Monday, August 25, 2025
Google search engine
HomeUncategorizedಯುಪಿ ಚುನಾವಣೆ- ಸಚಿವೆ ಶೋಭಾ ಕರಂದ್ಲಾಜೆಯಿಂದ ಮನೆ ಮನೆ ಪ್ರಚಾರ

ಯುಪಿ ಚುನಾವಣೆ- ಸಚಿವೆ ಶೋಭಾ ಕರಂದ್ಲಾಜೆಯಿಂದ ಮನೆ ಮನೆ ಪ್ರಚಾರ

ನವದೆಹಲಿ: ಮುಂಬರುವ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯ ಹಿನ್ನೆಲೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಉತ್ತರ ಪ್ರದೇಶದ ಲಕ್ನೋ ಕ್ಯಾಂಟ್ ವಿಧಾನಸಭಾ ಕ್ಷೇತ್ರದಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿದರು.

ಬಿಜೆಪಿಯ ಮಹಿಳಾ ಕಾರ್ಯಕರ್ತರೊಂದಿಗೆ ಅವರು ಪಕ್ಷದ ಅಭ್ಯರ್ಥಿಗೆ ಬೆಂಬಲ ಕೋರಿ ಜನರ ಬಳಿ ಮತಕ್ಕಾಗಿ ಮನವಿ ಮಾಡಿದ್ದಾರೆ. ಸಚಿವೆ ಶೋಭ ಕರಂದ್ಲಾಜೆ ಅವರು ಮನೆ-ಮನೆ ಪ್ರಚಾರದ ಜೊತೆಗೆ ಕ್ಷೇತ್ರದ ಜನರು ಮತ್ತು ಮತದಾರರೊಂದಿಗೆ ಸಂವಾದ ನಡೆಸಿ, ಬಿಜೆಪಿಯಲ್ಲಿ ನಂಬಿಕೆ ಉಳಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳಿಗೆ ಬೆಂಬಲವನ್ನು ನೀಡುವಂತೆ ಕೋರುತ್ತಿದ್ದಾರೆ.

ಶೋಭ ಕರಂದ್ಲಾಜೆ ಅವರಿಗೆ ಉತ್ತರ ಪ್ರದೇಶದ ಚುನಾವಣಾ ಸಹ ಪ್ರಭಾರಿ ಜವಾಬ್ದಾರಿ ನೀಡಿರುವ ಕಾರಣ ಹೆಚ್ವಿನ ಸಮಯವನ್ನು ಯುಪಿಯಲ್ಲಿ ಕಳೆಯುತ್ತಿದ್ದಾರೆ. ಅವಧ್ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ಚುನಾವಣೆ ರಣತಂತ್ರಗಳನ್ನು ಹೆಣೆದಿರುವ ಸಚಿವರು ಸಾಕಷ್ಟು ಕ್ಷೇತ್ರಗಳಲ್ಲಿ ಗೆಲ್ಲಬಹುದೆಂಬ ಭರವಸೆ ಸಚಿವರಿಗಿದೆ. ಸಚಿವರಿಗೆ ನೀಡಲಾಗಿರುವ ಚುನಾವಣಾ ಉಸ್ತುವಾರಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಹಾಗಾಗಿ ಲಕ್ನೋದಲ್ಲಿಯೇ ಬಾಡಿಗೆ ಮನೆಯನ್ನು ಖರೀದಿಸಿದ್ದು, ಸಮಯ ವ್ಯರ್ಥವಾಗದಂತೆ ನೋಡಿಕೊಂಡಿದ್ದಾರೆ. ಇದೆಲ್ಲದರ ಫಲದಿಂದ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಮರಳುವ ಭರವಸೆ ವ್ಯಕ್ತಪಡಿಸಿದ್ದಾರೆ.

 

RELATED ARTICLES
- Advertisment -
Google search engine

Most Popular

Recent Comments