Tuesday, August 26, 2025
Google search engine
HomeUncategorizedಅಧ್ಯಕ್ಷ ಸ್ಥಾನ ಸಿಗ್ತಿದ್ದಂತೆ ನಲಪಾಡ್​​​​ಗೆ ಬಿಜೆಪಿ ಕಾಟ ಶುರು..!

ಅಧ್ಯಕ್ಷ ಸ್ಥಾನ ಸಿಗ್ತಿದ್ದಂತೆ ನಲಪಾಡ್​​​​ಗೆ ಬಿಜೆಪಿ ಕಾಟ ಶುರು..!

ಬೆಂಗಳೂರು : ರಾಜ್ಯ ಯೂತ್ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ‌‌..ನಲಪಾಡ್ ಹಾಗೂ ರಕ್ಷಾ ರಾಮಯ್ಯ ಬಣಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ನಿನ್ನೆಯ ಪದಗ್ರಹಣ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ರಕ್ಷಾ ರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಕೂಡ ಸರಣಿ‌ ಟ್ವೀಟ್ ಮೂಲಕ ನಲಪಾಡ್ ವಿರುದ್ಧ ಮುಗಿಬಿದ್ದಿದೆ

ರಾಜ್ಯ ಯೂತ್ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ನಲಪಾಡ್ ಹಾಗೂ ರಕ್ಷಾ ರಾಮಯ್ಯ ಬಣಗಳ ನಡುವೆ ಒಡಕುಂಟಾಗಿದೆ.. ಹಿಂದೆಯೂ‌ ಅಧಿಕಾರ ಹಂಚಿಕೆ ಕುರಿತಂತೆ ಇಬ್ಬರ ನಡುವೆ ಕೋಲ್ಡ್ ವಾರ್ ಮುಂದುವರಿದಿತ್ತು..ಈ ವೇಳೆ ಮಧ್ಯಪ್ರವೇಶಿಸಿದ್ದ ಕೆಪಿಸಿಸಿ‌ ಅಧ್ಯಕ್ಷ ಡಿಕೆಶಿ ಹಾಗೂ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಇಬ್ಬರ ನಡುವೆ ಸಂಧಾನ ಮಾಡಿದ್ದರು. ಒಂದು ವರ್ಷ ರಕ್ಷಾ ರಾಮಯ್ಯ ಅಧ್ಯಕ್ಷರಾಗಿ ಮುಂದುವರಿಯಲಿ, ನಂತ್ರ ನಲಪಾಡ್‌ಗೆ ಅಧಿಕಾರ ಬಿಟ್ಟುಕೊಡಬೇಕೆಂದು ಸೂಚಿಸುವ ಮೂಲಕ ಸಮಸ್ಯೆ ಬಗೆಹರಿಸಿದ್ದರು. ಅದ್ರಂತೆ ಫೆಬ್ರವರಿ ೧ ರಂದು ರಕ್ಷಾ ರಾಮಯ್ಯ ನಲಪಾಡ್ ಗೆ ಅಧಿಕಾರ ಬಿಟ್ಟುಕೊಡಬೇಕಿತ್ತು. ಆದ್ರೆ ನಲಪಾಡ್ ಮೇಲೆ ಹಲವು ಆರೋಪ ಎದುರಾಗಿದ್ದರಿಂದ ಸ್ವಲ್ಪ ದಿನ ಕಾಯುವಂತೆ ಸಿದ್ದರಾಮಯ್ಯನವರೇ ರಕ್ಷಾರಾಮಯ್ಯಗೆ ಸೂಚಿಸಿದ್ದರು. ಹೀಗಾಗಿ‌ ರಕ್ಷಾ ರಾಮಯ್ಯ ಅಧಿಕಾರ ಹಸ್ತಾಂತರಿಸಿರಲಿಲ್ಲ..ಆದ್ರೆ, ಹೈಕಮಾಂಡ್ ಮೇಲೆ ಡಿಕೆಶಿ ಒತ್ತಡ ತಂದು ನಲಪಾಡ್‌ಗೆ ಅಧಿಕಾರ‌ ಕೊಡಿಸುವಲ್ಲಿ ಯಶಸ್ವಿಯಾಗಿದ್ರು. ಅದ್ರಂತೆ ಕೆಪಿಸಿಸಿ ಹೊಸ ಕಟ್ಟಡದಲ್ಲಿ‌ ಅದ್ಧೂರಿ ಪದಗ್ರಹಣ ಹಮ್ಮಿಕೊಂಡಿದ್ರು. ಆದ್ರೆ, ಅಧಿಕಾರ ಹಸ್ತಾಂತರಿಸಬೇಕಾದ ರಕ್ಷಾರಾಮಯ್ಯ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ರು.

