Friday, August 29, 2025
HomeUncategorizedಬಿಸಿ ನೀರು ದೇಹಕ್ಕೆ ಆರೋಗ್ಯಕರನಾ ಹಾಗಾದರೆ ಎಷ್ಟು ಆರೋಗ್ಯಕರ

ಬಿಸಿ ನೀರು ದೇಹಕ್ಕೆ ಆರೋಗ್ಯಕರನಾ ಹಾಗಾದರೆ ಎಷ್ಟು ಆರೋಗ್ಯಕರ

ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವುದು ಸಹಜ . ಸ್ನಾನಕ್ಕೂ ಬಿಸಿನೀರನ್ನು ಬಳಸುತ್ತಾರೆ.ಬಿಸಿನೀರು ನಮ್ಮ ದೇಹಕ್ಕೆ ಶಾಖವನ್ನು ನೀಡುವುದು ಮಾತ್ರವಲ್ಲದೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯೂ ಹೌದು.ರಾತ್ರಿ ಬಿಸಿ ನೀರು ಕುಡಿಯುವುದರಿಂದ ಉತ್ತಮ ನಿದ್ದೆ ಬರುತ್ತದೆ.ತೂಕವನ್ನು ಕಳೆದುಕೊಳ್ಳಲು ಜನರು ಬೆಳಗ್ಗೆ ಬಿಸಿನೀರನ್ನು ಕುಡಿಯುತ್ತಾರೆ.

ಬಿಸಿ ನೀರು ಕುಡಿಯುವುದರಿಂದ ತೂಕ ಇಳಿಯುತ್ತದೆ.ಬಿಸಿ ನೀರು ದೇಹದ ಅಧಿಕ ಕೊಬ್ಬನ್ನು ಕಡಿಮೆ ಮಾಡುತ್ತದೆ.ಸ್ಧೂಲಕಾಯತೆ ಅಥವಾ ಕೊಲೆಸ್ಟ್ರಾಲ್ ಸಮಸ್ಯೆ ಇರುವವರಿಗೆ ಬಿಸಿನೀರು ತುಂಬಾ ಉಪಯುಕ್ತವಾಗಿದೆ.

ಮಾನಸಿಕ ಖಿನ್ನತೆ ಇರುವವರು ಬಿಸಿನೀರನ್ನು ಕುಡಿಯುವುದು ಉತ್ತಮ . ಹಾಗೆನೇ ರಾತ್ರಿ ಮಲಗುವ ಮುನ್ನ ಉಗುರುಬೆಚ್ಚನೆಯ ನೀರನ್ನು ಕುಡಿಯುವುದರಿಂದ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ.ನಾವು ಒತ್ತಡ ಅಥವಾ ನಿದ್ರೆಯ ಸಮಸ್ಯೆಗಳನ್ನು ಹೊಂದಿದ್ದರೆ,ಬಿಸಿನೀರನ್ನು ಕುಡಿಯುವುದು ಸಹಾಯಕವಾಗಿರುತ್ತದೆ.
ಬಿಸಿನೀರು ಕುಡಿಯುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗಿ ಜೀರ್ಣಕ್ರಿಯೆ ಸುಧಾರಿಸುತ್ತದೆ. ಬಿಸಿ ನೀರು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.ಆದ್ದರಿಂದ ಹೊಟ್ಟೆ ಅಥವಾ ಜೀರ್ಣಾಂಗ ವ್ಯವಸ್ಧೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ ಬಿಸಿನೀರಿನ ಬಳಕೆ ತುಂಬಾ ಉಪಯುಕ್ತವಾಗಿದೆ.

RELATED ARTICLES
- Advertisment -
Google search engine

Most Popular

Recent Comments