Saturday, August 23, 2025
Google search engine
HomeUncategorizedಹಿಜಾಬ್ ಮೇಲೆ ಅತೀವ ಪ್ರೀತಿ : ಸಚಿವ ಆರ್ ಅಶೋಕ್

ಹಿಜಾಬ್ ಮೇಲೆ ಅತೀವ ಪ್ರೀತಿ : ಸಚಿವ ಆರ್ ಅಶೋಕ್

ಬೆಂಗಳೂರು : ಕಾಂಗ್ರೆಸ್‍ನವರಿಗೆ ಕೇಸರಿ ಶಾಲನ್ನು ಒಪ್ಪಿಕೊಳ್ಳಲು ಆಗದೆ, ಹಿಜಾಬ್ ಸಮರ್ಥಿಸಿಕೊಳ್ಳಲೂ ಆಗದೆ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಸರಿ ಶಾಲು ಬಗ್ಗೆ ಮಾತನಾಡಿದರೆ ಹಿಂದೂಗಳ ಮತ ಕೈ ತಪ್ಪಬಹುದೆಂಬ ಭೀತಿಯಲ್ಲಿದ್ದಾರೆ. ಮತ್ತೊಂದು ಕಡೆ ಹಿಜಾಬ್ ಸಮರ್ಥಿಸಿಕೊಳ್ಳದಿದ್ದರೆ ಅದೇ ಸಮುದಾಯದ ಮತಗಳು ಕೂಡ ನಮಗೆ ಬರುವುದಿಲ್ಲ ಎಂಬದೂ ಗೊತ್ತಾಗಿದೆ. ಹೀಗಾಗಿಯೇ ಸಚಿವ ಈಶ್ವರಪ್ಪನವರ ರಾಜೀನಾಮೆ ನಾಟಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದವರಿಗೆ ಕೇಸರಿ ಪಕ್ಷದವರನ್ನು ಕಂಡರೆ ಆಗುವುದಿಲ್ಲ. ಯಾವಾಗಲೂ ಹಿಜಾಬ್ ಮೇಲೆ ಅತೀವ ಪ್ರೀತಿ. ಕೇಸರಿ ವಿರುದ್ಧ ಮಾತನಾಡಿದರೆ ಹಿಂದು ಸಮುದಾಯ ಚುನಾವಣೆಯಲ್ಲಿ ಕೈ ಕೊಡಬಹದೆಂಬ ಆತಂಕದಿಂದಲೇ ಅಹೋರಾತ್ರಿ ಧರಣಿ ನಾಟಕ ಪ್ರಾರಂಭಿಸಿದ್ದಾರೆ ಎಂದು ಕುಹುಕವಾಡಿದರು.

RELATED ARTICLES
- Advertisment -
Google search engine

Most Popular

Recent Comments