Saturday, August 23, 2025
Google search engine
HomeUncategorizedನಮ್ಮ ವೀರ ಯೋಧರನ್ನು ಗೌರವಿಸುವ ದಿನ

ನಮ್ಮ ವೀರ ಯೋಧರನ್ನು ಗೌರವಿಸುವ ದಿನ

ಜನವರಿ 15ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುವುದು.ನಮ್ಮ ವೀರ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ದೇಶದ ಎಲ್ಲಾ ಸೇನಾ ಕಮಾಂಡ್​ಗಳ ಪ್ರಧಾನ ಕಚೇರಿಗಳಲ್ಲಿ ಸೇನಾ ದಿನವನ್ನು ಅಚರಿಸಲಾಗುತ್ತದೆ.

ಸೇನಾ ದಿನ ಆಚರಣೆ ಈ ದಿನ ಸೇನಾ ಕಮಾಂಡ್​ಗಳ ಪ್ರಧಾನ ಕಚೇರಿಗಳಲ್ಲಿ ಪಥಸಂಚಲನ,ವೈಮಾನಿಕ ಕಸರತ್ತು,ಯೋಧರಿಂದ ಬೈಕ್ ಸ್ಟಂಟ್ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಈ ದಿನದಂದು ದೆಹಲಿಯ ಕಂಟೇನ್ಮೆಂಟ್ ಕಾರ್ಯಪ್ಪ ಮೈದಾನದಲ್ಲಿ ಪ್ರಮುಖ ಸೇನಾ ಪರೇಡ್ ನಡೆಸಲಾಗುವುದು.ಹಾಗೆನೇ ಈ ದಿನದಂದು ಹುತಾತ್ಮರಾದ ವೀರ ಯೋಧರಿಗೆ ಹಾಗೂ ಹುತಾತ್ಮರಾದ ವೀರ ಸೇನಾನಿಗಳಿಗೆ ಪ್ರಶಸ್ತಿ ಮೂಲಕ ಗೌರವವನ್ನು ಸೂಚಿಸಲಾಗುವುದು.

ಭಾರತಕ್ಕೆ ಸ್ವತಂತ್ರ ಸಿಕ್ಕ ಬಳಿಕ ಭಾರತದ ಸೇನಾ ಕಮಾಂಡರ್-ಇನ್-ಚೀಫ್ ಅಧಿಕಾರ ವಹಿಸಿಕೊಂದವರೇ ಫೀಲ್ಡ್ ಮಾರ್ಷಲ್ ಕೊದಂಡ ಮಾದಪ್ಪ ಕಾರ್ಯಪ್ಪ.ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಹಾಗೂ ಕೆ ಎಂ ಕಾರ್ಯಪ್ಪ,ಭಾರತೀಯ ಸೇನೆಯ ಪಂಚತಾರಾ ಶ್ರೇಣಿ ಅಧಿಕಾರಿಗಳಾಗಿದ್ದರು. ಭಾರತಕ್ಕೆ ಇವರು ಸಲ್ಲಿಸಿದ ಸೇವೆ ಎಂದೆಂದಿಗೂ ಸ್ಮರಿಸುವಂಥದ್ದು. 1920 ರಿಂದ 1950ರವರೆಗೆ 3 ದಶಕಗಳವರೆಗೆ ಭಾರತ ಮಾತೆಯ ಸೇವೆ ಮಾಡಿದ್ದಾರೆ.1947ರಲ್ಲಿ ಯುನೈಟೆಡ್ ಕಿಂಗ್ಡಮ್​ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ದದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿ ಪಡೆದ ,ಮೊದಲ ಬಾರತಿಯ ಕಾರ್ಯಪ್ಪ ಅವರು ಆಗಿದ್ದರು. ಇವರು ಜನವರಿ 15ರಂದು ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡರು.

ಭಾರತಕ್ಕೆ ಇವರು ಸಲ್ಲಿಸಿದ ಸೇವೆ ಎಂದೆಂದಿಗೂ ಸ್ಮರಿಸುವಂಥದ್ದು. 1920 ರಿಂದ 1950ರವರೆಗೆ3 ದಶಕಗಳವರೆಗೆ ಭಾರತ ಮಾತೆಯ ಸೇವೆ ಮಾಡಿದ್ದಾರೆ. 1947ರಲ್ಲಿ ಯುನೈಟೆಡ್ ಕಿಂಗಡಮ್‌‌ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿ ಪಡೆದ, ಮೊದಲ ಭಾರತೀಯ ಕಾರ್ಯಪ್ಪ ಅವರು ಆಗಿದ್ದಾರೆ. ಇವರು ಜನವರಿ 15ರಂದು ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡರು.

 

 

 

RELATED ARTICLES
- Advertisment -
Google search engine

Most Popular

Recent Comments