Site icon PowerTV

ಕೇಂದ್ರ ಬಜೆಟ್; ರಾಮಲಿಂಗಾರೆಡ್ಡಿ ಕಿಡಿ

ಬೆಂಗಳೂರು: ಕೇಂದ್ರ ಬಜೆಟ್​ ಮಂಡನೆ ನಂತರ ಯಥಾಪ್ರಕಾರ ಬಿಜೆಪಿ ಮುಖಂಡರು ಅದ್ಭುತ ಎಂದು ಸ್ವಾಗತಿಸಿದರೆ, ಪ್ರತಿಪಕ್ಷಗಳು ಇದೊಂದು ಡಬ್ಬಾ ಬಜೆಟ್ ಎಂದು ಕಿಡಿಕಾರಿದ್ದಾರೆ. ಹೀಗೆ ಕೇಂದ್ರ ಬಜೆಟ್ ಬಗ್ಗೆ ಕರ್ನಾಟಕದ ಕೆಪಿಸಿಸಿ ಕಾರ್ಯಾದ್ಯಕ್ಷ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.

ಈ ಬಜೆಟ್​ನಲ್ಲಿ ತೆರಿಗೆ ಮುಂದುವರೆಸಲಾಗಿದೆ. ಇದರಿಂದ ಜನರಿಗೆ ಮತ್ತಷ್ಟು ಸಂಕಷ್ಟವಾಗಲಿದೆ. ಈ ಬಾರಿ ಜನಸಾಮಾನ್ಯರಿಗೆ ಏನಾದರೂ ಕೊಡುಗೆ ಸಿಗುತ್ತೆ ಎಂಬ ನಿರೀಕ್ಷೆಯಿತ್ತು. 8 ಲಕ್ಷ ಕೋಟಿ ದೊಡ್ಡವರ ಸಾಲ ಮನ್ನಾ ಮಾಡಿದ್ದಾರೆ. ರೈತರು ಮತ್ತು ಬಡವರಿಗೆ ಹೊಸ ಕಾರ್ಯಕ್ರಮವಿಲ್ಲ. ಶ್ರೀಮಂತರ ಆದಾಯ ತೆರಿಗೆ ಕಡಿತ ಮಾಡಲಾಗಿದೆ. ಬಡವರ ಮೇಲೆ ತೆರಿಗೆ ಭಾರ ಮುಂದುವರೆಸಿದ್ದಾರೆ ಎಂದು ಕೇಂದ್ರ ಬಜೆಟ್ ಬಗ್ಗೆ ರಾಮಲಿಂಗಾರೆಡ್ಡಿ ಕಿಡಿ ಕಾರಿದ್ದಾರೆ.

Exit mobile version