Wednesday, August 27, 2025
Google search engine
HomeUncategorizedಅದ್ಭುತ ಬಜೆಟ್, ಧನ್ಯವಾದ ನಿರ್ಮಲಾ ಮೇಡಂ!-ಸಿ.ಸಿ.ಪಾಟೀಲ್

ಅದ್ಭುತ ಬಜೆಟ್, ಧನ್ಯವಾದ ನಿರ್ಮಲಾ ಮೇಡಂ!-ಸಿ.ಸಿ.ಪಾಟೀಲ್

ಬೆಂಗಳೂರು: ತಮ್ಮದೇ ಸರ್ಕಾರದ ಕೇಂದ್ರ ಬಜೆಟ್ ಬಗ್ಗೆ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಯದ್ವಾತದ್ವಾ ಹೊಗಳಿದ್ದಾರೆ. ಇಂಥ ಅದ್ಭುತ ಬಜೆಟ್ ನೀಡಿದ್ದಕ್ಕೆ ಸಿರ್ಮಲಾ ಸೀತಾರಾಮ್​ರವರಿಗೆ ಧನ್ಯವಾದ ಬೇರೆ ಅರ್ಪಿಸಿದ್ದಾರೆ. ಹಾಗಾದರೆ ಸಿಸಿ ಪಾಟೀಲ್ ಪ್ರಕಾರ ಅವರು ಅಷ್ಟು ಹೊಗಳಲು ಈ ಬಜೆಟ್​ನಲ್ಲಿ ಏನಿದೆ? ಬನ್ನಿ ಅವರು ಹೊಗಳಿಕೆಗೆ ಏನು ಕಾರಣ ಕೊಟ್ಟಿದ್ದಾರೆ ನೋಡೋಣ.

‘ಕೇಂದ್ರ ಬಜೆಟ್​ನಲ್ಲಿ ಆತ್ಮನಿರ್ಭರ್ ಭಾರತ ಅನಾವರಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. 25 ಸಾವಿರ ಕಿಲೋ ಮೀಟರ್‌ ಎನ್‌ಹೆಚ್ ರಸ್ತೆ ವಿಸ್ತರಣೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ನದಿ ಜೋಡಣೆ ಯೋಜನೆಯನ್ನ ನಾವು ಸ್ವಾಗತಿಸುತ್ತೇವೆ. ಉದ್ಯೋಗ ಸೃಷ್ಟಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಶಿರಾಡಿ ಘಾಟ್ ಸಮಸ್ಯೆಗೆ 1,200 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ರಾಜ್ಯ ಸರ್ಕಾರಗಳಿಗೆ ಬಡ್ಡಿ ರಹಿತ ಸಾಲ ಘೋಷಣೆ ಮಾಡಿದ್ದಾರೆ. 5 ಲಕ್ಷ ಕೋಟಿ 50 ವರ್ಷದವರೆಗೆ ಬಡ್ಡಿ ರಹಿತ ಸಾಲ ಕೊಡುತ್ತಿದ್ದಾರೆ. ಇದಕ್ಕಿಂತ ಬಜೆಟ್ ಬೇಕಾ ಅಂತಾರೆ ಸಿ.ಸಿ.ಪಾಟೀಲ್!

RELATED ARTICLES
- Advertisment -
Google search engine

Most Popular

Recent Comments