Monday, September 8, 2025
HomeUncategorized'ಕೈ ಅಧಿಕಾರಕ್ಕೆ ಬಂದ್ರೆ ಇಡೀ ರಾಜ್ಯದ ಜನರಿಗೆ ಹಿಜಾಬ್ ಹಾಕಿಸ್ತಾರೆ'

‘ಕೈ ಅಧಿಕಾರಕ್ಕೆ ಬಂದ್ರೆ ಇಡೀ ರಾಜ್ಯದ ಜನರಿಗೆ ಹಿಜಾಬ್ ಹಾಕಿಸ್ತಾರೆ’

ಬೆಂಗಳೂರು : ಹಿಜಾಬ್​​​​ಗೆ ಸಂಬಂಧಪಟ್ಟಂತೆ ನ್ಯಾಯಾಲಯದ ಆದೇಶ ನಿರೀಕ್ಷೆ ಮಾಡ್ತಿದ್ದೇವೆಂದು ಸಚಿವ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು ಯಾವತ್ತೂ ನಾವು ನೆಲದ ಕಾನೂನು ಗೌರವಿಸುತ್ತೇವೆ. ಎಲ್ಲರೂ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಕಾಯ್ದೆಯನ್ನು ಅನುಷ್ಟಾನಕ್ಕೆ ತರುವ ಕೆಲಸ ಆಗಬೇಕು. ಕಾಂಗ್ರೆಸ್ ದ್ವೇಷವನ್ನು ಹಚ್ಚುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ದೇಶ ವಿಭಜನೆಗೆ ಕಾಂಗ್ರೆಸ್ ಬೆಂಬಲಿಸುತ್ತದೆ ಯಾರು ಪ್ರತ್ಯೇಕವಾಗಿ ಇರಬೇಕು ಅಂತ ಬಯಸುತ್ತಿದ್ದಾರೋ ಅವರನ್ನು ಕಾಂಗ್ರೆಸ್ ಪಕ್ಷವು ಬೆಂಬಲಿಸುತ್ತದೆ. ಸಮವಸ್ತ್ರ ಸಂಹಿತೆ ಎಲ್ಲರೂ ಪಾಲಿಸಿಕೊಂಡು ಬರಬೇಕು ಎಂದು ಹೇಳಿದರು.

ಇನ್ನು, ಕರ್ನಾಟಕವನ್ನು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಏನು ಮಾಡುವುದಕ್ಕೆ ಹೊರಟಿದ್ದೀರಿ ಎಂದು ಪ್ರಶ್ನೆ ,ಮಾಡಿದ್ದಾರೆ ? ತಿಲಕ ಇಟ್ಟುಕೊಂಡು ಬಂದವರನ್ನು ಕಾಂಗ್ರೆಸ್ ನಾಯಕರು ವಿರೋಧ ಮಾಡ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದುಬಿಟ್ಟರೆ ಇಡೀ ರಾಜ್ಯದ ಜನರಿಗೆ ಹಿಜಾಬ್ ಹಾಕಿಸುತ್ತಾರೆ. ರಾಷ್ಟ್ರ ಧ್ವಜವನ್ನು  ಇಳಿಸಿದರು ಎಂಬ ಸುಳ್ಳನ್ನು ಸ್ವತಃ ಕೆಪಿಸಿಸಿ ಅಧ್ಯಕ್ಷರೇ ಹೇಳುತ್ತಾರೆ ಎಂದು ಸಚಿವ ಸುನೀಲ್​​ ಕುಮಾರ್​​ ಕಾಂಗ್ರೆಸ್​​ ವಿರುದ್ದ ಕಿಡಿಕಾರಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments