Tuesday, August 26, 2025
Google search engine
HomeUncategorizedತೆರಿಗೆ ರೂಪದಲ್ಲಿ ಹೆಚ್ಚಿನ ಹಣ ಕೊಡುತ್ತಿರುವುದು ನಮ್ಮ ಕರ್ನಾಟಕ ರಾಜ್ಯ:ಹೆಚ್ ಡಿಕೆ

ತೆರಿಗೆ ರೂಪದಲ್ಲಿ ಹೆಚ್ಚಿನ ಹಣ ಕೊಡುತ್ತಿರುವುದು ನಮ್ಮ ಕರ್ನಾಟಕ ರಾಜ್ಯ:ಹೆಚ್ ಡಿಕೆ

ಮಂಡ್ಯ:ಇಂದು ಕೇಂದ್ರದ ಬಜೆಟ್ ಮಂಡನೆ ವಿಚಾರದ ಕುರಿತು ಮದ್ದೂರಿನಲ್ಲಿ ಮಾಜಿ ಸಿಎಂಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಬೇಡಿಕೆಗಳನ್ನು ಪಡೆಯಬೇಕೆಂದು ನಿರೀಕ್ಷೆ ಇದೆ.ನಮ್ಮ ನಿರೀಕ್ಷೆ ಈಡೇರುತ್ತೆ ಅನ್ನುವ ನಮಗೆ ನಂಬಿಕೆ ಇಲ್ಲ.ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಜಾರಿ ಮಾಡಬೇಕೆಂಬ ಹಲವು ವರ್ಷಗಳ ಬೇಡಿಕೆ ಇದೆ.ಆದರೆ ಕೇಂದ್ರ ಸರ್ಕಾರ ಈಡೇರಿಸಲಿಲ್ಲ.ನಮ್ಮ ದುರಾದೃಷ್ಟ ನಮ್ಮ ನೀರಾವರಿ ಯೋಜನೆಯನ್ನು ನಮ್ಮ ರಾಜ್ಯದ ಜನರ ತೆರಿಗೆ ಹಣದಿಂದ ಜಲಾಶಯ ಕಟ್ಟಿದ್ದೇವೆ.ಕರ್ನಾಟಕ ರಾಜ್ಯಕ್ಕೆ ಮೊದಲಿಂದಲೂ ಅನ್ಯಾಯವಾಗಿದೆ ಎಂದರು.

ರಾಜ್ಯದ ಕೊಡುಗೆ ದೇಶಕ್ಕೆ ದೊಡ್ಡ ಮಟ್ಟದಲ್ಲಿದೆ.ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಬೇಡಿಕೆ ಇಟ್ಟಿದ್ದರು.ನಮ್ಮನ್ನು ಒಂದು ರೀತಿಯ ಮಲತಾಯಿ ಧೋರಣೆಯಿಂದ ಕಂಡಿದ್ದಾರೆ.ಈ ಬಾರಿ ನೋಡೋಣ ನಮ್ಮ ರಾಜ್ಯಕ್ಕೆ ಏನು ಕೊಡ್ತಾರೆ.ರಾಷ್ಟ್ರೀಯ ಪಕ್ಷಗಳ ಬಗ್ಗೆ ಯಾವುದೇ ರೀತಿಯ ನಿರೀಕ್ಷೆ ಇಲ್ಲ.ನಮ್ಮ ಬೇಡಿಕೆಯನ್ನ ಗೌರವಯುತವಾಗಿ ಕೇಂದ್ರ ಸರ್ಕಾರ ಪರಿಗಣಿಸಬೇಕು.ರಾಜ್ಯದ ಜನತೆಯ ತೆರಿಗೆಯನ್ನ ದೊಡ್ಡ ಮಟ್ಟದಲ್ಲಿ ಪಡೆಯುತ್ತೆ.ಆದರು ನೋಡೊಣ ಈ ಬಾರಿ ಸಿಗುತ್ತ ಅನ್ನೋದನ್ನ ಕಾದುನೋಡಬೇಕು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments