Friday, August 29, 2025
HomeUncategorizedಶಾಸಕ ಶರತ್​​​ಗೆ ಮೂಲ ಕಾಂಗ್ರೆಸ್ಸಿಗರಿಂದ ಅಸಮಾಧಾನ : ಸಿದ್ದರಾಮಯ್ಯಗೆ ದೂರು

ಶಾಸಕ ಶರತ್​​​ಗೆ ಮೂಲ ಕಾಂಗ್ರೆಸ್ಸಿಗರಿಂದ ಅಸಮಾಧಾನ : ಸಿದ್ದರಾಮಯ್ಯಗೆ ದೂರು

ಬೆಂಗಳೂರು : ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಸಮಾಧಾನ, ಬಂಡಾಯದ ಲಕ್ಷಣಗಳು ಅಲ್ಲಲ್ಲಿ ಶುರುವಾಗುತ್ತಿವೆ. ಇದರ ಮುಂದುವರಿದ ಭಾಗವಾಗಿ ಹೊಸಕೋಟೆ ಕಾಂಗ್ರೆಸ್ ನಲ್ಲೂ ಅಸಮಾಧಾನ ಭುಗಿಲೆದ್ದಿದೆ ಎಂದು ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಕೆಲವು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಉಪ ಚುನಾವಣೆಯಲ್ಲಿ ಗೆದ್ದಿದ್ದ ಶರತ್​​ ಇತ್ತೀಚೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹಸದಸ್ಯನಾಗಿ ಶರತ್ ಸೇರ್ಪಡೆಯಾದ ಬೆನ್ನಲ್ಲೇ ಮೂಲ ಕಾಂಗ್ರೆಸ್ಸಿಗರಿಂದ ಅಸಮಾಧಾನ ಮೂಡಿದೆ. ತಂದೆಯ ಶೈಲಿಯ ರಾಜಕೀಯ ಆರಂಭಿಸಿದ್ದಾರೆ. ಶರತ್ ಕಾಂಗ್ರೆಸ್ ಸೇರ್ಪಡೆಗೊಂಡ ಆರಂಭದಲ್ಲಿ ಎಲ್ಲವೂ ಸರಿಯಿದ್ದರೂ ಇದೀಗ ಅಸಮಾಧಾನ ಮೂಲ ಕಾಂಗ್ರೆಸ್ಸಿಗರಿಂದ ಶುರುವಾಗಿದೆ.

ಶರತ್ ಬಚ್ಚೇಗೌಡ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣನೆ ಮಾಡುತ್ತಿದ್ದಾರೆ. ತಮ್ಮ ತಂದೆಯ ಶೈಲಿಯ ರಾಜಕೀಯ ಆರಂಭಿಸಿದ್ದಾರೆ. ಕುಟುಂಬ ಸದಸ್ಯರ ಟೀಮ್ ಮಾಡಿಕೊಂಡಿದ್ದಾರೆ ಎಂಬುದು ಅಸಮಾಧಾನಿತ ಕೈ ಕಾರ್ಯಕರ್ತರ ಆರೋಪವಾಗಿದೆ.

ಈ ಹಿಂದೆ ನಾವೆಲ್ಲ ಬಚ್ಚೇಗೌಡರ ಕುಟುಂಬದ ದೌರ್ಜನ್ಯದ ವಿರುದ್ಧ ಹೋರಾಡಿದ್ದೇವೆ. ಕೋರ್ಟ್ ಗಳಲ್ಲಿ ಕೇಸುಗಳು ಈಗಲೂ ಇವೆ. ಎಂಟಿಬಿ ನಾಗರಾಜ್ ಕಾಂಗ್ರೆಸ್​​​ನಲ್ಲಿ ಇದ್ದಾಗ ಅವರ ಜೊತೆ ಸಹಜವಾಗಿಯೆ ಇದ್ದೆವು. ತಮ್ಮದೇ ಆದ ಟೀಮ್ ಕಟ್ಟಿಕೊಂಡು ಮೂಲ ಕಾಂಗ್ರೆಸ್ಸಿಗರ ಕಡೆಗಣನೆ ಮಾಡುತ್ತಿದ್ದಾರೆ. ಇದರ ಶರತ್ ವಿರುದ್ಧ ಸಿಡಿದೆದ್ದ ಕೈ ಅಸಮಾಧಾನಿತರು ಎಂಟಿಬಿ ನಾಗರಾಜ್ ಪರವಾಗಿ ಬ್ಯಾಟ್ ಬೀಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಸೇರ್ಪಡೆ ಆದರೂ ಬಿಜೆಪಿ ಜೊತೆ ಶರತ್ ಸ್ನೇಹ ಇಟ್ಟುಕೊಂಡಿದ್ದಾರೆಂದು ಶರತ್ ಬಚ್ಚೇಗೌಡ ವಿರುದ್ಧ  ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಶರತ್ ಗೆ ಟಿಕೆಟ್ ಕೊಡದಂತೆ ದೂರು ನೀಡಿದ್ದಾರೆ. ಅಲ್ಲದೇ ಕಳೆದ ಎರಡು ದಿನದ ಹಿಂದೆ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಪ್ರಸಾದ್ ಮತ್ತು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾಂತರಾಜ್ ನೇತ್ರತ್ವದಲ್ಲಿ ನೂರಾರು ನಾಯಕರಿಂದ ಭೇಟಿಯಾಗಿ ದೂರು ನೀಡಲಾಗಿದೆ.

RELATED ARTICLES
- Advertisment -
Google search engine

Most Popular

Recent Comments