Friday, August 29, 2025
HomeUncategorizedಚರ್ಮ ಕಾಂತಿಯುತವಾಗಿ ಹೊಳೆಯಲು ತರಕಾರಿಗಳ ಪಾತ್ರ

ಚರ್ಮ ಕಾಂತಿಯುತವಾಗಿ ಹೊಳೆಯಲು ತರಕಾರಿಗಳ ಪಾತ್ರ

ದೇಹದ ಚರ್ಮವು ಚೆನ್ನಾಗಿ ಸದಾ ಕಾಂತಿಯುತವಾಗಿ ಹೊಳೆಯುತ್ತಿರಬೇಕು ಎಂದು ಎಲ್ಲರೂ ಬಯಸುತ್ತಾರೆ.ಇದಕ್ಕಾಗಿಯೇ ಅನೇಕ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ.ಆದರೆ ಇನ್ನು ಕೆಲವರಂತೂ ತಮ್ಮ ದೇಹದ ಚರ್ಮವು ಕಾಂತಿಯುತವಾಗಿ ಕಾಣಲು ಅನೇಕ ರೀತಿಯ ಸೌಂದರ್ಯ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ.ನಾವು ಚೆನ್ನಾಗಿ ತಿಂದರೆ ನಮ್ಮ ದೇಹದ ಚರ್ಮವು ಸದಾ ಕಾಂತಿಯುತವಾಗಿರುತ್ತದೆ ಎಂದು ಹೇಳಲಾಗುತ್ತದೆ. ನಾವು ತಿನ್ನುವ ಆಹಾರ ನಮ್ಮ ದೇಹದ ಚರ್ಮದ ಮೇಲೆ ಅದು ಪ್ರತಿಫಲಿಸುತ್ತದೆ.ಎಂದು ಹೇಳಿದರೆ ಸುಳ್ಳಲ್ಲ.ವೈವಿಧ್ಯಮಯ ತರಕಾರಿ ಮತ್ತು ಹಣ್ಣುಗಳು ನಾವು ಹೆಚ್ಚು ಹೆಚ್ಚು ಸೇವಿಸಿದಷ್ಟೂ ನಮ್ಮ ದೇಹವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

1. ಪಾಲಕ್ :ಪಾಲಕ್ ಸೊಪ್ಪಿನಲ್ಲಿ ಕಾರ್ಬೋಹೈಡ್ರೇಟ್,ಪ್ರೋಟೀನ್ಸ್,ಜೀವಸತ್ವ ಎ,ಸಿ,ಇ,ಕೆ ಸೋಡಿಯಂ,ಪೊಟಾಷಿಯಂ,ಕ್ಯಾಲ್ಸಿಯಂ,ಮೆಗ್ನೀಷಿಯಂ,ಜಿಂಕ್,ರಿಬೋಪ್ಲೇವಿನ್ ಸೇರಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ಪಾಲಕ್ ಸೊಪ್ಪನ್ನು ನಿಯಮಿತವಾಗಿ ತಿನ್ನುವುದರಿಂದ ಮುಖದ ಮೇಲೆ ಮೊಡವೆಗಳು ಮಾಯವಾಗಿ ಮುಖದಲ್ಲಿ ನೆರಿಗೆ ಕಡಿಮೆಯಾಗುತ್ತದೆ.ಹಲೆಯ ಕಲೆಗಳಿಂದ ಕೂಡಿರುವ ತ್ವಚೆಯ ಭಾಗವನ್ನು ಇದು ತಿಳಿಯಾಗಿಸುತ್ತದೆ.ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಇದ್ದು ಇದು ಬಿಸಿಲಿನಿಂದ ಕಪ್ಪಾಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರಲು ನೆರವಾಗುತ್ತದೆ.


2.ಕ್ಯಾರೆಟ್ : ಪ್ರತಿದಿನ ಕ್ಯಾರೆಟ್ ತಿನ್ನುವುದರಿಂದ ಅಥವಾ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಹೊಳೆಯುವ ಚರ್ಮ ನಿಮ್ಮದಾಗುತ್ತದೆ.ಏಕೆಂದರೆ ಕ್ಯಾರೆಟ್ ಟ್ಯಾಕಿನ್​ಗಳನ್ನು ಕಡಿಮೆ ಮಾಡುತ್ತದೆ.ಮತ್ತು ಜೀವಕೋಶಗಳು ಸಾಯುವುದನ್ನು ತಡೆಯುತ್ತದೆ.ಇದರಿಂದಾಗಿ ಚರ್ಮವು ಆರೋಗ್ಯಕರವಾಗಿ ಕಾಣುತ್ತದೆ.ಇದರಲ್ಲಿ ಶೇ 10ರಷ್ಟು ಕಾರ್ಬೋಹೈಡ್ರೇಟ್ ಇದೆ.ಅಷ್ಟೇ ಅಲ್ಲದೇ ವಿಟಮಿನ್ ಎ,ಡಿ,ಇ,ಕೆ ಪಿಪಿ ಆಸ್ಕಾರ್ಬಿಕ್ ಆಸಿಡ್ ,ಸ್ಟೆರಾಲ್ ಮತ್ತು ಲೆಸಿತಿನ್ ಅಂಶವಿದೆ.


3.ಟೊಮ್ಯಾಟೋ :ಆಂಟಿಆಕ್ಸಿಡೆಂಟ್ ಮತ್ತು ಆಂಟಿಟ್ರೋಸಿನೇಸ್ ಗುಣಗಳು ಕಲೆಗಳ ಬಣ್ಣ ಮಾಸುವಂತೆ ಮಾಡುತ್ತದೆ ಮತ್ತು ಚರ್ಮಕ್ಕೆ ಹಾನಿ ಆಗದಂತೆ ತಡೆಯುತ್ತದೆ.
ಇದನ್ನು ನೇರವಾಗಿ ಹಚ್ಚಿಕೊಂಡ ವೇಳೆ ವಯಸ್ಸಾಗುವ ವೇಳೆ ಕಾಣಿಸಿಕೊಳ್ಳುವ ನೆರಿಗೆ,ಗೆರೆಗಳು ಮತ್ತು ಚರ್ಮ ಜೋತು ಬೀಳುವ ಸಮಸ್ಯೆ ನಿವಾರಣೆ ಆಗುತ್ತದೆ. ಇದರಲ್ಲಿ ಇರುವಂತಹ ಲೈಕೋಪೆನೆ ಎನ್ನುವ ಅಂಶವು ಮುಖಕ್ಕೆ ಆಗುವ ಹಾನಿಯನ್ನು ತಡೆಯುತ್ತದೆ.


4.ಎಲೆಕೋಸು :ಎಲೆಕೋಸಿನಲ್ಲಿ ವಿವಿಧ ಖನಿಜಗಳಿವೆ, ಅವು ಹೈಡ್ರೇಟಿಂಗ್ ಮತ್ತು ಆರೋಗ್ಯಕರ ಚರ್ಮಕ್ಕೆ ಉಪಯುಕ್ತವಾಗಿದೆ.ಎಲೆಕೋಸಿನ ನೀರನ್ನು ಚರ್ಮದ ಚಿಕಿತ್ಸೆಗೆ ಬಳಸಬಹುದು.

RELATED ARTICLES
- Advertisment -
Google search engine

Most Popular

Recent Comments