Saturday, August 23, 2025
Google search engine
HomeUncategorizedನಕಲಿ ನಂದಿನಿ ತುಪ್ಪದ ಹಾವಳಿ

ನಕಲಿ ನಂದಿನಿ ತುಪ್ಪದ ಹಾವಳಿ

ರಾಜ್ಯ: ನಕಲಿ ತುಪ್ಪ ಪ್ರಕರಣ ಮೈಸೂರು ಬಳಿಕ ಬೆಂಗಳೂರು ನಗರದಲ್ಲಿ ಕಂಡುಬಂದಿದೆ. ನಗರದಲ್ಲಿ ನಕಲಿ ತುಪ್ಪದ ಜಾಲ ಪತ್ತೆ ಹಚ್ಚಿದ ಕೆಎಂಎಫ್ ಅಧಿಕಾರಿಗಳು, ಮೈಸೂರಿನಲ್ಲಿ ಉತ್ಪಾದಿಸಲ್ಪಟ್ಟ ನಕಲಿ ತುಪ್ಪ ಬೆಂಗಳೂರು ಹಾಗೂ ಸುತ್ತಮುತ್ತ ಮಾರಾಟ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಪರಿಶೀಲನೆ ವೇಳೆ ನಕಲಿ ಹಾವಳಿ ಬಯಲಾಗಿದೆ.

ಬೆಂಗಳೂರಿನಲ್ಲಿ ನಕಲಿ ತುಪ್ಪದ ಬಗ್ಗೆ ಸಂಶಯಗೊಂಡಿದ್ದ ಅಧಿಕಾರಿಗಳು, ನಕಲಿ ತುಪ್ಪ ಪತ್ತೆಗಾಗಿ ಹಲವು ತಂಡಗಳನ್ನು ಕೆಎಂಎಫ್ ರಚನೆ ಮಾಡಿದೆ. ಹೀಗಾಗಿ ಬೆಂಗಳೂರು ನಗರ ಸೇರಿ ಹತ್ತಾರು ಕಡೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.ಕೆಎಂಎಫ್ ಮಾರ್ಕೆಟಿಂಗ್ ವಿಭಾಗದ ಅಪರ ನಿರ್ದೇಶಕ ಬಿ. ಪಿ. ಸುರೇಶ್ ತುಪ್ಪ ಸಗಟು ಮಾರಾಟ ಮಾಡುವ ಸಂಸ್ಥೆ ಮೇಲೆ​ ದೂರು ನೀಡಿದ್ದಾರೆ. ಸುರೇಶ್ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿದ ಬಸವನಗುಡಿ ಪೊಲೀಸರು, ಕೇಸ್ ದಾಖಲಿಸಿ ನಕಲಿ ತುಪ್ಪದ ತನಿಖೆ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments