Friday, August 29, 2025
HomeUncategorizedರಾಜಧಾನಿಯಲ್ಲಿ ಸೋಂಕಿನ ಮಹಾಸ್ಪೋಟ..!

ರಾಜಧಾನಿಯಲ್ಲಿ ಸೋಂಕಿನ ಮಹಾಸ್ಪೋಟ..!

ಬೆಂಗಳೂರು: ರಾಜಧಾನಿಯಲ್ಲಿ ಸೋಂಕಿನ ಮಹಾಸ್ಪೋಟದಿಂದ ಈ ಬಾರಿ ಬಿಬಿಎಂಪಿ ಫುಲ್ ಅಲರ್ಟ್ ಆಗಿದೆ.ಬೆಂಗಳೂರಿನಾದ್ಯಂತ 28067 ಬೆಡ್ ಗಳ‌ ವ್ಯವಸ್ಥೆ ಮಾಡಿಕೊಂಡ ಬಿಬಿಎಂಪಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಮತ್ತು ಖಾಸಗೀ ಆಸ್ಪತ್ರೆಗಳಲ್ಲಿ ಕೋವಿಡ್ ಪೇಶೆಂಟ್ ಗಳಿಗೆ ಬೆಡ್ ರೆಡಿ ಮಾಡಲಾಗಿದೆ.

ಸದ್ಯಕ್ಕೆ, ಬಿಬಿಎಂಪಿ ಒಟ್ಟು 28067 ಹಾಸಿಗೆಗಳನ್ನು ಗುರುತಿಸಿದೆ.ಸರ್ಕಾರಿ ಆಸ್ಪತ್ರೆಗಳಲ್ಲಿ 3237 ಬೆಡ್​ಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 2696 ಹಾಸಿಗೆಗಳು,ಖಾಸಗಿ ಆಸ್ಪತ್ರೆಗಳಲ್ಲಿ 13540 ಬೆಡ್​ಗಳು,ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 8594 ಬೆಡ್​ಗಳನ್ನು ಗುರುತಿಸಿದೆ. ಇವುಗಳಲ್ಲಿ ಸದ್ಯಕ್ಕೆ 6704 ಬೆಡ್ ಗಳು CHBMS  – COVID+ Hospital Bed Management System ಅಡಿಯಲ್ಲಿ ಹಂಚಿಕೆಗಾಗಿ ಲಭ್ಯ ಇದೆ. 637 ಹಾಸಿಗೆಗಳು ಸಿ.ಎಚ್.ಬಿ.ಎಮ್.ಎಸ್ (ಸರ್ಕಾರಿ ಕೋಟಾ) ದಿಂದ ಹಂಚಿಕೆ ಮಾಡಲಾಗಿದೆ.ಬೆಡ್​ಗಳ ನೋಂದಣಿ ಮತ್ತು ಹಂಚಿಕೆಯನ್ನ ಬಿಬಿಎಂಪಿಯಲ್ಲಿ CHBMS ಮೂಲಕ ಮಾಡಲು ನಿರ್ಧಾರ ಮಾಡಲಾಗಿದೆ.

ಬಿಬಿಎಂಪಿ ಅಡಿಯಲ್ಲಿ ಹಂಚಿಕೆ ಮಾಡಲಾದ ಬೆಡ್ ಗಳ ವೆಚ್ಚವನ್ನ ರಾಜ್ಯ ಸರ್ಕಾರವು ಎಸ್.ಎ.ಎಸ್.ಟಿ(ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್) ಮೂಲಕ ಭರಿಸಲಿದೆ.ಖಾಸಗೀ ಕೋಟಾದಲ್ಲಿ CHBMS ನಿರ್ಧಿಷ್ಟ ಸಂಖ್ಯೆಯ ಬೆಡ್ ಗಳನ್ನ ಮಾತ್ರ ನೀಡಲಿವೆ.ಈ‌ ಬಾರಿ ಬೆಡ್ ಬ್ಲಾಕಿಂಗ್ ಅನ್ನು ವಿಕೇಂದ್ರೀಕರಿಸಿರುವ ಪಾಲಿಕೆ,ಎಲ್ಲಾ ಪ್ರಾಥಮಿಕ ಆರೋಗ್ಯಾಧಿಕಾರಿ ವ್ಯಾಪ್ತಿಗಳಲ್ಲಿ 27 ವೈದ್ಯರಿಗೆ ಲಾಗಿನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕಗಳನ್ನೂ ಸರ್ಕಾರವೇ ನಿಯಂತ್ರಣ ಮಾಡಲಿದೆ.ಜನರಲ್ ವಾರ್ಡ್ ದಿನಕ್ಕೆ 10000 ಹೆಚ್.ಡಿ.ಯು ವಾರ್ಡ್ ದಿನಕ್ಕೆ 12000 ಐ.ಸಿ.ಯು ವಾರ್ಡ್ ದಿನಕ್ಕೆ 15000 ಐ.ಸಿ.ಯು-ವೆಂಟಿಲೇಟರ್ ವಾರ್ಡ್ ದಿನಕ್ಕೆ 25000‌ ಸರ್ಕಾರ ದರ ಫಿಕ್ಸ್ ಮಾಡಿಡೆ.

RELATED ARTICLES
- Advertisment -
Google search engine

Most Popular

Recent Comments