Saturday, August 23, 2025
Google search engine
HomeUncategorized‘ಹಿಜಾಬ್​ ವಿವಾದ ಬಿಜೆಪಿ ಸೃಷ್ಟಿ’- ಸಿದ್ದರಾಮಯ್ಯ

‘ಹಿಜಾಬ್​ ವಿವಾದ ಬಿಜೆಪಿ ಸೃಷ್ಟಿ’- ಸಿದ್ದರಾಮಯ್ಯ

ಬೆಂಗಳೂರು: ಅನಗತ್ಯವಾಗಿ ಹಿಜಾಬ್ ವಿಚಾರವನ್ನ ಬಿಜೆಪಿಯವರು ಸಮಸ್ಯೆ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಲ್ಪಸಂಖ್ಯಾತರು ಶಿಕ್ಷಣದಲ್ಲಿ ತುಂಬಾ ಹಿಂದೆ ಇದ್ರು. ಇತ್ತೀಚೆಗೆ ಅವರು ಶಿಕ್ಷಣ ಪಡೆಯುತ್ತಿದ್ದಾರೆ. ಸಂಘ ಪರಿವಾರದವರು ಅವರನ್ನ ಶಿಕ್ಷಣದ ವಂಚಿತರನ್ನಾಗಿ ಮಾಡಲು ಹುನ್ನಾರ ಮಾಡುತ್ತಿದ್ದಾರೆ. ಹಿಜಾಬ್ ವಿವಾದ ಹುಟ್ಟಿಹಾಕಿದ್ದೇ ಸಂಘ ಪರಿವಾರದವರು ಎಂದು ಕಿಡಿಕಾರಿದರು.

ಬಹಳ ಕಾಲದಿಂದ ಹಿಜಾಬ್ ವ್ಯವಸ್ಥೆ ನಡೆದುಕೊಂಡು ಬಂದಿದೆ. ಕೋರ್ಟ್​ ಕೂಡ ಇದನ್ನ ಗಂಭೀರವಾಗಿ ತೆಗೆದುಕೊಂಡಿದೆ. ಎಲ್ಲ ಧರ್ಮ ಸಂಪ್ರದಾಯ ಪ್ರಕಾರ ಮಾಡ್ಕೊಂಡು ಬರ್ತಾಯಿದ್ದಾರೆ. ಧರ್ಮ ಆಚರಣೆಗೆ ಸಂವಿಧಾನ ಹಕ್ಕು ನೀಡಿದೆ. ಇದು ಸಂವಿಧಾನದ ಹಕ್ಕು ಕೂಡ. ಇದಕ್ಕೆ ಯಾರೂ ಅಡ್ಡಿ ಮಾಡಬಾರದು. ಇದನ್ನ ಈಗ ವಿವಾದ ಮಾಡಲಾಗಿದೆ ಎಂದರು.

RELATED ARTICLES
- Advertisment -
Google search engine

Most Popular

Recent Comments