Friday, August 29, 2025
HomeUncategorizedನಟಿ ಅಮೂಲ್ಯ ಅದ್ದೂರಿ ಸೀಮಂತ

ನಟಿ ಅಮೂಲ್ಯ ಅದ್ದೂರಿ ಸೀಮಂತ

ಬೆಂಗಳೂರು : ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಸೀಮಂತ ಶಾಸ್ತ್ರ ಕಾರ್ಯಕ್ರಮ ನೆನ್ನೆ ಅದ್ದೂರಿಯಾಗಿ ನಡೆದಿದೆ. ಐಸು ಎಂದೇ ಖ್ಯಾತಿ ಹೊಂದಿರುವ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ಬಾಲನಟಿ ಆಗಿ ಚಂದನವನದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡು ಬಳಿಕ ಚೆಲುವಿನ ಚಿತ್ತಾರದದಲ್ಲಿ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಎಂಟ್ರಿ ಕೊಟ್ಟು ಯಶ್ವಸಿ ನಾಯಕ ನಟಿ ಆದರು ಬಳಿಕ ಇವರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿ ಗೋಲ್ಡನ್​ ಕ್ವೀನ್​ ಎಂದು ಗುರುತಿಸಿಕೊಂಡರು.

2017ರಲ್ಲಿ ಅಮೂಲ್ಯ ಅವರು ಮನೆಯವರು ನೋಡಿದ ಜಗದೀಶ ಅವರನ್ನು ಮದುವೆಯಾದರು. ಸದ್ಯ ಈ ದಂಪತಿ ಮತ್ತು ಕುಟುಂಬ ವರ್ಗದವರು ಖುಷಿಯಲ್ಲಿದ್ದು ನಿನ್ನೆ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ.

ಅವರು ತಾಯಿ ಆಗುತ್ತಿರುವ ಸುದ್ದಿ ಕೇಳಿ ಅವರ ಫ್ಯಾನ್ಸ್​ ಕೂಡ ಖುಷಿಪಟ್ಟಿದ್ದರು. ಸದ್ಯ ಅವರ ಸೀಮಂತದ ಫೋಟೋ ಅಭಿಮಾನಿಗಳ ವಲಯದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಹಲವು ಗಣ್ಯರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬರುತ್ತಿರುವ ಮಗುವಿಗೆ ಮತ್ತು ಅಮೂಲ್ಯ ಅವರಿಗೂ ಆರ್ಶೀವಾದ ಮಾಡಿ ಶುಭಕೋರಿದರು.

ಅಲ್ಲದೇ ಪತಿ ಜಗದೀಶ್ ಅವರೊಂದಿಗೂ ವಿಭಿನ್ನವಾಗಿ ಚಂದದ ಪೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಅಲ್ಲದೇ ಸೀಮಂತದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಫೋಟೋದಲ್ಲಿ ಅಮೂಲ್ಯ ಕ್ಯೂಟ್ ಆಗಿ ಕಾಣುತ್ತಿದ್ದಾರೆ. ಹೂಗಳಿಂದ ಸಿಂಗಾರಗೊಂಡಿರುವ ವೇದಿಕೆ ಮೇಲೆ ಅಮೂಲ್ಯ ಕುಳಿತುಕೊಂಡಿದ್ದು ಅದರ ಮಧ್ಯೆ ಹೂಗಳಿಂದ ಗಿಳಿಗಳನ್ನು ಮಾಡಿರುವ ಅಲಂಕಾರ ಸಖತ್ ಆಗಿತ್ತು.

RELATED ARTICLES
- Advertisment -
Google search engine

Most Popular

Recent Comments