ರಾಜ್ಯ ಯೂತ್ ಕಾಂಗ್ರೆಸ್ ಭಿನ್ನಮತ ಶಮನಕ್ಕೆ ಹೈಕಮಾಂಡ್ ಮುಂದಾಗಿದೆ. ರಕ್ಷಾ ರಾಮಯ್ಯ ಹಾಗೂ ನಲಪಾಡ್ ಬಣಗಳ ಕೋಲ್ಡ್ ವಾರ್ ಗೆ ತೇಪೆ ಹಾಕೋಕೆ ಹೊರಟಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರಕ್ಷಾ ರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ. ಕೊಟ್ಟ ಕೆಲಸ ಸಮರ್ಥವಾಗಿ ನಿಭಾಯಿಸಿದ್ದೀರ. ಮುಂದೆ ನಿಮಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ಮಾನ ನೀಡ್ತೇವೆ..ಯೂತ್ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸ್ಥಾನದ ಜೊತೆ ಎರಡು ರಾಜ್ಯಗಳ ಉಸ್ತುವಾರಿ ಮಾಡ್ತೇವೆ..ಮುಂದೆ ಅಸೆಂಬ್ಲಿ ಇಲ್ಲವೇ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವ ಬಗ್ಗೆ ಚಿಂತನೆ ಮಾಡ್ತೇವೆ.. ಪಂಚರಾಜ್ಯಗಳ ಚುನಾವಣಾ ಪ್ರಚಾರದಿಂದ ರಾಹುಲ್‌ ಹಾಗೂ ಪ್ರಿಯಾಂಕಾ ಗಾಂಧಿ ದೆಹಲಿಗೆ ವಾಪಸಾದ ನಂತ್ರ ನಾನೇ ಮಾತನಾಡ್ತೇನೆ. ಪಕ್ಷ ಸಂಘಟನೆಯ ಕಡೆ ಗಮನಹರಿಸಿ ಅಂತ ಭರವಸೆ ನೀಡಿದ್ದಾರೆ..

ಇನ್ನು ಯೂತ್ ಕಾಂಗ್ರೆಸ್ ಭಿನ್ನಮತದ ಜೊತೆಗೆ ನಲಪಾಡ್‌ಗೆ ಬಿಜೆಪಿ ನಾಯಕರ ಕಾಟ ಶುರುವಾಗಿದೆ. ಅಧಿಕಾರ ಸ್ವೀಕರಿಸಿ ಒಂದು ದಿನವೂ ಮುಗಿದಿಲ್ಲ. ಆಗ್ಲೇ ಬಿಜೆಪಿ‌ ಸರಣಿ‌ ಟ್ವೀಟ್ ಮಾಡುವ ಮೂಲಕ ನಲಪಾಡ್ ಆಯ್ಕೆಯನ್ನು ಟೀಕಿಸಿದೆ. ನಲಪಾಡ್‌ ಮೇಲಿರುವ ಹಿಂದಿನ ಪ್ರಕರಣಗಳ ಬಗ್ಗೆ ಐಪಿಸಿ ಸೆಕ್ಷನ್ ಸಮೇತ ವಿವರಿಸಿ ನಲಪಾಡ್ ತೇಜೋವಧೆ ಮಾಡುವ ಪ್ರಯತ್ನ ನಡೆಸಿದೆ. ಈ ಮೂಲಕ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯನ್ನೂ ಟಾರ್ಗೆಟ್ ಮಾಡಿದೆ.. ಗುರುವಿನಂತೆಯೇ ಶಿಷ್ಯ ಎಂಬುದನ್ನ ಎತ್ತಿಹಿಡಿಯುವ ಮೂಲಕ ಡ್ಯಾಮೇಜ್ ಮಾಡೋಕೆ ಮುಂದಾಗಿದೆ.

ಒಟ್ನಲ್ಲಿ ನಲಪಾಡ್ ಅಧಿಕಾರ ಸ್ವೀಕರಿಸಿ ಒಂದು ದಿನವೂ ಪೂರ್ಣವಾಗಿಲ್ಲ ಆಗಲೇ ರಾಜ್ಯ ಯೂತ್ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ.. ಇದ್ರ ನಡುವೆ ಹಳೆಯ ಪ್ರಕರಣಗಳನ್ನ ಕೆದಕಿ ಬಿಜೆಪಿ ಕೂಡ‌ ಸರಣಿ ಟ್ವೀಟ್ ಮಾಡಿದೆ. ಈ ಮೂಲಕ ನಲಪಾಡ್ ತೇಜೋವಧೆ ಮಾಡುವ ಪ್ರಯತ್ನ ಮುಂದುವರಿಸಿದೆ.. ಅಧಿಕಾರ ಸಿಕ್ಕ ಖುಷಿಯಲ್ಲಿರುವ ನಲಪಾಡ್‌ಗೆ ಸ್ವಪಕ್ಷೀಯ ಭಿನ್ನಮತ ಹಾಗೂ ಬಿಜೆಪಿಯ ಟ್ವೀಟ್ ಇರಿಸುಮುರಿಸು ತಂದಿಟ್ಟಿದೆ.

RELATED ARTICLES
- Advertisment -
Google search engine

Most Popular

Recent Comments