Sunday, September 7, 2025
HomeUncategorizedಸಂಘರ್ಷದ ಹಿಂದಿದೆ ರಾಜಕೀಯ : ಆರಗ ಜ್ಞಾನೇಂದ್ರ

ಸಂಘರ್ಷದ ಹಿಂದಿದೆ ರಾಜಕೀಯ : ಆರಗ ಜ್ಞಾನೇಂದ್ರ

ಬೆಂಗಳೂರು :  ವಿದ್ಯಾರ್ಥಿಗಳ ಮನಸ್ಸಲ್ಲಿ ಮತೀಯ ಭಾವನೆಗಳು ತುಂಬಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯ ಅಹಿತಕರ ಘಟನೆಯ ಕುರಿತು ಸಿಎಂಗೆ ಸ್ಪಷ್ಟ ಮಾಹಿತಿ ನೀಡಿದ್ದೇವೆ. ನಾನು, ಪೊಲೀಸ್ ಅಧಿಕಾರಿಗಳು ಸೇರಿ ನಿನ್ನೆ ಮಾಹಿತಿ ನೀಡಿದ್ದೇವೆ. ಅಂತಹ ಘಟನೆಗಳನ್ನು ಕಂಟ್ರೋಲ್ ಮಾಡುವುದಕ್ಕೆ ರಜೆ ಸಹ ಘೋಷಣೆ ಮಾಡಿದ್ದೇವೆ ಎಂದರು.

ಪ್ರಕರಣ ಕೋರ್ಟ್ ನಲ್ಲಿ ಇದೆ. ಘಟನೆ ಹಿಂದೆ ಯಾರಿದ್ದಾರೆ ಅನ್ನೋದನ್ನ ತನಿಖೆ ಆಗುತ್ತಿದೆ. ಈ ಆಟವನ್ನ ನಿಲ್ಲಿಸುತ್ತೇವೆ. ನಿನ್ನೆ ಪೊಲೀಸರು ಬಹಳ ಸಂಯಮದಿಂದ ವರ್ತಿಸಿದ್ದಾರೆ. ದೇಶ ಒಡೆಯುವ ಕೆಲಸ ಆಗಬಾರದು. ಸ್ವಾತಂತ್ರ ಪೂರ್ವ ಘಟನೆ ಮರುಕಳಿಸಬಾರದು. ಆಟದ ಹಿಂದೆ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಇವೆ ಎಂದು ಹೇಳಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments