Sunday, August 24, 2025
Google search engine
HomeUncategorizedಲಕ್ನೋ ಪಶ್ಚಿಮ ಕ್ಷೇತ್ರದಲ್ಲಿ ಸಚಿವೆ ಶೋಭ ಕರಂದ್ಲಾಜೆಯಿಂದ ಚುನಾವಣಾ ಪ್ರಚಾರ

ಲಕ್ನೋ ಪಶ್ಚಿಮ ಕ್ಷೇತ್ರದಲ್ಲಿ ಸಚಿವೆ ಶೋಭ ಕರಂದ್ಲಾಜೆಯಿಂದ ಚುನಾವಣಾ ಪ್ರಚಾರ

ನವದೆಹಲಿ: ಉತ್ತರ ಪ್ರದೇಶದ ಲಕ್ನೋ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉತ್ತರ ಪ್ರದೇಶ ಚುನಾವಣಾ ಸಹ-ಪ್ರಭಾರಿಯಾಗಿರುವ ಶೋಭಾ ಕರಂದ್ಲಾಜೆಯವರು ಮನೆ-ಮನೆಗೆ ತೆರಳಿ ಚುನಾವಣ ಪ್ರಚಾರದಲ್ಲಿ ಭಾಗವಹಿಸಿದರು.

ಉತ್ತರ ಪ್ರದೇಶದಲ್ಲಿ ಮೋದಿ ಜೀ ಮತ್ತು ಯೋಗಿ ಜಿ ನೇತೃತ್ವದ ಡಬಲ್ ಎಂಜಿನ್ ಸರಕಾರ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳಿಗೆ ವೇಗ ತುಂಬಲು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳನ್ನು ಮತ್ತೊಮ್ಮೆ ಹೆಚ್ಚಿನ ಬಹುಮತಗಳೊಂದಿಗೆ ಗೆಲ್ಲಿಸಬೇಕು ಎಂದು ಶೋಭಾ ಕರಂದ್ಲಾಜೆ ಮತದಾರರರಲ್ಲಿ ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಳೆದ ಏಳು ವರ್ಷಗಳಿಂದ ರಾಷ್ಟ್ರೀಯತೆಯ ಪ್ರಬಲ ಅಲೆಯು ಬೀಸುತ್ತಿದೆ. ಇದು ಬಿಜೆಪಿಯ ಗೆಲುವಿಗೆ ಮತ್ತಷ್ಟು ಬಲ ತುಂಬಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments