ಬೆಂಗಳೂರು : ರಾಜಧಾನಿಯಲ್ಲಿ ಹಾಸ್ಟೆಲ್, ಪಿಜಿಗಳು ಕ್ಲೋಸ್ ಆಗುತ್ತೋ.? ಕಾಲೇಜು, ಹಾಸ್ಟೆಲ್, ಪಿಜಿಗಳಲ್ಲಿ ಮಿತಿ ಮೀರಿದ ಸೋಂಕಿನ ಪ್ರಕರಣದಿಂದಾಗಿ ಅಗತ್ಯ ಕ್ರಮಗಳಿಗೆ ಪಾಲಿಕೆ ಮುಂದಾಗಿದೆ.
ನರ್ಸಿಂಗ್ ಕಾಲೇಜು, ಹಾಸ್ಟೆಲ್, ಪಿಜಿಗಳಿಗೂ ಆವರಿಸಿದ ಸೋಂಕು, ಅಗತ್ಯ ಕ್ರಮಗಳನ್ನ ಕೈಗೊಳ್ಳುವಂತೆ ವಲಯವಾರು ಜಂಟಿ ಆಯುಕ್ತರಿಗೆ ಬಿಬಿಎಂಪಿ ಸೂಚನೆಯನ್ನು ನೀಡಕಾಗಿದೆ.
ಸೋಂಕು ಹೆಚ್ಚಾದರೆ ಕಾಲೇಜು, ಹಾಸ್ಟೆಲ್, ಪಿಜಿಗಳನ್ನ ಮುಚ್ಚಿಸಲು ಸೂಚನೆಯನ್ನು ನೀಡಲಾಗಿದೆ. ಸೋಂಕು ಕಾಣಿಸಿಕೊಂಡ ಕಾಲೇಜು, ಹಾಸ್ಟೆಲ್, ಪಿಜಿಗಳಲ್ಲಿ ಪ್ರತಿಯೊಬ್ಬರನ್ನೂ ಟೆಸ್ಟ್ ಗೆ ಒಳಪಡಿಸಲು ಆದೇಶ ನೀಡಲಾಗಿದ್ದು, ‘ವ್ಯಾಕ್ಸಿನ್ ತೆಗೆದುಕೊಂಡಿದ್ದಾರಾ ಎಂಬ ಬಗ್ಗೆ ಪರಿಶೀಲಿಸಲು ಸೂಚನೆಯನ್ನು ನೀಡಿದ್ದಾರೆ.


