಳೆ 9 ಕ್ಕೆ ಚಾಮುಂಡೇಶ್ವರಿ ಪೂಜೆ ಮಾಡಿ ಪಾದಯಾತ್ರೆ ಪ್ರಾರಂಭ ಮಾಡ್ತೀವಿ ಎಂದು ಹೇಳಿದರು.

ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಹಾಗೂ ಹಲವು ಸ್ವಾಮೀಜಿಗಳು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದ ಡಿಕೆಶಿ 3 ನೇ ತಾರೀಖು ಬಸವನಗುಡಿ ಯಲ್ಲಿ ಬೃಹತ್ ಸಮಾರಂಭ ಇರಲಿದೆ ಎಂದು ಮಾಹಿತಿ ನೀಡಿದರು.

ಟಾಫ್ರಿಕ್ ಸಮಸ್ಯೆ ಪರಿಹಾರಕ್ಕೆ ಮೆಟ್ರೋ ಉಪಯೋಗ ಮಾಡ್ತೀವಿ. ಸಮಾವೇಶಕ್ಕೆ ಬರುವ ಹಾಗೇ ನಾವು ಎಲ್ಲರಿಗೂ ಮನವಿ ಮಾಡ್ತೀವಿ. ಎಷ್ಟು ಸಾಧ್ಯವೋ ಅಷ್ಟು ಮೆಟ್ರೋ ಉಪಯೋಗ ಮಾಡಿ ಬಸವನಗುಡಿ ಕಾರ್ಯಕ್ರಮಕ್ಕೆ ಬನ್ನಿ. ಎಲ್ಲಾ ನಾಗರೀಕರಿಗೆ ಮನವಿ ಮಾಡ್ತೀವಿ. ನಿಮ್ಮ ನೀರು, ಇದೊಂದು ಇತಿಹಾಸ‌.
ನಿಮಗಾಗಿ ನೀರಿಗಾಗಿ ಈ ಪಾದಯಾತ್ರೆಗೆ ಬನ್ನಿ. ರಿಜಿಸ್ಟರ್ ಮಾಡಿಕೊಂಡ್ರೆ ಸರ್ಟಿಫಿಕೇಟ್ ಕೊಡ್ತೀವಿ. ರಿಜಿಸ್ಟರ್ ಮಾಡಿಕೊಳ್ಳಿ ಪಾದಯಾತ್ರೆಗೆ ಬನ್ನಿ ಎಂದು ಕರ್ನಾಟಕದ ಜನತೆಗೆ ಕರೆನೀಡಿದರು.

ಮೇಕೆದಾಟು ಪಾದಯಾತ್ರೆ ಸಮಾಪ್ತಿಯಾಗುವ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನವನ್ನು ಡಿಕೆಶಿ ವೀಕ್ಷಿಸಿದರು. ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ನಾಳೆಯಿಂದ ‌ಪ್ರಾರಂಭವಾಗಲಿದೆ. ಮಾರ್ಚ್ 3 ಕ್ಕೆ ಪಾದಯಾತ್ರೆ ಅಂತ್ಯವಾಗಲಿದೆ.

ಧರ್ಮಸ್ಥಳದಲ್ಲಿ ದಲಿತ ಯುವಕ ಕೊಲೆ ಭಜರಂಗದಳದ ಕಾರ್ಯಕರ್ತ ಮಾಡಿರುವ ಬಗ್ಗೆ ಮಾತನಾಡಿದ ಡಿಕೆಶಿ
ಕಾನೂನು ಎಲ್ಲರಿಗೂ ಒಂದೇ, ಪೊಲೀಸರು ತನಿಖೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಶಿವಮೊಗ್ಗ ಕೇಸ್ ಆಗಲಿ, ಈ ಕೇಸ್ ಆಗಲಿ ಮೊದಲು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಉಕ್ರೇನ್ ನಲ್ಲಿರೋ ಕನ್ನಡಿಗರ ರಕ್ಷಣೆ ವಿಚಾರವಾಗಿಯೂ ಮಾತನಾಡಿದ ಡಿಕೆಶಿ ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಬೇಕು. ಯಾರು ವಾಪಸ್ ಬರಲು ರೆಡಿ ಇದ್ದಾರೋ ಅವ್ರನ್ನ ಕರೆತರಲು ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments