Saturday, August 23, 2025
Google search engine
HomeUncategorizedಕಾಂಗ್ರೆಸ್​​​ನವರಿಗೆ ಅಧಿವೇಶನ ಮುಖ್ಯವಲ್ಲ : ಅಶ್ವತ್ ನಾರಾಯಣ್

ಕಾಂಗ್ರೆಸ್​​​ನವರಿಗೆ ಅಧಿವೇಶನ ಮುಖ್ಯವಲ್ಲ : ಅಶ್ವತ್ ನಾರಾಯಣ್

ರಾಮನಗರ : ರಾಜ್ಯದ ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳು ಮಾರ್ಚ್ 1ರಿಂದ ತನ್ನ ಎಲ್ಲ ಕಡತಗಳನ್ನು ಇ-ಕಚೇರಿ ಮೂಲಕವೇ ಅನ್‍ಲೈನ್‍ನಲ್ಲಿ ಕಳುಹಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಈ ಗಡುವಿನ ನಂತರ ಭೌತಿಕವಾಗಿ ಬರುವ ಎಲ್ಲ ಕಡತಗಳನ್ನು ವಾಪಸ್ ಕಳುಹಿಸುವಂತೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಬಗ್ಗೆ ತಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಇ-ಆಫೀಸ್ ತಂತ್ರಾಂಶದ ಮೂಲಕವೇ ಕಡತಗಳನ್ನು ಕಳುಹಿಸಲು ವಿ.ವಿ.ಗಳಿಗೆ ಈ ಹಿಂದೆಯೇ ಸೂಚಿಸಲಾಗಿತ್ತು. ಆದರೂ ಕೆಲ ವಿ.ವಿ.ಗಳಲ್ಲಿ ಈ ಕೆಲಸ ಆಗಿಲ್ಲದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಎಚ್ಚರಿಸಿದ್ದಾರೆ.

ಇನ್ನು, 27 ರಿಂದ ಮೇಕೆದಾಟು 2.0 ಪಾದಯಾತ್ರೆ ಪ್ರಾರಂಭ ವಿಚಾರವಾಗಿ ಮಾತನಾಡಿ ಕಾಂಗ್ರೆಸ್​​ನವರಿಗೆ ಅಧಿವೇಶನ ಮುಖ್ಯ ಅಲ್ಲ, ಅವರಿಗೆ ಮೇಕೆದಾಟು ಪಾದಯಾತ್ರೆ ಮುಖ್ಯ. ಹಿಂದೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿತ್ತು. ಆಗ ಸಿದ್ದರಾಮಯ್ಯ ಡಿಕೆಶಿಗೆ ಪ್ರಶ್ನೆ ಮಾಡಿದ್ದರು, ನಾನಿಲ್ಲದೇ ಸಭೆ ಯಾಕೆ ಎಂದಿದ್ದರು, ಈಗ ಅವರಿಗೆ ಮೇಕೆದಾಟು ಪಾದಯಾತ್ರೆ ಬಗ್ಗೆ ತವಕ, ತಲ್ಲಣ ಪ್ರಾರಂಭ ಆಗಿದೆ. ಹೀಗಾಗಿ ಕಾಂಗ್ರೆಸ್​ನವರಿಗೆ ನಾನು ಹೇಳಲು ಬಯಸುವುದೇನೆಂದರೆ ನಿಮ್ಮ ಪಾದಯಾತ್ರೆಯಿಂದ ಸುಮ್ಮನ್ನೆ ಇದ್ದ ತಮಿಳುನಾಡು ಈಗ ಎದ್ದು ಕೂತಿದೆ. ಎರಡನೇ ಹಂತದ ಹೊಗೆನಕಲ್ ಕುಡಿಯುವ ನೀರಿನ ಪ್ರಾರಂಭದ ಬಗ್ಗೆ ತಮಿಳುನಾಡಿನ ಸಿಎಂ ಸ್ಟಾಲಿನ್ ಪ್ರಸ್ತಾಪ ಮಾಡಿದ್ದಾರೆ ಆದರೆ ಇದರ ವಿರುದ್ಧವಾಗಿ ಡಿ.ಕೆ.ಶಿವಕುಮಾರ್ ಒಂದು ಹೇಳಿಕೆ ನೀಡಿಲ್ಲ ಎಂದು ಕಿಡಿಕಾರಿದರು.

ಹಾಗಾದರೆ ಈ ವಿಚಾರದಲ್ಲಿ ನಿಮ್ಮ ನಿಲುವೇನು, ಕಾಂಗ್ರೆಸ್ ನಿಲುವೇನು ಮೇಕೆದಾಟು ಪಾದಯಾತ್ರೆಗೆ ಮುನ್ನ ನಿಮ್ಮ ನಿಲುವನ್ನ ಸ್ಪಷ್ಟಪಡಿಸಿಬೇಕು. ಮೇಕೆದಾಟು ಆಗಲೇಬೇಕು, ಕುಮಾರಸ್ವಾಮಿ ಸಿಎಂ ಇದ್ದಾಗ ಡಿಪಿಆರ್ ನೀಡಿದ್ದರು. ಅದನ್ನ ನಾವು ಒಪ್ಪಿಕೊಂಡಿದ್ದೇವೆ, ಸಿಎಂ ಸಹ ಬದ್ಧರಾಗಿದ್ದಾರೆ. ಮೇಕೆದಾಟಿನ ಪರವಾಗಿ ಬಿಜೆಪಿ ಸರ್ಕಾರ ಇದೇ, ಕರ್ನಾಟಕದ ನೀರಾವರಿ ವಿಚಾರವಾಗಿ ನಾವಿರುತ್ತೇವೆ ಇದು ನಮ್ಮ ನಿಲುವು ಈ ವಿಚಾರವಾಗಿ ಸ್ಪಷ್ಟವಾಗಿದೆ ಎಂದು ಅಶ್ವಥ್ ನಾರಾಯಣಗೌಡ ಸುದ್ದಿಗೋಷ್ಟಿ ಪ್ರತಿಕ್ರಿಯಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments